ಮೋದಿ ನೇತೃತ್ವದ ಕೇಂದ್ರದ ಕೃಷಿ ನೀತಿಗಳು ರೈತ ಪರವಿಲ್ಲ: ಕೆಸಿಆರ್‌

ಹೈದರಾಬಾದ್‌, ಏಪ್ರಿಲ್‌ 20: ಕೇಂದ್ರದ ಕೃಷಿ ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು ಕೇಂದ್ರ ಸರಕಾರದ ಕೃಷಿ ನೀತಿಗಳು ಭಾರತದ ದೇಶದ ಕೃಷಿ ಅಭಿವೃದ್ಧಿಯಲ್ಲಿ ಹಿನ್ನಡೆಯನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ತೆಲಂಗಾಣ ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ ಕೆಸಿಆರ್‌, ಭಾರತದ ಕೃಷಿ ಕುರಿತು ಕೇಂದ್ರದ ಕೃಷಿ ಕ್ಷೇತ್ರಗಳ ಕುರಿತಾದ ನೀತಿಗಳು ಹಾಗೂ ರೈತರಿಗೆ ಇರುವ ಸಮಸ್ಯೆಗಳನ್ನು ಗಮನಿಸಿದರು. ಈ ವೇಳೆ ಕೇಂದ್ರ ಕೃಷಿ ನೀತಿಗಳು ಹಾಗೂ ಕೃಷಿ ಯೋಜನೆಗಳು ಕೃಷಿ ಬೆಳವಣಿಯಲ್ಲಿ ಹಿನ್ನಡೆಯನ್ನು ನೀಡಲಿವೆ ಹಾಗಾಗಿ ತಮ್ಮ ನೇತೃತ್ವದ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಹಾಗೂ ರೈತರಿಗೆ ಹಲವಾರು ಯೋಜನೆಗಳನ್ನು ಬಲಪಡಿಸುವ ಗುರಿ ಹೊಂದಿದ್ದು, ರೈತರ ಪರವಾಗಿ ಕೆಲಸ ಮಾಡಿ ರಾಜ್ಯ ಕೃಷಿ ಕ್ಷೇತ್ರವನ್ನು ಬಲ ಪಡಿಸಬೇಕಾಗಿದೆ.

ಈ ಕುರಿತು ರಾಜ್ಯ ಕೃಷಿ ಇಲಾಖೆಯು ರೈತರಿಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದು, ಸರ್ಕಾರದಲ್ಲಿ ಕೃಷಿಪರ ಯೋಜನೆಗಳು ಮುಂದುವರಿಯಲಿವೆ ಎಂದು ತಿಳಿಸಿದ ಕೆಸಿಆರ್, ರಾಜ್ಯ ಕೃಷಿ ಇಲಾಖೆ ತನ್ನ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಸಂದೇಶ ಸಾರಿದರು.

CM KCR conducts high-level review after unhappiness over regressive farm policies by Centre

ಮೋದಿ ನೇತೃತ್ವದ ಕೇಂದ್ರ ಸರಕಾರದ ಕೃಷಿ ಯೋಜನೆಗಳ ನೀತಿಗಳು ಅವ್ಯವಸ್ಥಿತವಾಗಿದ್ದು ಕೃಷಿಗಾರಿಕೆ ಹಾಗೂ ರೈತರು ಕೃಷಿ ಮಾಡಲು ಹಿನ್ನಡೆಯನ್ನುಂಟು ಮಾಡುತ್ತದೆ. ದೇಶದ ಕೃಷಿ ಕ್ಷೇತ್ರ ಉತ್ಪಾದನೆ ಕಡಿಮೆಯಾದರೆ ಇದು ರೈತರ ಹಾಗೂ ಕೃಷಿ ಕ್ಷೇತ್ರದ ದುರದೃಷ್ಟಕರ ಎಂದು ಕೇಂದ್ರ ವಿರುದ್ಧ ಕೆಸಿಆರ್‌ ಗುಡುಗಿದರು.

CM KCR conducts high-level review after unhappiness over regressive farm policies by Centre

Recommended Video

      RCB ಯ ಬೌಲಿಂಗ್ ಮತ್ತು ಬ್ಯಾಟಿಂಗ್ ದಾಳಿಗೆ ಲಕ್ನೋ ಧೂಳೀಪಟ | Oneindia Kannada

      ತೆಲಂಗಾಣದಲ್ಲಿ ಕೃಷಿ ಕ್ಷೇತ್ರ ಬಲವರ್ಧನೆಗಾಗಿ ರಾಜ್ಯ ಸರ್ಕಾರ ಕೃಷಿ ಯೋಜನೆಗಳನ್ನು ಹಾಕಿಕೊಂಡಿದ್ದು ಕೃಷಿ ಅಭಿವೃದ್ಧಿ ಪಡಿಸಲು ಸರ್ಕಾರ ಶ್ರಮವಹಿಸಲಿದೆ. ತೆಲಂಗಾಣ ರೈತರ ಕಲ್ಯಾಣಕ್ಕಾಗಿ ಕ್ರಿಯಾ ಯೋಜನೆಗಳನ್ನು ಮತ್ತಷ್ಟು ಬಲಪಡಿಸಲು ತೆಲಂಗಾಣ ಸರ್ಕಾರದ ಪ್ರಯತ್ನವನ್ನು ಮುಂದುವರಿಸಲಾಗುವುದು ಎಂದು ಕೆಸಿಆರ್‌ ಭರವಸೆ ವ್ಯಕ್ತಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+