• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರವಾಸಿ ತಾಣ ಚಾರ್ ಮಿನಾರ್ ನಲ್ಲಿ ಚಾರ್ ಮಂದಿಯೂ ಇಲ್ಲ!

|
Google Oneindia Kannada News

ಹೈದ್ರಾಬಾದ್, ಜುಲೈ.06: ಕೊರೊನಾವೈರಸ್ ಸೋಂಕು ಹರಡುವಿಕೆ ಅಟ್ಟಹಾಸದ ನಡುವೆಯೇ ತೆಲಂಗಾಣದ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗಾಗಿ ಪುನಾರಂಭಿಸಲಾಗಿದೆ. ಸೋಮವಾರದಿಂದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಪುನಾರಂಭಗೊಂಡಿದೆ.

ಹೈದ್ರಾಬಾದ್ ನಲ್ಲಿರುವ ಚಾರ್ ಮಿನಾರ್ ಹಾಗೂ ಗೋಲ್ಕೊಂಡದಲ್ಲಿರುವ ಕೆಂಪು ಕೋಟೆಗಳನ್ನು ಪ್ರವಾಸಿಗರ ಭೇಟಿಗೆ ಮುಕ್ತಗೊಳಿಸಲಾಗಿದೆ. ರಾಜ್ಯದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಜನರಲ್ಲಿ ಆತಂಕ ಇನ್ನೂ ಮರೆಯಾಗಿಲ್ಲ.

ಕೊರೊನಾ ಎಫೆಕ್ಟ್‌:ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮನೆ ಮಾರಾಟ ಶೇಕಡಾ 81ರಷ್ಟು ಕುಸಿತಕೊರೊನಾ ಎಫೆಕ್ಟ್‌:ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮನೆ ಮಾರಾಟ ಶೇಕಡಾ 81ರಷ್ಟು ಕುಸಿತ

ಪ್ರವಾಸಿ ತಾಣಗಳನ್ನು ಪುನಾರಂಭಗೊಳಿಸಿದರೂ ಸಹ ಪ್ರವಾಸಿಗರು ಆಗಮಿಸುತ್ತಿಲ್ಲ ಎಂದು ಚಾರ್ ಮಿನಾರ್ ಬಳಿ ವ್ಯಾಪಾರಿ ಮೊಹಮ್ಮದ್ ಜಾಫರ್ ತಿಳಿಸಿದ್ದಾರೆ. ಕೊರೊನಾವೈರಸ್ ನಿಂದಾಗಿ ಜನರು ಚಾರ್ ಮಿನಾರ್ ಗೆ ಭೇಟಿ ನೀಡುತ್ತಿಲ್ಲ. ಈ ಸಮಯವು ಎಲ್ಲರಿಗೂ ಆತಂಕಕಾರಿ ಮತ್ತು ಅಪಾಯಕಾರಿಯಾಗಿದೆ ಎಂದು ಜಾಫರ್ ಹೇಳಿದ್ದಾರೆ.

ತೆಲಂಗಾಣದಲ್ಲಿ 1831 ಮಂದಿಗೆ ಕೊರೊನಾವೈರಸ್ ಸೋಂಕು:

ಕೊರೊನಾವೈರಸ್ ಸೋಂಕಿಗೆ ತೆಲಂಗಾಣಕ್ಕೆ ತೆಲಂಗಾಣ ತತ್ತರಿಸಿ ಹೋಗಿದೆ ಎನ್ನುವುದಕ್ಕೆ ಕೊವಿಡ್-19 ಸೋಂಕಿತರ ಸಂಖ್ಯೆಯೇ ಸಾಕ್ಷಿಯಾಗಿದೆ. ಕಳೆದ 24 ಗಂಟೆಗಳಲ್ಲಿ ತೆಲಂಗಾಣದಲ್ಲಿ 1831 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 25733ಕ್ಕೆ ಏರಿಕೆಯಾಗಿದೆ. ಒಂದೇ ದಿನ 11 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, ಒಟ್ಟು ಸಾವಿನ ಸಂಖ್ಯೆ 306ಕ್ಕೆ ಏರಿಕೆಯಾಗಿದೆ. ಇನ್ನು, 14781 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, ರಾಜ್ಯದಲ್ಲಿ 10646 ಸಕ್ರಿಯ ಪ್ರಕರಣಗಳಿವೆ.

English summary
Hyderabad's Charminar And Golconda Fort Reopen For The Public From Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X