• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಸಿಟಿವಿ ದೃಶ್ಯ: ತಡರಾತ್ರಿಯಲ್ಲಿ ಆಟಗಾರ್ತಿ ಎಳೆದಾಡಿದ ಕೋಚ್

By Mahesh
|

ಹೈದರಾಬಾದ್, ಜ.14: ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಮಾಧ್ಯಮಗಳಿಂದ ಬಹಿರಂಗವಾಗಿದೆ. ತಡರಾತ್ರಿ ವೇಳೆ ಟೇಬಲ್ ಟೆನಿಸ್ ತಂಡದ ಆಟಗಾರ್ತಿಯನ್ನು ಕೋಚ್ ಎಳೆದಾಡುವ ದೃಶ್ಯ ಹೊರ ಬಿದ್ದಿದೆ.

ಆಂಧ್ರಪ್ರದೇಶದಲ್ಲಿ ಟೇಬಲ್ ಟೆನ್ನಿಸ್ ಕೋಚ್ ಮಹಿಳಾ ಕ್ರೀಡಾಪಟುವಿನ ಜತೆ ಹೋಟೆಲ್ ರೂಂನ ಹೊರಗೆ ಮೈ ಮುಟ್ಟಿ ಎಳೆದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಡರಾತ್ರಿ ಕೋಚ್‌ನ ರೂಂನಿಂದ ಇನ್ನು ಕೆಲವು ಹುಡುಗಿಯರು ಹೊರಗೆ ಬರುತ್ತಿರುವುದು ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ವಿವಾದ ಸೃಷ್ಟಿಸಿವೆ. [ಲಂಡನ್ ಥಿಯೇಟರ್ ನಲ್ಲಿ ಭೂತ ಕಾಣಿಸ್ತು!]

ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದ 76ನೇ ನ್ಯಾಷನಲ್ ಕೆಡೆಟ್ ಹಾಗೂ ಸಬ್ ಜ್ಯೂನಿಯರ್ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಗಮಿಸಿದ ಚತ್ತೀಸ್‌ಗಢದ ಜ್ಯೂನಿಯರ್ ಟೀಂನ ಸದಸ್ಯೆ ಮತ್ತು ಕೋಚ್ ಈ ರೀತಿ ಎಳೆದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಡಿ.26ರಂದು ನಡೆದ ಈ ಘಟನೆಯ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

ಸಿಸಿಟಿವಿ ದೃಶ್ಯಾವಳಿಗಳು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಕ್ರಮ ಕೈಗೊಂಡಿರುವ ಛತ್ತೀಸ್ ಗಢ ಟೇಬಲ್ ಟೆನಿಸ್ ಅಸೋಸಿಯೇಷನ್ಸ್ ಮಹಿಳಾ ಕ್ರೀಡಾಪಟು ಹಾಗೂ ತರಬೇತುದಾರರನ್ನು ವಜಾಗೊಳಿಸಿದ್ದಾರೆ. ಮುಂಬರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಇಬ್ಬರು ಪಾಲ್ಗೊಳ್ಳುವಂತಿಲ್ಲ. ಸಿಸಿಟಿವಿ ದೃಶ್ಯ ವಿವಾದ ಸೃಷ್ಟಿಸಿದ ಕೂಡಲೇ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಶುಕ್ಲಾ ರಾಜಿನಾಮೆ ನೀಡಿದ್ದಾರೆ.

ಹೋಟೆಲ್ ರೂಮಿನೊಳಗೆ ಏನು ನಡೆಯಿತು. ಮಹಿಳಾ ಆಟಗಾರ್ತಿಯನ್ನು ಕೋಚ್ ಏಕೆ ಎಳೆದಾಡುತ್ತಿದ್ದ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ. ಅದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಅಸೋಸಿಯೇಷನ್ ಅಧ್ಯಕ್ಷ ಶರದ್ ಶುಕ್ಲಾ ಕೋಚ್ ಮತ್ತು ಕ್ರೀಡಾಪಟು ಮೊಬೈಲ್ ಫೋನ್‌ಗಾಗಿ ಜಗಳವಾಡುತ್ತಿರುವುದು ಸಿಸಿಟಿವಿ ದೃಶ್ಯದಿಂದ ಕಂಡು ಬಂದಿದೆ. ಬೇರೆ ಏನು ಇಲ್ಲ ಎಂದಿದ್ದಾರೆ. [ಬೆಂಗಳೂರನ್ನು ಕಾಯಲಿವೆ 3,500 ಸಿಸಿ ಕ್ಯಾಮರಾಗಳು]

ಅದರೆ, ಸಿಸಿಟಿವಿ ದೃಶ್ಯಾವಳಿ ವಿವಾದ ಇನ್ನೂ ತಣ್ಣಗಾಗಿಲ್ಲ. ಛತ್ತೀಸ್ ಗಢ ತಂಡಕ್ಕೆ 19ರ ಹರೆಯ ಕೋಚ್ ನೇಮಕಾತಿ ಮಾಡಿದ್ದರೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. (ಏಜೆನ್ಸೀಸ್)

ವಿವಾದ ಸೃಷ್ಟಿಸಿರುವ ಸಿಸಿಟಿವಿ ದೃಶ್ಯಾವಳಿ ಹಾಗೂ ಶರದ್ ಶುಕ್ಲಾ ಪ್ರತಿಕ್ರಿಯೆ ಇರುವ ವಿಡಿಯೋ ನೋಡಿ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a shocking incident, CCTV footage shows a coach of Chhattisgarh table tennis team dragging his female team member out of her room and later some girls are seen coming out of his room late at night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more