ಬೇಲ್ ಗೆ ಡೀಲ್ ಪ್ರಕರಣದ ಆರೋಪಿ ನ್ಯಾ. ಪ್ರಭಾಕರ್ ರಾವ್ ಸಾವು

Posted By:
Subscribe to Oneindia Kannada

ಹೈದರಾಬಾದ್, ಜ. 18: ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಕೊಡಿಸಲು ಲಂಚ ತೆಗೆದುಕೊಂಡ ಆರೋಪ ಹೊತ್ತಿದ್ದ ಮಾಜಿ ನಿವೃತ್ತ ನ್ಯಾಯಮೂರ್ತಿ ಪ್ರಭಾಕರ್ ರಾವ್ ಅವರು ಮೃತಪಟ್ಟಿದ್ದಾರೆ. ಪ್ರಭಾಕರ್ ರಾವ್ ಅವರ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯತೊಡಗಿದೆ.

ಪೂರ್ವ ಮರೆಡ್ಪಲ್ಲಿಯ ಸ್ವಂತ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಪ್ರಭಾಕರ್ ರಾವ್ ಅವರು ಭಾನುವಾರ ಹಠಾತ್ ಸಾವನ್ನಪ್ಪಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಈ ಬಗ್ಗೆ ಶಂಕೆ ಪೊಲೀಸರು ವ್ಯಕ್ತಪಡಿಸಿ, ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಅಟಾಪ್ಸಿ ವರದಿ ಬಂದ ಮೇಲೆ ಹೆಚ್ಚಿನ ವಿವರಗಳು ತಿಳಿಯಲಿದೆ ಎಂದಿದ್ದಾರೆ.[ಜೈಲಿನಿಂದ ಬೇಲ್ ತನಕ: ಗಾಲಿ ಜನಾರ್ದನ ರೆಡ್ಡಿ ಟೈಮ್ ಲೈನ್]

Cash-for-bail scam accused former Judge D Prabhakar Rao death mystery

ಶ್ರೀಕಾಕುಳಂನ ಕೌಟುಂಬಿಕ ನ್ಯಾಯಾಲಯದ ಜಡ್ಜ್ ಆಗಿದ್ದಾಗ ಪ್ರಭಾಕರ್ ರಾವ್ ಅವರನ್ನು ಎಸಿಬಿ ತಂಡ ಬಂಧಿಸಿತ್ತು. ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡಲು ಲಂಚ ಪಡೆದ ಆರೋಪವನ್ನು ಪ್ರಭಾಕರ್ ರಾವ್ ಹೊತ್ತಿದ್ದರು. ಮತ್ತೊಬ್ಬ ಜಡ್ಜ್ ಕೆ ಲಕ್ಷ್ಮಿನರಸಿಂಹ ರಾವ್ ಹಾಗೂ ಪ್ರಭಾಕರ್ ರಾವ್ ಅವರನ್ನು ಜುಲೈ 2012ರಲ್ಲಿ ಕರ್ತವ್ಯದಿಂದ ಅಮಾನತುಗೊಳಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cash-for-bail scam accused former Judge D Prabhakar Rao death mystery. Former judge D. Prabhakar Rao who was an accused in Gali Janardhan Reddy's cash-for-bail scam died on Sunday under mysterious circumstances at his residence in Hyderabad.
Please Wait while comments are loading...