ಬಿಜೆಪಿ ಸಿನಿಮಾಗಳನ್ನು ಅಜೆಂಡಾ ಮಾಡಿಕೊಂಡು ಯುವಕರ ದಾರಿ ತಪ್ಪಿಸುತ್ತಿದೆ: ಕೆಟಿಆರ್
ಹೈದರಾಬಾದ್, ಏಪ್ರಿಲ್ 26: ದೇಶದಲ್ಲಿ ಕೋಮುವಾದ ಹಾಗೂ ಗಲಭೆಗಳನ್ನು ಸೃಷ್ಟಿ ಮಾಡಲು ಯುವಕರನ್ನು ಗುರಿಯಾಗಿಸಿಕೊಳ್ಳಲಾಗಿದೆ ಹಾಗೂ ಕೋಮುವಾದವನ್ನು ಬೆರಸಲು ಬಿಜೆಪಿಯು ಸಿನಿಮಾಗಳನ್ನು ಸಾಧನಗಳನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ತೆಲಂಗಾಣ ಸಚಿವ ಕೆಟಿ ರಾಮ್‌ರಾವ್ ಬಿಜೆಪಿಯ ವಿರುದ್ಧ ಆರೋಪಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸಚಿವ ಕೆಟಿ ರಾಮ್‌ರಾವ್, ಬಿಜೆಪಿ ಪಕ್ಷ ದೇಶದ ಯುವಕರನ್ನು ಬಳಸಿಕೊಳ್ಳುತ್ತಿದೆ. ತನ್ನ ಕಾರ್ಯಸೂಚಿಯನ್ನು ಹೆಚ್ಚಿಸುವ ಮಾರ್ಗವಾಗಿ ಬಿಜೆಪಿಯು ಸಿನಿಮಾ ಸಾಧನಗಳನ್ನಾಗಿ ಬಳಸಿಕೊಂಡು ಯುವಕರಿಗೂ ತಪ್ಪು ದಾರಿ ತೋರಿಸುತ್ತಿದೆ. 2019ರಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಅಭಿನಯದ ಉರಿ ಮತ್ತು ವಿವೇಕ್ ಅಗ್ನಿಹೋತ್ರಿ ಅವರ ಇತ್ತೀಚಿನ ಕಾಶ್ಮೀರಿ ಫೈಲ್ಸ್ ಹಾಗೂ ಮುಂಬರುವ ಇಂತಹ ಚಿತ್ರಗಳನ್ನು ಸಾಧನಗಳನ್ನಾಗಿ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಕಾಶ್ಮೀರ ಫೈಲ್ಸ್ ಈ ಚಲನಚಿತ್ರವನ್ನು ಬಿಜೆಪಿ ಸರ್ಕಾರ ಬೆಂಬಲ ನೀಡಿದೆ ಹಾಗೂ ಬಿಜೆಪಿ ನೇತೃತ್ವದ ಸರ್ಕಾರ ಇರುವ ರಾಜ್ಯಗಳಲ್ಲಿ ತೆರೆಗೆ ಮುಕ್ತಗೊಳಿಸಿದ್ದವು. ಆದರೆ, ಚಿತ್ರಮಂದಿರಗಳಲ್ಲಿ ಮುಸ್ಲಿಂಮರ ವಿರುದ್ಧ ದ್ವೇಷದ ಭಾಷಣಗಳು ಹಾಗೂ ವಿಡಿಯೋಗಳು ಹೊರಹೊಮ್ಮಿದ್ದವು. ಇಂತಹ ಸಂದರ್ಭದಲ್ಲಿ ಯುವಕರರನ್ನು ಬಳಸಿಕೊಂಡು ದ್ವೇಷದ ಭಾವನೆ ಬಿತ್ತಲಾಯಿತು ಎಂದರು.

ಇನ್ನು ಮುಂಬರುವ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾವನ್ನು ಕೂಡಾ ಬಿಜೆಪಿ ಅಜೆಂಡಾ ಮಾಡಿಕೊಂಡಿದೆ ಎಂಬ ಹೇಳಿಕೆ ನೀಡಿದ್ದ ಸಚಿವ ಕೆಟಿ ರಾಮ್‌ರಾವ್ ಅವರ ಖಾಸಗಿ ಮಾಧ್ಯಮದಲ್ಲಿ ಪ್ರಸಾರವಾದ ಈ ವಿಚಾರಗಳನ್ನು ಹೇಳಿಕೊಂಡಿರುವ ಸಚಿವರ ಸಂದರ್ಶನವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು ಇದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.












Click it and Unblock the Notifications