ಚುನಾವಣೆಗೆ ಮುನ್ನ ಯುದ್ದ ನಡೆಯುತ್ತೆ ಎಂದು 2ವರ್ಷದ ಹಿಂದೆ ತಿಳಿದಿತ್ತು

ಹೈದರಬಾದ್, ಮಾರ್ಚ್ 1: ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಆಂಧ್ರ ಪ್ರದೇಶದಲ್ಲಿ ಸಕ್ರಿಯವಾಗಿರುವ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಗುರುವಾರ (ಫೆ 28) ಕಡಪಾದಲ್ಲಿ ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಚಿರಂಜೀವಿಯ ಸಹೋದರರೂ ಆಗಿರುವ ಪವನ್ ಕಲ್ಯಾಣ್, ಲೋಕಸಭಾ ಚುನಾವಣೆಯ ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ನಡೆಯುತ್ತದೆ ಎಂದು ಎರಡು ವರ್ಷದ ಹಿಂದೆಯೇ ರಾಜಕೀಯ ತಜ್ಞರು ಹೇಳಿದ್ದರು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ದೇಶಾಭಿಮಾನ ಯಾರ ಸ್ವತ್ತೂ ಅಲ್ಲ, ನಮಗೂ ಹತ್ತು ಪಟ್ಟು ಹೆಚ್ಚು ಅಭಿಮಾನ ದೇಶದ ಮೇಲಿದೆ ಎಂದು ವಾಗ್ದಾಳಿ ನಡೆಸಿರುವ ಪವನ್ ಕಲ್ಯಾಣ್, ನಮ್ಮ ದೇಶ ಯಾವ ಪರಿಸ್ಥಿತಿಯಲ್ಲಿ ಇದೆ ಎನ್ನುವ ಬಗ್ಗೆ ನೀವೇ ಅರ್ಥ ಮಾಡಿಕೊಳ್ಳಿ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.

BJP told me there will be war before Lok Sabha polls, said Jana Sena chief Pawan Kalyan: Report

ತಮ್ಮ ರಾಜಕೀಯ ಜೀವನದ ಆರಂಭದಲ್ಲಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಪವನ್ ಕಲ್ಯಾಣ್ ಬದಲಾದ ಸನ್ನಿವೇಶದಲ್ಲಿ ಬಿಜೆಪಿಯಿಂದ ದೂರವಾಗಿದ್ದಾರೆ. ಯುದ್ಧ ಎನ್ನುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ, ಅಲ್ಲದೇ ಇದರಿಂದ ಎರಡೂ ದೇಶಗಳಿಗೂ ಅಪಾರ ಹಾನಿ ಉಂಟಾಗುತ್ತದೆ ಎಂದು ಪವನ್ ಕಲ್ಯಾಣ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಆಂಧ್ರದಲ್ಲಿ ಯಾವುದೇ ರೀತಿಯ ಕೋಮುವಾದ ಬಿತ್ತುವ ಕೆಲಸವನ್ನು ಯಾರೇ ಮಾಡಲಿ, ನನ್ನ ಪಕ್ಷದ ಕಾರ್ಯಕರ್ತರು ಅದನ್ನು ವಿಫಲಗೊಳಿಸುತ್ತಾರೆ ಎನ್ನುವ ಎಚ್ಚರಿಕೆಯನ್ನು ಕಡಪಾ ರ‍್ಯಾಲಿಯಲ್ಲಿ ಪವನ್ ಕಲ್ಯಾಣ್ ನೀಡಿದ್ದಾರೆ.

ಭಾರತದಲ್ಲಿರುವ ಮುಸ್ಲಿಮರು ತಮ್ಮ ದೇಶಭಕ್ತಿಯನ್ನು ಯಾರಿಗೂ ಸಾಬೀತು ಪಡಿಸುವ ಅವಶ್ಯಕತೆ ಇಲ್ಲ, ಎಲ್ಲರಂತೆ ಅವರೂ ಕೂಡಾ ಭಾರತೀಯರು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+