ಪಂಜು ಹಿಡಿದು ಕೊರೊನಾ ಓಡಿಸಲು ಬಂದ ಬಿಜೆಪಿ ಶಾಸಕ

ಹೈದರಾಬಾದ್, ಏಪ್ರಿಲ್ 06: ಕೊರೊನಾ ವೈರಸ್‌ ಓಡಿಸಲು ಹೈದರಾಬಾದ್‌ನ ಶಾಸಕರೊಬ್ಬರು ಪಂಜು ಹಿಡಿದುಕೊಂಡು ಬಂದಿದ್ದರು. ಎಂಎಲ್‌ಎ ಟೈಗರ್ ರಾಜ ಸಿಂಗ್ ತಮ್ಮ ವಿಚಿತ್ರ ಪ್ರತಿಭಟನೆ ಮೂಲಕ ಇದೀಗ ಸುದ್ದಿ ಮಾಡಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ಮನೆಯ ಲೈಟ್‌ಗಳನ್ನು ಆಫ್ ಮಾಡಿ, ದೀಪ, ಮುಂಬತ್ತಿ, ಟಾರ್ಚ್ ಹಾಗೂ ಮೊಬೈಲ್ ಫ್ಲಾಶ್ ಲೈಟ್ ಮೂಲಕ ಬೆಳಕನ್ನು ಚೆಲ್ಲುವಂತೆ ದೇಶದ ಜನರಿಗೆ ಕರೆ ನೀಡಿದ್ದರು. ಇದಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ. ಆದರೆ, ಅಲ್ಲಲ್ಲಿ ಕೆಲವು ಎಡವಟ್ಟುಗಳು ಆಗಿವೆ.

ತೆಲಂಗಾಣದ ಗೋಷಮಹಲ್‌ನಲ್ಲಿ ಅಲ್ಲಿನ ಬಿಜೆಪಿ ಶಾಸಕರೇ ದೀಪ ಹಚ್ಚುವ ಬದಲು ಪಂಜು ಹಿಡಿದು ಅವಾಂತರ ಮಾಡಿಕೊಂಡಿದ್ದಾರೆ. ತಮ್ಮ ಕಾರ್ಯಕರ್ತರ ಜೊತೆಗೆ ಪಂಚು ಹಿಡಿದು ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ. ''ಗೋ ಬ್ಯಾಕ್ ಗೋ ಬ್ಯಾಕ್ ಚೀನಾ ವೈರಸ್ ಗೋ ಬ್ಯಾಕ್..'' ಎಂದು ಹೇಳಿ ಕೊರೊನಾ ವಿರುದ್ಧವೇ ಪ್ರತಿಭಟನೆ ಮಾಡಿದ್ದಾರೆ.

BJPs Telangana MLA Did Protest Against Coronavirus

ಎಂಎಲ್‌ಎ ಟೈಗರ್ ರಾಜ ಸಿಂಗ್‌ರ ಈ ಕೆಲಸ ನಗೆಗೀಡು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಬಾಲಿವುಡ್ ನಟಿ ತಾಪ್ಸಿ ಪನ್ನು ಸಹ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರೀ ಟ್ವೀಟ್ ಮಾಡಿದ್ದಾರೆ.

ಪಂಜು ಹಿಡಿದು ಮೆರವಣಿಗೆ ಮಾಡುವುದರ ಜೊತೆಗೆ ಸಾಮಾಜಿಕ ಅಂತರ ಸಹ ಕಾಯ್ದುಕೊಂಡಿಲ್ಲ. ಸಾಕಷ್ಟು ಜನರ ಅಕ್ಕ ಪಕ್ಕ ನಿಂತಿದ್ದಾರೆ. ಹೀಗಾಗಿ, ಟೈಗರ್ ರಾಜ ಸಿಂಗ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಈ ಹಿಂದೆ 'ಗೊ ಬ್ಯಾಕ್ ಕೊರೊನಾ' ಎಂದು ಸಚಿವ ರಾಮದಾಸ್ ಅತ್ವಾಲೆ ಇದೇ ರೀತಿ ಪ್ರತಿಭಟನೆ ಮಾಡಿದ್ದು, ಅದು ಹಾಸ್ಯವಾಗಿ ಜನರಿಗೆ ಕಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+