ಎಟಿಎಂ ಹಂತಕನ ತಲೆಗೆ ಆಂಧ್ರದಲ್ಲೂ ಬಹುಮಾನ

ATM attack
ಹೈದರಾಬಾದ್, ನ. 28 : ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಆರೋಪಿ ಪತ್ತೆಗಾಗಿ ಬೆಂಗಳೂರು ಪೊಲೀಸರು ಒಂದು ಲಕ್ಷ ರೂ.ಬಹುಮಾನ ಘೋಷಿಸಿದ್ದರು. ಸದ್ಯ ಆಂಧ್ರಪ್ರದೇಶದ ಅನಂತಪುರ ಪೊಲೀಸರು ಆರೋಪಿ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ಬೆಂಗಳೂರಿನ ಕಾರ್ಪೋರೇಷನ್ ವೃತ್ತದಲ್ಲಿ ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆದು ಒಂದು ವಾರಗಳು ಕಳೆದಿವೆ. ಆದರೆ, ಇನ್ನೂ ಆರೋಪಿಯ ಸುಳಿವು ಪತ್ತೆಯಾಗಿಲ್ಲ. ಆಂಧ್ರದ ಕದಿರಿ ಹಾಗೂ ಧರ್ಮಾವರಂನಲ್ಲಿನ ಎಟಿಎಂ ಕೇಂದ್ರಗಳಲ್ಲಿ ಇದೇ ರೀತಿ ಪ್ರಕರಣ ನಡೆದ ಬಗ್ಗೆ ವರದಿಯಾಗಿತ್ತು. (ಎಟಿಎಂ ಪ್ರಕರಣ : ಪಾತಕಿ ಆಂಧ್ರದಲ್ಲೂ ಕೊಲೆ ಮಾಡಿದ್ದ)

ಘಟನೆ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ಪೊಲೀಸರ ವಿಶೇಷ ತಂಡ ಅನಂತಪುರ ಪೊಲೀಸರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆದಿತ್ತು. ನಂತರ ಅಲ್ಲಿನ ಪೊಲೀಸರು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ಪರಿಶೀಲಿಸಿ ಅನಂತಪುರದಲ್ಲಿಯೂ ಪೊಲೀಸರು ಸಹ ಆರೋಪಿಗಾಗಿ ಕಾರ್ಯಾಚರ ನಡೆಸಿದ್ದರು. (ಎಟಿಎಂ ಹಲ್ಲೆ : ಆರೋಪಿ ಸುಳಿವಿಗೆ 1 ಲಕ್ಷ ಬಹುಮಾನ )

ಸದ್ಯ ಅನಂತಪುರ ಪೊಲೀಸರು ಸಹ ಆರೋಪಿಯ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ.ಬಹುಮಾನ ಘೋಷಿಸಿದ್ದಾರೆ. ಸದ್ಯ ಆರೋಪಿ ತಲೆಗೆ ಒಟ್ಟು 2 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಬೆಂಗಳೂರು ಮತ್ತು ಅನಂತಪುರ ಪೊಲೀಸರು ಆಂಧ್ರಪ್ರದೇಶದಲ್ಲಿ ಆರೋಪಿ ಸುಳಿವಿಗಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.

ನ.30 ಡೆಡ್ ಲೈನ್ : ಬೆಂಗಳೂರಿನ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ನೇಮಿಸಲು ಬ್ಯಾಂಕ್ ಗಳು ನ.30ರವರೆಗೆ ಕಾಲವಕಾಶ ಕೋರಿವೆ. ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಭೇಟಿ ಮಾಡಿದ್ದ ಬ್ಯಾಂಕ್ ಅಧಿಕಾರಿಗಳು ನ.30ರೊಳಗೆ ಭದ್ರತಾ ಸಿಬ್ಬಂದಿ ನೇಮಿಸುತ್ತೇವೆ ಎಂದು ಭರವಸೆ ನೀಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+