ಬೆಂಗಳೂರು-ಕಡಪ ನಡುವೆ ಏರ್ ಪೆಗಾಸಸ್ ವಿಮಾನ ಸೇವೆ
ಹೈದರಾಬಾದ್, ಜೂ. 02 : ಏರ್ ಪೆಗಾಸಸ್ ಬೆಂಗಳೂರು-ಕಡಪ ನಡುವೆ ವಿಮಾನ ಹಾರಾಟ ನಡೆಸಲು ಸಿದ್ಧವಾಗಿದೆ. ಜೂನ್ 7ರಿಂದ ಕಡಪ ಮತ್ತು ಬೆಂಗಳೂರು ನಡುವೆ ವಿಮಾನದಲ್ಲಿ ಸಂಚರಿಸಬಹುದಾಗಿದೆ. ಕೆಲವು ದಿನಗಳ ಹಿಂದೆ ಸಂಸ್ಥೆ ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚಾರ ಆರಂಭಿಸಿತ್ತು.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಡಪಕ್ಕೆ ಮೊದಲ ವಿಮಾನ ಜೂನ್ 7ರ ಬೆಳಗ್ಗೆ 10.40ಕ್ಕೆ ಹೊರಡಲಿದೆ. ಕಡಪ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಆದ್ದರಿಂದ ವಿಮಾನಯಾನ ಸೇವೆ ಆರಂಭಿಸಲಾಗುತ್ತಿದೆ ಎಂದು ಏರ್ ಪೆಗಾಸಸ್ ತಿಳಿಸಿದೆ. [ಬೆಂಗಳೂರು-ಹುಬ್ಬಳ್ಳಿ ನಡುವೆ ವಿಮಾನ ಸಂಚಾರ]

ವೇಳಾಪಟ್ಟಿ : ಏರ್ ಪೆಗಾಸಸ್ ವಿಮಾನ ಪ್ರತಿದಿನ ಬೆಳಗ್ಗೆ 10.40ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದ್ದು 11.30ಕ್ಕೆ ಕಡಪ ತಲುಪಲಿದೆ. 11.50ಕ್ಕೆ ಕಡಪದಿಂದ ಹೊರಡುವ ವಿಮಾನ 12.35ಕ್ಕೆ ಬೆಂಗಳೂರನ್ನು ತಲುಪಲಿದೆ. [ಟಿಕೆಟ್ ಬುಕ್ ಮಾಡಲು ವಿಳಾಸ]
2015ರ ಏಪ್ರಿಲ್‌ನಲ್ಲಿ ಏರ್ ಪೆಗಾಸಸ್ ಬೆಂಗಳೂರು-ಹುಬ್ಬಳ್ಳಿ ಮತ್ತು ಬೆಂಗಳೂರು-ತಿರುವನಂತಪುರದ ನಡುವೆ ವಿಮಾನ ಸಂಚಾರವನ್ನು ಆರಂಭಿಸಿತ್ತು. 1,600 ರೂ. ದರದಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವೆ ಪ್ರಯಾಣಿಸಬಹುದಾಗಿದೆ.
ಮುಂದಿನ ದಿನಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಿಂದ ಬೆಳಗಾವಿ, ಕೊಚ್ಚಿ, ಚೆನ್ನೈ, ರಾಜಮಂಡ್ರಿ, ಪುದುಚೇರಿ ಮುಂತಾದ ನಗರಗಳಿಗೆ ವಿಮಾನ ಸೇವೆ ಆರಂಭಿಸಲಾಗುತ್ತದೆ ಎಂದು ಏರ್ ಪೆಗಾಸಸ್ ತಿಳಿಸಿದೆ.












Click it and Unblock the Notifications