ಪಾಸ್‌ಪೋರ್ಟ್‌ ಇಲ್ಲದೆ ನುಗ್ಗಿದ ಅತಿಥಿ: ವಿಮಾನ 12 ತಾಸು ಲೇಟು

ಹೈದರಾಬಾದ್, ನವೆಂಬರ್ 12: ಪಾಸ್‌ಪೋರ್ಟ್ ಇಲ್ಲದೆ ವಿಮಾನ ಏರಿದ ಅತಿಥಿಯಿಂದಾಗಿ ಏರ್‌ ಇಂಡಿಯಾ ವಿಮಾನ 12 ಗಂಟೆ ತಡವಾಗಿ ಹೊರಟ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ಭಾನುವಾರ ಹೈದರಾಬಾದಿನಿಂದ ವಿಶಾಖಪಟ್ಟಣಕ್ಕೆ ತೆರಳಬೇಕಿದ್ದ ಏರ್‌ ಇಂಡಿಯಾ ಇಮಾನದಲ್ಲಿ ಇಲಿ ಕಾಣಿಸಿಕೊಂಡ ಪರಿಣಾಮ ಬರೋಬ್ಬರಿ 12 ತಾಸುಗಳಷ್ಟು ತಡವಾಗಿ ವಿಮಾನ ಹಾರಾಟ ಆರಂಭಿಸಿತ್ತು.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್‍ನಿಂದ ವಿಶಾಖಪಟ್ಟಣಕ್ಕೆ ತೆರಳಬೇಕಿದ್ದ ವಿಮಾನ ಇನ್ನೇನು ಟೇಕಾಫ್ ಆಗಬೇಕಿತ್ತು.

Air India Flight Delay 12 Hours Due To Rat

ಆದರೆ ಈ ವೇಳೆ ಇಲಿ ಕಂಡು ಪ್ರಯಾಣಿಕರು ಗಲಿಬಿಲಿಗೊಂಡ ಕಾರಣ ಸಿಬ್ಬಂದಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದರು. ವಿಮಾನದಲ್ಲಿ ಸೇರಿದ್ದ ಒಂದೇ ಒಂದು ಇಲಿ ಹಿಡಿಯಲು ಸಿಬ್ಬಂದಿ 12 ಗಂಟೆಗಳ ಕಾಲ ಹರಸಾಹಸವನ್ನೇ ಪಟ್ಟಿದ್ದಾರೆ.

ಸಂಜೆಯ ವೇಳೆಗೆ ಕೊನೆಗೂ ಏರ್‌ಲೈನ್ಸ್ ಸಿಬ್ಬಂದಿ ವಿಮಾನದಲ್ಲಿದ್ದ ಇಲಿಯನ್ನು ಹಿಡಿದಿದ್ದೇವೆ ಎಂದು ತಿಳಿಸಿ ಪ್ರಯಾಣಿಕರನ್ನು ವಿಮಾನದಲ್ಲಿ ಹತ್ತಿಸಿಕೊಂಡು ವಿಶಾಖಪಟ್ಟಣಕ್ಕೆ ತೆರಳಿದ್ದಾರೆ. ಅಲ್ಲಿಂದ ಇದೇ ವಿಮಾಣ ದೆಹಲಿಯತ್ತ ಪ್ರಯಾಣ ಬೆಳೆಸಿದೆ.

ಬೆಳಗ್ಗೆ 6.10ಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾದ AI-952 ವಿಮಾನ ಸಂಜೆ 5.30ಕ್ಕೆ ಟೇಕಾಫ್ ಆಗಿದೆ. ಇಲಿಯ ಎಂಟ್ರಿಯಿಂದ ಬರೋಬ್ಬರಿ 12 ಗಂಟೆ ತಡವಾಗಿ ವಿಮಾನ ಟೇಕಾಫ್ ಆಗಿದೆ. ಹೀಗಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಲ ಕಳೆದಿದ್ದಾರೆ.

ಒಂದು ಇಲಿಯನ್ನು ಹಿಡಿಯಲು 12 ತಾಸು ತೆಗೆದುಕೊಂಡ ಸಿಬ್ಬಂದಿಗಳ ವಿರುದ್ಧ ಹರಿಹಾಯ್ದಿರುವ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+