ನನಗೂ ಗೋವು ಕೊಡ್ತೀರಾ? ಬಿಜೆಪಿಗೆ ಅಸಾದುದ್ದೀನ್ ಓವೈಸಿ ಪ್ರಶ್ನೆ

ಹೈದರಾಬಾದ್, ನವೆಂಬರ್ 12: ಬಿಜೆಪಿ ವಿರುದ್ಧ ನಿರತರ ವಾಗ್ದಾಳಿ ನಡೆಸುತ್ತಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ತೆಲಂಗಾಣ ಚುನಾವಣೆಗೆ ಬಿಜೆಪಿ ಸಿದ್ಧಪಡಿಸಿರುವ ಪ್ರಣಾಳಿಕೆಯನ್ನು ಟೀಕಿಸಿದ್ದಾರೆ.

ಬಿಜೆಪಿಯು ರಾಜ್ಯದಲ್ಲಿ ಒಂದು ಲಕ್ಷ ಗೋವುಗಳನ್ನು ಹಂಚುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಅವರು ನನಗೂ ಒಂದು ಗೋವು ನೀಡುತ್ತಾರೆಯೇ? ನಾನು ಅದನ್ನು ಅತೀಯ ಗೌರವದೊಂದಿಗೆ ಸಾಕುತ್ತೇನೆ ಎಂದು ಭರವಸೆ ನೀಡುತ್ತೇನೆ. ಆದರೆ, ಪ್ರಶ್ನೆ ಏನೆಂದರೆ ಅವರು ನನಗೆ ಹಸು ನೀಡುತ್ತಾರೆಯೇ?'

ಇದು ನಗುವ ಸಂಗತಿಯಲ್ಲ. ಅದರ ಬಗ್ಗೆ ಯೋಚಿಸಿ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಪ್ರದೇಶಗಳು, ಕಟ್ಟಡಗಳ ಹೆಸರನ್ನು ಬದಲಿಸುವ ಬಿಜೆಪಿಯ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ಓವೈಸಿ, ಅಮಿತ್ ಶಾ ಕೂಡ ತಮ್ಮ ಹೆಸರು ಬದಲಿಸಬೇಕು ಎಂದು ಲೇವಡಿ ಮಾಡಿದ್ದಾರೆ.

AIMIM chief Asaduddin Owaisi criticises bjps manifesto of Telangana elections2018

ಶಾ ಎನ್ನುವುದು ಪರ್ಷಿಯನ್ ಹೆಸರು. ಆ ಹೆಸರು ಇಟ್ಟುಕೊಂಡು ಅವರು ಏನು ಮಾಡುತ್ತಿದ್ದಾರೆ. ಅವರೂ ತಮ್ಮ ಹೆಸರನ್ನು ಬದಲಿಸಿಕೊಳ್ಳಬೇಕು ಎಂದು ಓವೈಸಿ ವ್ಯಂಗ್ಯವಾಡಿದರು.

ಇದಕ್ಕೂ ಮುಂಚೆ ಇತಿಹಾಸಕಾರ ಇರ್ಫಾನ್ ಹಬೀಬಿ ಅವರು ಕೂಡ ಅಮಿತ್ ಶಾ ಅವರು ಹೆಸರು ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

ಇದಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಶಾ ಎನ್ನುವುದು ಇರಾನಿಯನ್ ಹೆಸರು. ಅಮಿತ್ ಶಾ ಏಕೆ ಹೆಸರು ಬದಲಿಸಿಕೊಳ್ಳಬೇಕು? ಇರಾನಿಯನ್ನರು ಆಕ್ರಮಣ ಮಾಡಿ ಲೂಟಿ ಮಾಡಲಿಲ್ಲ. ಹಾಗೆಯೇ ಓವೈಸಿಯ ಹಿಂದೂ ಪೂರ್ವಜರಂತೆ ಮುಸ್ಲಿಮರನ್ನಾಗಿ ಮತಾಂತರಿಸಲಿಲ್ಲ ಎಂದು ಕೆಲವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+