• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈದರಾಬಾದ್ ವಿವಿಯಲ್ಲಿ ಎಲ್ಲ ಆರು ಸ್ಥಾನ ಬಾಚಿಕೊಂಡ ಎಬಿವಿಪಿ

|

ಹೈದರಾಬಾದ್, ಅಕ್ಟೋಬರ್ 08 : ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಒಕ್ಕೂಟಕ್ಕೆ ನಡೆದ ಚುನಾವಣೆಯಲ್ಲಿ, ಕಳೆದ ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ ಎಲ್ಲ ಆರೂ ಸ್ಥಾನಗಳನ್ನು ಗೆದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಯಭೇರಿ ಬಾರಿಸಿದೆ.

ಜೆಎನ್ ಯುನಲ್ಲಿ ನಾಲ್ಕೂ ಪ್ರಮುಖ ಹುದ್ದೆಗಳು ಎಡಪಂಥೀಯ ವಿದ್ಯಾರ್ಥಿ ಒಕ್ಕೂಟಕ್ಕೆ

2009-10ರಲ್ಲಿ ಅಧಿಕಾರದಲ್ಲಿದ್ದ ಎಬಿವಿಪಿ, ಈಬಾರಿ ಹಿಂದುಳಿದ ವರ್ಗಗಳ ಒಕ್ಕೂಟ (ಓಬಿಸಿಎಫ್), ಸೇವಾಲಾಲ್ ವಿದ್ಯಾರ್ಥಿ ದಳ(ಎಸ್ಎಲ್‌ವಿಡಿ)ಗಳ ಜೊತೆ ಮೈತ್ರಿ ಮಾಡಿಕೊಂಡು ಎಲ್ಲ 6 ಸ್ಥಾನಗಳಲ್ಲಿ ಜಯಶಾಲಿಯಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಸಾಂಸ್ಕೃತಿಕ ಕಾರ್ಯದರ್ಶಿ, ಕ್ರೀಡಾ ಕಾರ್ಯದರ್ಶಿ ಪಟ್ಟಗಳನ್ನು ಎಬಿವಿಪಿ ತನ್ನದಾಗಿಸಿಕೊಂಡಿದೆ.

ದೆಹಲಿ ವಿವಿ ಚುನಾವಣೆಯಲ್ಲಿ ಎಬಿವಿಪಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ?

ಹೈದರಾಬಾದ್ ಸೆಂಟ್ರಲ್ ಯುನಿವರ್ಸಿಟಿ ಎಂದೇ ಕರೆಯಲಾಗುವ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 5ರಂದು ಚುನಾವಣೆ ನಡೆದಿತ್ತು. ಶನಿವಾರ ತಡವಾಗಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. 3,900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಚುನಾವಣೆಯಲ್ಲಿ ಭಾಗವಹಿಸಿದ್ದರು.

ಒಂದು ಲಕ್ಷ ಬೀಜದ ಉಂಡೆಗಳ ತಯಾರಿಕಾ ಅಭಿಯಾನಕ್ಕೆ ಚಾಲನೆ

ಈ ಹೈಪ್ರೊಫೈಲ್ ಚುನಾವಣೆಯಲ್ಲಿ ಭಾರತದ ವಿದ್ಯಾರ್ಥಿಗಳ ಒಕ್ಕೂಟ, ಎಬಿವಿಪಿ-ಓಬಿಸಿಎಫ್-ಎಸ್ಎಲ್‌ವಿಡಿ, ಅಂಬೇಡ್ಕರ್ ವಿದ್ಯಾರ್ಥಿಗಳ ಸಂಘಟನೆ ಪ್ರತಿನಿಧಿಸುವ ಯುನೈಡೆಟ್ ಡೆಮಾಕ್ರೆಟಿಕ್ ಅಲಯನ್ಸ್, ಬಹುಜನ ಸ್ಟುಡೆಂಟ್ಸ್ ಫ್ರಂಟ್, ದಲಿತ್ ಸ್ಟುಡೆಂಟ್ಸ್ ಯೂನಿಯನ್ ಮತ್ತು ನ್ಯಾಷನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಸಂಘಟನೆಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು.

ಪುತ್ತೂರಿನಲ್ಲಿ ಉಚಿತ ಬಸ್ ಪಾಸ್ ಗಾಗಿ ಎಬಿವಿಪಿ ಬೃಹತ್ ಪ್ರತಿಭಟನೆ

ಪಿಎಚ್ಡಿ ವಿದ್ಯಾರ್ಥಿನಿಯಾಗಿರುವ ಆರತಿ ನಾಗಪಾಲ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಅಮಿತ್ ಕುಮಾರ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಪಟ್ಟ ಧೀರಜ್ ಸಂಜೋಗಿ ಅವರ ಪಾಲಾದರೆ, ಜಂಟಿ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಅವರು ಆಯ್ಕೆಯಾದರು. ಅರವಿಂದ್ ಎಸ್ ಕುಮಾರ್ ಅವರು ಸಾಂಸ್ಕೃತಿಕ ಕಾರ್ಯದರ್ಶಿ ಮತ್ತು ನಿಖಿಲ್ ರಾಜ್ ಕೆ ಅವರು ಕ್ರೀಡಾ ಕಾರ್ಯದರ್ಶಿಯಾಗಿದ್ದಾರೆ.

English summary
Akhil Bharatiya Vidyarthi Parishad (ABVP) sweeps all six posts in Students Union poll at Hyderabad University has swept all six posts, first time in 8 years, in Students Union election conducted at Hyderabad University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X