ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ತಾಯಿ ಸೋನಿಯಾಗೆ ದೇಗುಲ

By Mahesh
|
Google Oneindia Kannada News

ಹೈದರಾಬಾದ್, ಜ.8: ದಶಕಗಳ ಬೇಡಿಕೆ ಈಡೇರಿಸಿದ ಭಾಗ್ಯ ದೇವತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಂಧ್ರದ ಕಾಂಗ್ರೆಸ್ ಶಾಸಕರೊಬ್ಬರಿಗೆ ದೇವತೆಯಾಗಿ ಕಾಣಿಸಿದ್ದಾರೆ. ಸೋನಿಯಾ ಪ್ರತಿಮೆ ನಿರ್ಮಿಸಿ ದೇಗುಲ ಸ್ಥಾಪನೆ ಕಾರ್ಯ ಭರದಿಂದ ಸಾಗುತ್ತಿದೆ.

ತೆಲಂಗಾಣ ರಾಜ್ಯ ರಚನೆಗೆ ಯುಪಿಎ ಸರ್ಕಾರ ಚಾಲನೆ ನೀಡಿದ ಬೆನ್ನಲ್ಲೇ ಸೋನಿಯಾ ಗಾಂಧಿ ಅವರ ಹೆಸರಿನಲ್ಲಿ ದೇಗುಲ ನಿರ್ಮಾಣಕ್ಕೆ ಮುಂದಾಗಲಾಯಿತು. ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿರುವ ಜಾಗವೊಂದರಲ್ಲಿ 'ಸೋನಿಯಾ ಗಾಂಧಿ ಶಾಂತಿವನ' ಸ್ಥಾಪಿಸಿ ಅಲ್ಲಿ ಸೋನಿಯಾ ಅವರ ಪ್ರತಿಮೆಯನ್ನು ನಿಲ್ಲಿಸಲು ಮಾಜಿ ಸಚಿವ ಶಂಕರ್ ರಾವ್ ಅವರು ಇಚ್ಛಿಸಿದ್ದಾರೆ. ಈ ಜಾಗ ಶಂಕರ್ ರಾವ್ ಅವರ ಪುತ್ರಿ ಸುಸ್ಮಿತಾ ಅವರ ಹೆಸರಿನಲ್ಲಿದೆ.

ಲಕ್ಷ್ಮಿ ದೇವರನ್ನು ಹೋಲುವ ಸೋನಿಯಾ ಗಾಂಧಿ

ಲಕ್ಷ್ಮಿ ದೇವರನ್ನು ಹೋಲುವ ಸೋನಿಯಾ ಗಾಂಧಿ

ಲಕ್ಷ್ಮಿ ದೇವರನ್ನು ಹೋಲುವ ಸೋನಿಯಾ ಗಾಂಧಿ ಅವರ ಪ್ರತಿಮೆ ಬರೋಬ್ಬರಿ 500 ಕೆಜಿ ತೂಗುತ್ತದೆ.

ಈ ಶಿಲ್ಪವನ್ನು ಕೆತ್ತಿದ್ದು ಸೀಮಾಂಧ್ರ ಭಾಗದ ಶಿಲ್ಪಿ

ಈ ಶಿಲ್ಪವನ್ನು ಕೆತ್ತಿದ್ದು ಸೀಮಾಂಧ್ರ ಭಾಗದ ಶಿಲ್ಪಿ

ಕುತೂಹಲಕಾರಿ ಸಂಗತಿ ಎಂದರೆ ಸೀಮಾಂಧ್ರ ಭಾಗಕ್ಕೆ ಸೇರಿದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಲ್ಪಿಯೊಬ್ಬರು ಈ ಶಿಲ್ಪವನ್ನು ಕೆತ್ತಿದ್ದಾರೆ.

ತೆಲಂಗಾಣ ದೇವತೆಯ ಜನ್ಮದಿನ

ತೆಲಂಗಾಣ ದೇವತೆಯ ಜನ್ಮದಿನ

2013ರ ಡಿಸೆಂಬರ್ 9 ರಂದು ಸೋನಿಯಾ ಗಾಂಧಿ ದೇಗುಲ ನಿರ್ಮಾಣ ಕಾರ್ಯಕ್ಕೆ ನಾಂದಿ ಹಾಡಲಾಯಿತು. ಸೋನಿಯಾ ಅವರ ಹುಟ್ಟುಹಬ್ಬವನ್ನು ದೇವತೆಯ ಜನ್ಮದಿನ ಎಂದೇ ಆಚರಿಸಲಾಯಿತು. ಅಂದೇ ಪಿ ಚಿದಂಬರಂ ಅವರು ಮಧ್ಯರಾತ್ರಿ ವೇಳೆ ತೆಲಂಗಾಣ ರಾಜ್ಯ ರಚನೆಯ ಆದೇಶವನ್ನು ಪ್ರಕಟಿಸಿದರು.

ಪುತ್ರಿ ಸುಸ್ಮಿತಾ ಜತೆ ಶಂಕರ್ ರಾವ್

ಪುತ್ರಿ ಸುಸ್ಮಿತಾ ಜತೆ ಶಂಕರ್ ರಾವ್

ಈ ರೀತಿ ವ್ಯಕ್ತಿಪೂಜೆ ಅಭಿಮಾನದ ಪರಾಕಾಷ್ಠೆ ಮೆರೆದ ಉದಾಹರಣೆಗಳು ಈ ಹಿಂದೆ ಕೂಡಾ ಘಟಿಸಿದೆ. ನಟಿ ಖುಷ್ಬೂ, ನಟ, ರಾಜಕಾರಣಿ ಎಂಜಿ ರಾಮಚಂದ್ರನ್, ನಟ ಅಮಿತಾಬ್ ಬಚ್ಚನ್, ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆ ಸಹಿತ ದೇಗುಲಗಳು ಕಾಣಬಹುದು.

English summary
A Congress legislator, former minister Shankarf Rao rom Andhra Pradesh has taken his devotion to party president Sonia Gandhi to new heights, or nine feet to be exact. Shankar Rao's 'Goddess Sonia' statue will be installed at what Dr Rao intends to call the 'Sonia Gandhi Shanti Vanam', in a patch of land near Bangalore-Hyderabad Highway
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X