ಹೈದರಾಬಾದ್‌ನಲ್ಲಿ 55 ಎಕರೆ ಭೂಮಿ ಹೊಂದಿದ್ದಾರೆ ರಾಮ್ ರಹೀಮ್
ಹೈದರಾಬಾದ್, ಆಗಸ್ಟ್. 27 : ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಣೆ ಆಗುತ್ತಿದ್ದಂತೆ ಹಿಂಸಾಚಾರ ನಡೆಸಿದೆ. ಆಗಿರುವ ಆಸ್ತಿ ನಷ್ಟವನ್ನು ಭರಿಸಲು ಡೇರಾ ಸಚ್ಚಾ ಸೌಧಕ್ಕೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಹೈಕೋರ್ಟ್ ಆದೇಶ ನೀಡಿದೆ.
ಗುರ್ಮೀತ್ ರಾಮ್ ರಹೀಮ್ ಸಿಂಗ್ ಈಗ ಖೈದಿ ನಂಬರ್ 1997
ಹೈದರಾಬಾದ್ ಸಮೀಪದ ನೆಲಗೊಂಡದಲ್ಲಿ ಡೇರಾ ಸಚ್ಚಾ ಸೌಧಕ್ಕೆ ಸೇರಿದ 55 ಎಕರೆ ಜಾಗವಿದೆ. ಶಾಲಾ-ಕಾಲೇಜುಗಳನ್ನು ನಿರ್ಮಾಣ ಮಾಡಲು ಈ ಜಾಗವನ್ನು ಮೀಸಲಾಗಿಡಲಾಗಿದೆ. ಹರ್ಯಾಣದಲ್ಲಿ ಹಿಂಸಾಚಾರ ಸಂಭವಿಸಿದ ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ಈ ಭೂಮಿಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ರಾಮ್ ರಹೀಮ್ ಸಿಂಗ್ ಆಶ್ರಮಕ್ಕೆ ಸೇರಿದ ಜಾಗದಲ್ಲಿ ಚಿಕ್ಕದಾದ ಒಂದು ಕೊಠಡಿ ಮಾತ್ರ ಇದೆ. ಅಲ್ಲಿನ ಭದ್ರತಾ ಸಿಬ್ಬಂದಿಗೆ ವಾಸ್ತವ್ಯ ಹೂಡಲು ಮಾತ್ರ ಚಿಕ್ಕ ಕೊಠಡಿ ಕಟ್ಟಿಕೊಳ್ಳಲಾಗಿದೆ. 2007ರಿಂದ 2015ರ ತನಕ ಈ ಭೂಮಿಯನ್ನು ವಿವಿಧ ವರ್ಷಗಳ ಲ್ಲಿ ಖರೀದಿ ಮಾಡಲಾಗಿದೆ.
ರಾಮ್ ರಹೀಮ್ ಸಿಂಗ್ ಬೆಂಗಳೂರಿನ ಆಶ್ರಮಕ್ಕೆ ಬೀಗ
ಈ ಭೂಮಿಯಲ್ಲಿ ಹನ್ನೊಂದು ಎಕರೆ ಭೂಮಿಯನ್ನು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ. ಯಾವ ಉದ್ದೇಶಕ್ಕೆ ಭೂಮಿಯನ್ನು ಕೊಂಡುಕೊಳ್ಳಲಾಗಿದೆ ಎಂಬುದನ್ನು ಖಚಿತಪಡಿಸಿಲ್ಲ. ಈ ಭೂಮಿ ಖರೀದಿ ಮಾಡಲು ಆಶ್ರಮದ ಮುಖ್ಯ ಕಚೇರಿಯಿಂದಲೇ ಹಣ ಬಂದಿದೆ ಎನ್ನುತ್ತಾರೆ ಸ್ಥಳೀಯರು.
ಈ ಭೂಮಿಯನ್ನು ರಾಮ್ ರಹೀಮ್ ಸಿಂಗ್ ಬೆಂಬಲಿಗರಾದ ಶ್ಯಾಮಲ್ ಲಾಲ್ ನೋಡಿಕೊಳ್ಳುತ್ತಿದ್ದಾರೆ. 'ಬಾಬಾ 2002ರ ಬಳಿಕ ಹಲವು ಬಾರಿ ಹೈದರಾಬಾದ್‌ಗೆ ಭೇಟಿ ನೀಡಿದ್ದಾರೆ. ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿ ಸತ್ಸಂಗ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. 2012ರಲ್ಲಿ ಕೊನೆಯ ಬಾರಿ ಅವರು ಹೈದರಾಬಾದ್‌ಗೆ ಭೇಟಿ ಕೊಟ್ಟಿದ್ದರು' ಎಂದು ಶ್ಯಾಮಲ್ ಲಾಲ್ ಹೇಳಿದ್ದಾರೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !