ಆಂಧ್ರ ಪ್ರದೇಶದಲ್ಲಿಂದು 10,080 ಮಂದಿಗೆ ಕೊರೊನಾ ವೈರಸ್ ದೃಢ
ಹೈದರಾಬಾದ್, ಆಗಸ್ಟ್ 8: ಆಂಧ್ರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಉಲ್ಬಣವಾಗುತ್ತಿದೆ. ಇಂದು ಸಹ ಆಂಧ್ರದಲ್ಲಿ 10 ಸಾವಿರಕ್ಕಿಂತ ಹೆಚ್ಚು ಮಂದಿಗೆ ಕೊವಿಡ್ ತಗುಲಿದೆ.
ಆಂಧ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿಂದು 10080 ಕೊವಿಡ್ ಸೋಂಕು ತಗುಲಿದೆ. ಕಳೆದ 24 ಗಂಟೆಯಲ್ಲಿ 97 ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ ಎಂದು ಮಾಹಿತಿ ನೀಡಿದೆ.
ಇಂದಿನ ವರದಿ ಬಳಿಕ ಆಂಧ್ರದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 217040ಕ್ಕೆ ಏರಿಕೆಯಾಗಿದೆ. ಅದರಲ್ಲಿ 129615 ಜನರು ಚೇತರಿಕೆ ಕಂಡಿದ್ದಾರೆ. ಇನ್ನು 85486 ಕೇಸ್‌ಗಳು ಸಕ್ರಿಯವಾಗಿದೆ. ಇದುವರೆಗೂ ಆಂಧ್ರದಲ್ಲಿ 1939 ಮಂದಿ ಸಾವನ್ನಪ್ಪಿದ್ದಾರೆ.

ಜಿಲ್ಲೆವಾರು ನೋಡುವುದಾದರೆ ಪೂರ್ವ ಗೋದಾವರಿಯಲ್ಲಿ 1310 ಕೇಸ್, ಅನಂತಪುರದಲ್ಲಿ 976 ಕೇಸ್, ಚಿತ್ತೂರಿನಲ್ಲಿ 963 ಕೇಸ್, ವಿಶಾಖಪಟ್ಟಣಂನಲ್ಲಿ 998 ಕೇಸ್, ನೆಲ್ಲೂರಿನಲ್ಲಿ 878 ಕೇಸ್, ಗುಂಟೂರಿನಲ್ಲಿ 601 ಕೇಸ್ ವರದಿಯಾಗಿದೆ.
ಇದುವರೆಗೂ ಆಂಧ್ರದಲ್ಲಿ ಅತಿ ಹೆಚ್ಚು ಕೊವಿಡ್ ಸೋಂಕು ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಪೂರ್ವ ಗೋದಾವರಿಯಲ್ಲಿ 30,160 ಕೇಸ್, ಕರ್ನೂಲ್‌ನಲ್ಲಿ 26032 ಕೇಸ್, ಅನಂತಪುರದಲ್ಲಿ 23249 ಕೇಸ್, ಗುಂಟೂರಿನಲ್ಲಿ 20837 ಕೇಸ್, ವಿಶಾಖಪಟ್ಟಣದಲ್ಲಿ 18,532 ಕೇಸ್ ದಾಖಲಾಗಿದೆ.












Click it and Unblock the Notifications