ಯಮನೂರು ದೌರ್ಜನ್ಯ: ಹುಬ್ಬಳ್ಳಿಯಲ್ಲಿ ಮುಂದುವರಿದ ಪ್ರತಿಭಟನೆಗಳು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 03: ಮಹದಾಯಿ ರೈತ ಹೋರಾಟಗಾರರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆಗಳ ಸಾಲು ಮುಂದುವರಿದಿದೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮತ್ತು ಆಮ್ ಆದ್ಮಿ ಪಾರ್ಟಿ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಹು-ಧಾ ಬಿಜೆಪಿ ಸೆಂಟ್ರಲ್ ಕ್ಷೇತ್ರದ ಮಹಿಳಾ ಮೋರ್ಚಾ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಕೋರ್ಟ್ ವೃತ್ತದಿಂದ ಮಿನಿ ವಿಧಾನಸೌಧದವರೆಗೂ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪೊಲೀಸ್ ದೌರ್ಜನ್ಯವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.[ಯಮನೂರಿಗೆ ಬರುವ ರಾಜಕಾರಣಿಗೆ ಸೆಗಣಿ ಎರಚುವ ಚಳವಳಿ]

hubballi

ದೇಶಕ್ಕೆ ಅನ್ನದಾತನಾಗಿರುವ ರೈತರ ಮೇಲೆ ಅಮಾನವೀಯವಾಗಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಇದರ ಹಿಂದೆ ಸರಕಾರದ ಕೈವಾಡ ಸ್ಪಷ್ಟವಾಗಿ ಗೋಚರಿಸುತ್ತದೆ. ಯಮನೂರು, ಅಳಗವಾಡಿ, ಅರೇಕುರಹಟ್ಟಿ ಮತ್ತು ನವಲಗುಂದ ಗ್ರಾಮಗಳಲ್ಲಿ ಪೊಲೀಸರು ಮನೆ ಹೊಕ್ಕು ಮಹಿಳೆಯರು, ವೃದ್ಧರು ಮತ್ತು ವಿದ್ಯಾರ್ಥಿಗಳನ್ನು ಹೊರಗಡೆ ಎಳೆದುಕೊಂಡು ಬಂದು ಥಳಿಸಿದ್ದಾರೆ.

hubballi

ಈ ಗ್ರಾಮಗಳಲ್ಲಿ ಈಗ ಸ್ಮಶಾನಮೌನ ಆವರಿಸಿದೆ. ಊರಿನಲ್ಲಿದ್ದ ಗಂಡರು ಇದುವರೆಗೂ ಮನೆಗೆ ಬಂದಿಲ್ಲ.ಎಲ್ಲಿದ್ದಾರೊ ಗೊತ್ತಿಲ್ಲ ಎಂದು ಆಪಾದಿಸಿದ ಪ್ರತಿಭಟನಕಾರರು ದೌರ್ಜನ್ಯವೆಸಗಿದ್ದ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಮೋರ್ಚಾ ಅಧ್ಯಕ್ಷೆ ಉಮಾ ಮುಕುಂದ, ಭಾರತಿ ಟಪಾಲ್, ಮೀನಾಕ್ಷಿ ವಂಟಮುರಿ, ಪ್ರಭಾ ಹಿರೇಮಠ, ಸೀಮಾ ಲದ್ವಾ, ಗೀತಾ ಅಳಗುಂಡಗಿ, ಶೋಭಾ ಉಪ್ಪಾರ, ಉಮಾ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ
ಆ. 3 ರಂದು ರಾಜ್ಯದಾದ್ಯಂತ ಆಮ್ ಆದ್ಮಿ ಪಾರ್ಟಿ ಸಂಸದರ ಮನೆ ಮುತ್ತಿಗೆ ಹಾಕುವುದಾಗಿ ಹೇಳಿತ್ತು. ಅದರಂತೆ ಕಳಸಾ-ಬಂಡೂರಿ ಯೋಜನೆಗೆ ಒತ್ತಾಯ ಹೇರದ ಸಂಸದರ ಮನೆಗೆ ಮುತ್ತಿಗೆ ಹಾಕಲು ಆಗಮಿಸಿದ ನಗರದ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದರು. ಸಂಸದ ಪ್ರಹ್ಲಾದ ಜೋಶಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದ ಆಪ ಕಾರ್ಯಕರ್ತರು ಪೊಲೀಸರ ಕ್ರಮದಿಂದ ಆಕ್ರೋಶಗೊಂಡರು.

hubballi

ಸಂಸದರ ಕಚೇರಿಗೆ ಮುಂದೆ ಬಾಯಿಗೆ ಕಪ್ಪು ಪಟ್ಟಿ ಧರಿಸಿ, ಜನಪ್ರತಿನಿಧಿಗಳಾದ ನೀವು ಮಹಾದಾಯಿ ನೀರು ಕೊಡಿಸುವ ಬಗ್ಗೆ ಸಂಸತ್ತಿನಲ್ಲಿ ನಮ್ಮ ಧ್ವನಿಯಾಗಿ, ಇಲ್ಲವೇ ರಾಜೀನಾಮೆ ನೀಡಿ ಇಲ್ಲಿನ ಜನರು ತಮ್ಮ ಧ್ವನಿಯಾಗಿ ನಿಮ್ಮನ್ನು ಆರಿಸಿ ಕಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.[ಲಾಠಿ ಚಾರ್ಜ್, ಪೊಲೀಸರ ಬಗ್ಗೆ ಕ್ರಮ ಕೈಗೊಳ್ಳಿ ಎಂದ ಕೋರ್ಟ್]

ಮಹಾದಾಯಿ ಯೋಜನೆಯು ರಾಜ್ಯದ 28 ಜನ ಸಂಸದರ ಹಾಗೂ 224 ಮಂದಿ ಶಾಸಕರ ಬೇಜವಾಬ್ದಾರಿತನದಿಂದಾಗಿ ಕೈತಪ್ಪುವ ಹಂತದಲ್ಲಿದೆ. ಹೋರಾಟದ ಕೇಂದ್ರವಾದ ನವಲಗುಂದ ಹಾಗೂ ನರಗುಂದಕ್ಕೆ ಯಾವೊಬ್ಬ ಸರ್ಕಾರದ ಪ್ರತಿನಿಧಿಯೂ ಬಾರದೆ ರೈತರ ಸಂಕಷ್ಟ ಕೇಳದೆ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದು ನಾಚಿಕೆಯ ವಿಷಯವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

hubballi

ರಾಜಕೀಯ ಮಾಡುತ್ತಾ ಪ್ರಧಾನಮಂತ್ರಿಗಳ ರಕ್ಷಣೆಗೆ ನಿಂತು ರಾಜಕೀಯ ಮಾಡುತ್ತಿರುವುದು ಅಸಹ್ಯಕರ ವಿಷಯವಾಗಿದೆ. ಉಳಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಸದರು, ಸದನದಲ್ಲಿ ಈ ವಿಷಯವನ್ನು ಚರ್ಚಿಸಲೂ ಮುಂದಾಗದೇ ನಿರ್ಲಕ್ಷ್ಯತನ ತೋರುತ್ತಿರುವುದು ಕೂಡ ನಾಚಿಕೆಯ ವಿಷಯವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.[ಮಹಿಳಾ ಆಯೋಗದ ಅಧ್ಯಕ್ಷರಿಗೆ ಯಮನೂರು ಜನರ ತರಾಟೆ]

ವರದಿ ನೀಡಿದ್ದ ಆಮ್ ಆದ್ಮಿ ಪಾರ್ಟಿ
2015 ಸೆಪ್ಟೆಂಬರಲ್ಲಿ ಆಮ್ ಆದ್ಮಿ ಪಾರ್ಟಿ-ಕರ್ನಾಟಕದ ನಿಯೋಗ ಮಹಾದಾಯಿ ಯೋಜನೆಯ ಕುರಿತು ಅಲ್ಲಿನ ಸ್ಥಳೀಯರು, ಹೋರಾಟಗಾರ ಮುಖಂಡರು ಹಾಗೂ ತಜ್ಞರಿಂದ ವಿಸ್ತøತವಾಗಿ ಮಾಹಿತಿ ಪಡೆದು, ಮಲಪ್ರಭಾ ಹಾಗೂ ಮಹಾದಾಯಿ ನದಿ ಪ್ರದೇಶವನ್ನು ವೀಕ್ಷಿಸಿ, ಅಲ್ಲಿ ನಿರ್ಮಾಣವಾಗಿದ್ದ ನಾಲೆಗಳನ್ನು ಹಾಗೂ ನಿರ್ಮಾಣವಾಗಬೇಕಿದ್ದ ನಾಲಾ ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸಿ, ಹಳ್ಳಿಗಳನ್ನು ಭೇಟಿ ಮಾಡಿ ಅಲ್ಲಿನ ನೀರಿನ ಅಭಾವದ ಪರಿಸ್ಥಿತಿಯನ್ನು ಅವಲೋಕಿಸಿ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ನೀಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Yamanuru Lathi charge: BJP Yuva Morcha and Aam aadmi Party Karnataka has condemned Lathi charge on Farmers by Siddaramaiah led Congress government. AAP Karnataka members today(August 3) protested in front of house and Office of 28 MPs and demanded them to raise their voices in the parliament.
Please Wait while comments are loading...