ಗಾಂಧಿ ಕುಟುಂಬಕ್ಕೆ ಸಿದ್ದರಾಮಯ್ಯ ಬೈದಷ್ಟು ಬೇರಾರು ಬೈದಿಲ್ಲ: ಪ್ರಹ್ಲಾದ್ ಜೋಶಿ ಹೀಗಂದಿದ್ದೇಕೆ?
ಹುಬ್ಬಳ್ಳಿ, ಏಪ್ರಿಲ್ 04: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಬೈದಷ್ಟು ಬೇರೆ ಯಾರು ಬೈದಿಲ್ಲ. ಯಾವುದೇ ನೀತಿ ಸಿದ್ಧಾಂತಗಳು ಇಲ್ಲದ ಅವರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಯಾರು ಕರೆದಿಲ್ಲ ಎಂದು ಪ್ರಹ್ಲಾದ್ ಜೋಶಿಯವರು ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನೀತಿ ಸಿದ್ಧಾಂತ ಇರದ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದಲ್ಲಿದ್ದಾಗ ಯಾವ ರೀತಿ ಸೋನಿಯಾ ಗಾಂಧಿಗೆ ಬೈದಿದ್ದರು ಎಂಬುದು ಗೊತ್ತಿದೆ. ಸೋನಿಯಾ ಗಾಂಧಿ ಸಿದ್ದರಾಮಯ್ಯನವರ ಮುಖ ನೋಡ ಬಾರದು ಆ ರೀತಿಯ ಬೈದಿದ್ದರು.

ಗಾಂಧಿ ಕುಟುಂಬದ ರಾಹುಲ್ ಗಾಂಧಿ, ಸೋನಿಯಾ, ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಿದ್ದರಾಮಯ್ಯ ಬೈದ ರೀತಿಯ ನಾವು ಯಾರು ಬೈಯಲು ಸಾಧ್ಯವಿಲ್ಲ. ಇಂತಹವರು ಇಂದು ರಾಹುಲ್ ಗಾಂಧಿ ಮುಂದೆ ಸೊಂಟ ಬಗ್ಗಿಸಿ ನಿಲ್ಲುತ್ತಾರೆ. ಇವರೇನು ಬೆರೆಯುವರ ಬಗ್ಗೆ ಹೇಳತ್ತಾರೆ ಎಂದು ಅವರು ಕಿಡಿ ಕಾರಿದರು.
ಸಿಎಂ ಆಗಿರದಿದ್ದರೆ ಸಿದ್ದರಾಮಯ್ಯ ಬಣ್ಣ ಬಯಲು
ರಾಜಕೀಯದಲ್ಲಿ ನಾಯಕರ ಲಭ್ಯತೆ ವಿಚಾರದಲ್ಲಿ ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಹಾಗೂ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ತತ್ವ ನಾವು ಅನುಸರಿಸಿದ್ದೇವೆ. ಸಿದ್ದರಾಮಯ್ಯ ಅವರನ್ನು ಈ ಬಾರಿ ಸಿಎಂ ಮಾಡದಿದ್ದರೆ ಅವರ ಬಣ್ಣ ಏನು ಎಂಬುದು ಗೊತ್ತಾಗುತ್ತಿತ್ತು ಎಂದು ತಿಳಿಸಿದರು.
ಈಶ್ವರಪ್ಪ ದೆಹಲಿ ಭೇಟಿಗೆ ಜೋಶಿ ಪ್ರತಿಕ್ರಿಯೆ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರನ್ನು ದೆಹಲಿ ಆಹ್ವಾನಿಸಿದ್ದರು. ಅವರಿಗೆ ಅಲ್ಲಿ ಅವಕಾಶ ನೀಡಲಾಗಿಲ್ಲ ಎಂಬ ವಿಷಯ ನಾನು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡ ಬಳಿಕ ನನಗೆ ಗೊತ್ತಾಗಿದೆ. ಈ ಬಗ್ಗೆ ನಾನು ಸತ್ಯಾಸತ್ಯೆ ಪರಿಶೀಲನೆ ಮಾಡುವೆ. ನಿಷ್ಠಾವಂತ ಕಾರ್ಯಕರ್ತರಾಗಿರುವ ಈಶ್ವರಪ್ಪ ಅವರು ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನಲ್ಲಿ ಭಿನ್ನಮತ ಇದೆ
ಸಿಎಂ ಸಿದ್ದರಾಮಯ್ಯ ಅವರು ಮತ್ತು ಡಿಕೆ ಶಿವಕುಮಾರ್ ಮಧ್ಯೆ ಏನು ನಡೆದಿದೆ ಎಂಬುದು ಇಡಿ ಜಗತ್ತಿಗೆ ಗೊತ್ತಿದೆ. ಬಸವರಾಜ ಬೊಮ್ಮಾಯಿ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಗೊತ್ತಿಲ್ಲ. ತಮ್ಮದೇ ಆದ ಅನುಭವದಲ್ಲಿ ಅವರು ಹೇಳಿರಬಹುದು. ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನಮತ, ಅಧಿಕಾರಕ್ಕಾಗಿ ಪೈಪೋಟಿ ಇದ್ದೆ ಇದೆ ಎಂದು ಅವರು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಮೂರು ಬಾರಿ ಇದು ನನ್ನ ಕೊನೆಯ ಚುನಾವಣಾ ಎಂದು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಆರೋಗ್ಯ ಚೆನ್ನಾಗಿರಲಿ, ಆರೋಗ್ಯಕರ ಚುನಾವಣೆ ಅವರು ಎದುರಿಸಲಿ ಎಂದು ಜೋಶಿ ಆಶಿಸಿದರು.
ಕೊಳವೆ ಬಾವಿಗೆ ಬಿದ್ದ ಮಗು: ಜೋಶಿ ಏನಂದ್ರು?
ಕೊಳವೆ ಬಾವಿ ಮುಚ್ಚುವ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಮಗು ಬದುಕು ಬರಲಿ ಸರ್ಕಾರ ಎಲ್ಲಾ ಸಹಕಾರ ನೀಡಲಿದೆ. ಮಗು ಆರೋಗ್ಯವಾಗಿ ಹೊರ ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳುವೆ. ನಾನು ಮಗುವಿನ ಪೋಟೋ ನೋಡಿರುವೆ ಬಹಳಷ್ಟು ಚೆಂದವಿದೆ. ಅಂತಹ ಮಗುವಿಗೆ ಈ ರೀತಿಯಾಗಿರುವುದು ಬಹಳಷ್ಟು ನೋವು ತಂದಿದೆ ಎಂದು ವಿಜಯಪುರದಲ್ಲಿ ಕೊಳವೆ ಬಾವಿಗೆ ಮಗು ಬಿದ್ದ ಘಟನೆ, ರಕ್ಷಣಾ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿದರು.
ಧಾರವಾಡ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗಿ ಈ ಚುನಾವಣಾ ಅಭಿಯಾನ ಆರಂಭಿಸಿದ್ದಾರೆ. ಪ್ರಚಾರ ಮಾಡುತ್ತಿದ್ದು, ಇಂದು ಚಾಲನೆ ನೀಡಿದ್ದೇನೆ. ದಲಿತ ಮುಖಂಡರ ಮನೆಗೆ ಭೇಟಿ ನೀಡಿರುವೆ. ಅವರ ಮನೆಯಲ್ಲಿಯೇ ಸತ್ಕಾರ ಸ್ವೀಕರಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications