ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ : ಬುಲೆಟ್ ಬೈಕ್ ಮೂಲಕ ಮತದಾನ ಜಾಗೃತಿ

|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 15 : ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ದುಡ್ ದುಡ್ ಸದ್ದು. ಬೈಕ್‌ಗಳಲ್ಲಿ ಬಂದ ಜನರು ಏಪ್ರಿಲ್ 23ರಂದು ತಪ್ಪದೇ ಮತದಾನ ಮಾಡಿ ಎಂಬ ಸಂದೇಶವನ್ನು ಜನರಿಗೆ ತಿಳಿಸಿದರು.

ಸೋಮವಾರ ಸಂಜೆ 99 ಕೆನಾನ್ ಮೋಟಾರ್ ಬೈಸಿಕಲ್ ಕ್ಲಬ್‍ನ ಸದಸ್ಯರು ತಮ್ಮ ವಿಶಿಷ್ಠ ಸದ್ದು ಮಾಡುವ ರಾಯಲ್ ಎನ್‍ಫೀಲ್ಡ್ ಬೈಕುಗಳನ್ನು ಏರಿ ಜಾಥಾ ನಡೆಸುವುದುರ ಮೂಲಕ ನಾಗರಿಕರಲ್ಲಿ ಮತದಾನ ಜಾಗೃತಿ ಮೂಡಿಸಿದರು.

ಧಾರವಾಡ : ಮರಳಲ್ಲಿ ಮೂಡಿತು ಮಾದರಿ ಮತಯಂತ್ರಧಾರವಾಡ : ಮರಳಲ್ಲಿ ಮೂಡಿತು ಮಾದರಿ ಮತಯಂತ್ರ

ಧಾರವಾಡ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಜಾಥಾ ಆಯೋಜನೆ ಮಾಡಲಾಗಿತ್ತು. 'ಮತದಾನದಲ್ಲಿ ಈ ಹಿಂದೆ ಆಗಿರದಷ್ಟು ದಾಖಲೆ ಪ್ರಮಾಣದ ಮತದಾನವಾಗಬೇಕು' ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಬಿ.ಸಿ.ಸತೀಶ್ ಹೇಳಿದರು.

ಧಾರವಾಡದ ಚುನಾವಣಾ ಪುಟ

Hubballi

'ಜಿಲ್ಲೆಯಲ್ಲಿ ಮತದಾರರ ಜಾಗೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಭಾರತದ ಚುನಾವಣಾ ಆಯೋಗದಿಂದ ವಿಕಲಚೇತನ ಮತದಾರರಿಗೆ ವಿಷೇಶ ಸೌಲಭ್ಯ ಕಲ್ಪಿಸಲಾಗಿದೆ. ವಿಕಲಚೇತನರು ಮತಗಟ್ಟೆಗೆ ಆಗಮಿಸಲು ವಾಹನ ವ್ಯವಸ್ಥೆ, ಪ್ರತಿ ಮತಗಟ್ಟೆ ಕೇಂದ್ರದಲ್ಲಿ ಇಳಿಜಾರು ಅಟ್ಟಣಿಗೆಗಳನ್ನು ನಿರ್ಮಿಸಲಾಗಿದ್ದು, ಸುಸಜ್ಜಿತ ವ್ಹೀಲ್‍ಚೇರ್ ವ್ಯವಸ್ಥೆ ಕಲ್ಪಿಸಲಾಗುವುದು' ಎಂದು ಹೇಳಿದರು.

ಕೊನೆಗೂ ಧಾರವಾಡಕ್ಕೆ ಅಭ್ಯರ್ಥಿ ಘೋಷಣೆ ಮಾಡಿದ ಕಾಂಗ್ರೆಸ್!ಕೊನೆಗೂ ಧಾರವಾಡಕ್ಕೆ ಅಭ್ಯರ್ಥಿ ಘೋಷಣೆ ಮಾಡಿದ ಕಾಂಗ್ರೆಸ್!

'ವಿಕಲಚೇತನರಿಗೆ ಮತಗಟ್ಟೆಗಳಲ್ಲಿ ಸಹಾಯ ಮಾಡಲು ವಿವಿಧ ಶಾಲಾ ಕಾಲೇಜುಗಳ ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ ಘಟಕಗಳಿಂದ ಸ್ವಯಂ ಪ್ರೇರಿತವಾಗಿ ಆಗಮಿಸಿದ ವಿದ್ಯಾರ್ಥಿಗಳನ್ನು ಸಹಾಯಕರನ್ನಾಗಿ ನೇಮಿಸಲಾಗುವುದು' ಎಂದು ತಿಳಿಸಿದರು.

student

ಚುನಾವನಾ ಆಯೋಗದಿಂದ ಮತದಾನದ ಜಾಗೃತಿಗಾಗಿ ಆಯೋಜಿಸಲಾಗಿದ್ದ ನಾಗರಿಕರ ಸಹಿ ಅಭಿಯಾನದಲ್ಲಿ, ಭಾಗವಹಿಸಿದ ನಾಗರಿಕರು ನನ್ನ ಮತ, ನನ್ನ ಹಕ್ಕು. ಕಡ್ಡಾಯವಾಗಿ ಮತದಾನ ಮಾಡುತ್ತೇವೆ ಎಂದು ಸಹಿ ಮಾಡುವುದರ ಮೂಲಕ ಚುನಾವಣಾ ಆಯೋಗಕ್ಕೆ ಮತದಾನ ವಾಗ್ದಾನ ನೀಡಿದರು.

English summary
Systematic Voter's Education and Electoral Participation (SWEEP) Dharwad organized voting awareness campaign by royal enfield bike rally in Chennamma circle Hubballi. Dharwad lok sabha polls will be held on April 23, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X