ಹುಬ್ಬಳ್ಳಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ: ತಾಯಿ-ಮಗ ಸಾವು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಡಿಸೆಂಬರ್, 11 : ನಗರದ ಹೊರವವಲಯದಲ್ಲಿರುವ ತಾರಿಹಾಳ ಬೈಪಾಸ್ ಬಳಿ ಇನ್ನೋವಾ ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಹೊಡೆದ ಪರಿಣಾಮ ಗೋವಾ ಮೂಲದ ಇಬ್ಬರು ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.

ಮೃತಪಟ್ಟವರನ್ನು ಗೋವಾದ ಪಣಜಿ ನಿವಾಸಿ ಗಲಾದ ಶಮ್ಜದಾ ಮುಸ್ತಫಾ (60), ಇವರ ಪುತ್ರ ಶಕೀಲ್ ಅಹ್ಮದ್ (46) ಎಂದು ಗುರುತಿಸಲಾಗಿದೆ. ಗಾಯಗೊಂಡ ಶಕೀಲ್ ಪತ್ನಿ ನಯಿನಾ, ಪುತ್ರಿಯರಾದ ಜವೇರಿಯಾ ಮತ್ತು ಆಯಿನಾ ಅವರನ್ನು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

Two killed 2 injured in road accident near Tarihal bypass Hubballi

ನಗರದಲ್ಲಿ ಸಂಬಂಧಿಕರೊಬ್ಬರ ಮದುಗೆಂದು ಗೋವಾದಿಂದ ಶಕೀಲ್ ಕುಟುಂಬ ಇನ್ನೋವಾ ವಾಹನದಲ್ಲಿ ಹುಬ್ಬಳ್ಳಿಗೆ ಹೋಗುವಾಗ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಪರಿಣಾಮ ಈ ಅಪಘಾತ ಸಂಭವಿಸಿದೆ. ಉತ್ತರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two killed 2 injured in road accident near Tarihal bypass Hubballi on December 10 night.
Please Wait while comments are loading...