ಹುಬ್ಬಳ್ಳಿಯಲ್ಲಿ ತುಳುನಾಡು ದಿನದರ್ಶಿಕೆ ಬಿಡುಗಡೆ, ಜರ್ಸಿ ಅನಾವರಣ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಡಿಸೆಂಬರ್ 29: ಸ್ಥಳೀಯ ಗ್ಲೋಬಲ್ ಮೀಡಿಯಾ ಸಂಸ್ಥೆ 2017ರ ತುಳುನಾಡು ಕ್ಯಾಲೆಂಡರನ್ನು ಸ್ಥಳೀಯ ಶ್ರೀ ಕೃಷ್ಣ ಭವನದ 'ಕೆ.ಬಿ.ದೇಶೀ ಹಟ್' ಹಾಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಿತು.

ಪಶ್ಚಿಮ ಕರಾವಳಿ ತೀರದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದ ಕಾಸರಗೋಡು ಭಾಗಕ್ಕೆ ತುಳುನಾಡು ಎಂದು ಕರೆಯಲ್ಪಡುತ್ತದೆ. ತುಳುನಾಡು ಒಂದು ಯಾತ್ರಾ ಕೇಂದ್ರವಾಗಿದ್ದು ಇಲ್ಲಿ ಅನೇಕ ಪೌರಾಣಿಕ ಪೂಜಾಸ್ಥಾನಗಳಿವೆ.[ಕರ್ನಾಟಕ ಸರ್ಕಾರದ 2017ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ]

calender

ಈ ಸಾರಿಯ ತುಳುನಾಡು ಪಂಚಾಂಗ ಕ್ಯಾಲೆಂಡರನಲ್ಲಿ ದೇವತೆಗಳ ವಿಶೇಷ ಅಲಂಕಾರಗಳ ಚಿತ್ರ ಮುದ್ರಿಸಲಾಗಿದೆ. ಈ ವಿಶೇಷ ಕ್ಯಾಲೆಂಡರನ್ನು ಹುಬ್ಬಳ್ಳಿ ಹೊಟೇಲ್ ಸಂಘದ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಇವರು ಸಂಘದ ಉಪಾಧ್ಯಕ್ಷ ಕೃಷ್ಣಮೂರ್ತಿ ಉಚ್ಚಿಲ ಹಾಗೂ ಸರ್ವೋತ್ತಮ ಕಾಮತ್, ಸತೀಶ್ ಶೆಟ್ಟಿ ಇವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. ಗ್ಲೋಬಲ್ ಮೀಡಿಯಾದ ಸತೀಶ ರಾವ್ ಹಾಗೂ ದಿನೇಶ ಶೆಟ್ಟಿ ಉಪಸ್ಥಿತರಿದ್ದರು.

sports

ಜರ್ಸಿ ಆನಾವರಣ:
ಡಿ.30 ರಿಂದ ಸ್ಥಳೀಯ ರಾಜನಗರದ ಕೆಎಸ್ ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಎಚ್ ಪಿಎಲ್ ಟಿ.20 ಕ್ರಿಕೆಟ್ ಟೂರ್ನಾಮೆಂಟ್ ನಲ್ಲಿ ಪಾಲ್ಗೊಳ್ಳುತ್ತಿರುವ ಸ್ಕೈಟೌನ್ ಬ್ಯಾಶರ್ಸ್ ಹುಬ್ಬಳ್ಳಿ ತಂಡದ ಜರ್ಸಿ ಅನಾವರಣ ನಗರದ ಪ್ರೆಸಿಡೆಂಟ್ ಹೊಟೆಲ್ ನಲ್ಲಿ ಜರುಗಿತು.
ತಂಡದ ಕ್ಯಾಪ್ಟನ್ ಮತ್ತು ಆಟಗಾರರು ಮಾಲೀಕರಾದ ಚೇತನ ಪವಾರ, ಮರ್ಲಿಕಾರ್ಜುನ ಸರ್ವಿ, ಎಸ್.ಕೆ.ಕೊಟ್ರೇಶ, ಬಾಬಾ ಭೂಸದ್, ಶಿವಾನಂದ ಗುಂಜಾಳ ಇತರರು ಹಾಜರಿದ್ದರು.

logo

ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಪ್ರೋತ್ಸಾಹ ಬೇಕು

ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಮನ್ನಣೆ ನೀಡುವ ಮೂಲಕ ಅವರನ್ನು ರಾಷ್ಟ್ರಮಟ್ಟದಲ್ಲಿ ಬೆಳಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಈ ನಿಟ್ಟಿನಲ್ಲಿ ಅಗತ್ಯ ಸಹಾಯ, ಸಹಕಾರ ನೀಡಲಾಗುವುದು ಎಂದು ಕೆಪಿಸಿಸಿ ಸದಸ್ಯ ದೀಪಕ ಚಿಂಚೋರೆ ಹೇಳಿದರು.

ಅವರು ಇಲ್ಲಿಯ ಕೇಶ್ವಾಪುರದಲ್ಲಿರುವ ಓಂ ಹೋಟೆಲ್ ನಲ್ಲಿ ಕ್ಯಾಪ್ಟನ್ಸ್ ಎಲೆವೆನ್ ತಂಡದ ಲಾಂಛನ ಹಾಗೂ ಕ್ರೀಡಾ ಸಮವಸ್ತ್ರ ಮತ್ತು ಪರಿಕರಗಳ ಅನಾವರಣ ಸಮಾರಂಭದಲ್ಲಿ ಕ್ಯಾಪ್ಟನ್ಸ್ ಏಲ್ವನ್ ತಂಡದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.

sports

ಕ್ರೀಡಾಪಟುಗಳಿಗೆ ಹುಬ್ಬಳ್ಳಿಯ ರಾಜ್ ನಗರದ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಇತ್ತೀಚೆಗೆ ಭಾರೀ ಜನಪ್ರಿಯತೆ ಪಡೆದಿದೆ. ಹೆಚ್ಚು ಹೆಚ್ಚು ಕ್ರಿಕೆಟ್ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಇದು ವೇದಿಕೆ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕ್ರಿಕೆಟ್ ಆಟಗಾರರು ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಮೂಲಕ ಸಾಧನೆಯ ದಾರಿಯಲ್ಲಿ ಸಾಗಬೇಕು. ಎಂದಿಗೂ ಎದೆಗುಂದಬಾರದು ಎಂದರು.

ನಾಳೆಯಿಂದ ಕ್ರಿಕೆಟ್ ಆರಂಭ : ಕ್ಯಾಪ್ಟನ್ಸ್ ಎಲೆವೆನ್ ಹಾಗೂ ಸ್ಕೈಟೌನ್ ತಂಡ ನಡುವೆ ಡಿ. 30 ರಂದು ಹುಬ್ಬಳ್ಳಿಯ ಕೆಎಸ್ಸಿಎ ಮೈದಾನದಲ್ಲಿ ಹಣಾಹಣಿ ನಡೆಯಲಿದೆ. ಈ ರೋಚಕ ಸ್ಪರ್ಧೆಯನ್ನು ನೋಡಲು ಸಾವಿರಾರು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

ತುಳುನಾಡು ಕ್ಯಾಲೆಂಡರ್ ಬಿಡುಗಡೆ, ಡಿಸೆಂಬರ್ ಡಿ.30 ರಿಂದ ಸ್ಥಳೀಯ ರಾಜನಗರದ ಕೆಎಸ್ ಸಿಎ ಕ್ರಿಕೆಟ್ ಮೈದಾನದಲ್ಲಿ ಎಚ್ ಟಿ ಎಲ್ ಟಿ-೨೦ ಕ್ರಿಕೆಟ್ ಟೂರ್ನಮೆಂಟ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three progarem have done one is Tulunadu Calendar Release, other one is KSCA Cricket Ground on December 30 to local H T L T-20 Cricket Tournament be held. And other one is Captains Eleven The unveiling of the logo and team sports uniforms
Please Wait while comments are loading...