ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರಿ ನಿಯಮ ಉಲ್ಲಂಘನೆ, ದಂಡ ವಸೂಲಿಗೆ ಮನೆಗೆ ಬರ್ತಾರೆ ಪೊಲೀಸ್!

|
Google Oneindia Kannada News

ಹುಬ್ಬಳ್ಳಿ, ನವೆಂಬರ್ 21 : ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸವಾರರ ಮನೆಗೆ ಪೊಲೀಸರು ಇಷ್ಟು ದಿನ ನೋಟಿಸ್ ಕಳುಹಿಸುತ್ತಿದ್ದರು. ಈಗ ನೋಟಿಸ್ ಬಂದರೂ ದಂಡ ಕಟ್ಟದಿದ್ದರೆ ಪೊಲೀಸರು ಮನೆ ಬಾಗಿಲು ತಟ್ಟಲಿದ್ದಾರೆ.

ಹೌದು... ಹುಬ್ಬಳ್ಳಿ-ಧಾರವಾಡ ಪೊಲೀಸರು ವಾಹನ ಸವಾರರ ಮನೆ ಬಾಗಿಲಿಗೆ ಹೋಗಿ ದಂಡದ ಮೊತ್ತ ಸಂಗ್ರಹಿಸುವ ಕಾರ್ಯವನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದಾರೆ. ಇದಕ್ಕೆ ಉತ್ತಮ ಯಶಸ್ಸು ಸಹ ಸಿಕ್ಕಿದ್ದು, 27 ಲಕ್ಷ ರೂ. ಸಂಗ್ರಹವಾಗಿದೆ.

ನಡು ರಸ್ತೆಯಲ್ಲಿ ವಾಹನ ನಿಲ್ಲಿಸಿ ಡಾಕ್ಯುಮೆಂಟ್ ಕೇಳಬೇಡಿ: ಪೊಲೀಸರಿಗೆ ಸೂಚನೆನಡು ರಸ್ತೆಯಲ್ಲಿ ವಾಹನ ನಿಲ್ಲಿಸಿ ಡಾಕ್ಯುಮೆಂಟ್ ಕೇಳಬೇಡಿ: ಪೊಲೀಸರಿಗೆ ಸೂಚನೆ

ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಪೊಲೀಸರು ಮನೆಗೆ ನೋಟಿಸ್ ಕಳಿಸುತ್ತಿದ್ದರು. ಆದರೆ, ಸವಾರರು ನೋಟಿಸ್‌ ಬಂದರೂ ದಂಡ ಪಾವತಿ ಮಾಡುತ್ತಿರಲಿಲ್ಲ. ಅದಕ್ಕಾಗಿ ಪೊಲೀಸರು ಮನೆ ಬಾಗಿಲಿಗೆ ಹೋಗಿ ದಂಡ ವಸೂಲಿ ಮಾಡುತ್ತಿದ್ದಾರೆ.

ದಾವಣಗೆರೆ: ಮದ್ಯದ ಅಮಲಿನಲ್ಲಿ ಪೊಲೀಸರಿಗೆ ಹಿಗ್ಗಾ ಮುಗ್ಗಾ ಥಳಿತದಾವಣಗೆರೆ: ಮದ್ಯದ ಅಮಲಿನಲ್ಲಿ ಪೊಲೀಸರಿಗೆ ಹಿಗ್ಗಾ ಮುಗ್ಗಾ ಥಳಿತ

Traffic rule violations : police will visit households to collect penalty

'ಪ್ರಾಯೋಗಿಕವಾಗಿ ಮನೆ ಬಾಗಿಲಿಗೆ ಹೋಗಿ ದಂಡ ಸಂಗ್ರಹ ಮಾಡುವ ಅಭಿಯಾನ ಆರಂಭಿಸಿದ್ದೇವೆ. ಅವಳಿ ನಗರದ ಪ್ರತಿ ಠಾಣೆಯ ಇಬ್ಬರು ಸಿಬ್ಬಂದಿಗಳನ್ನು ಇದಕ್ಕಾಗಿ ನಿಯೋಜನೆ ಮಾಡಲಾಗಿದೆ' ಎಂದು ಡಿಸಿಪಿ (ಟ್ರಾಫಿಕ್&ಕ್ರೈಂ) ಬಿ.ಎಸ್.ನೇಮಗೌಡ ಹೇಳಿದ್ದಾರೆ.

ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರುಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು

ಅಸಿಸ್ಟೆಂಟ್‌ ಎಸ್‌ಐ ಅವರಿಗೆ ಈ ಪ್ರಾಯೋಗಿಕ ಯೋಜನೆಯನ್ನು ನೋಡಿಕೊಳ್ಳುವ ಉಸ್ತುವಾರಿ ನೀಡಲಾಗಿದೆ. ಇದುವರೆಗೂ 25,305 ಪ್ರಕರಣಗಳ ದಂಡವನ್ನು ಮನೆ ಬಾಗಿಲಿಗೆ ಹೋಗಿ ವಸೂಲಿ ಮಾಡಲಾಗಿದೆ. ತುಂಬ ಹಳೆಯ ಪ್ರಕರಣಗಳ ದಂಡ ಶುಲ್ಕವನ್ನು ಮಾತ್ರ ಸಂಗ್ರಹ ಮಾಡಲಾಗುತ್ತಿದೆ.

ಅವಳಿ ನಗರದ ವಾಹನ ದಟ್ಟಣೆಯನ್ನು ಟ್ರಾಫಿಕ್ ಮಾನಿಟರಿಂಗ್ ಯೂನಿಟ್‌ನಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಅತ್ಯಾಧುನಿಕ ಕ್ಯಾಮರಾಗಳ ಸಹಾಯದಿಂದ ಇಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಾಹನಗಳ ನಂಬರ್ ಪ್ಲೇಟ್ ಫೋಟೋಗಳ ಲಭ್ಯವಿದೆ.

ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿದ ತಕ್ಷಣ ಅವರಿಗೆ ನೋಟಿಸ್ ಕಳಿಸಲಾಗುತ್ತಿದೆ. ನಿರಂತರವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸವಾರರ ಮಾಹಿತಿಯನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡಲಾಗುತ್ತಿದೆ.

English summary
The Hubballi-Dharwad city traffic police have started visiting households to collect penalty from vehicle owners. After sending notice in several cases of traffic rule violations, people not paid fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X