Get Updates
Get notified of breaking news, exclusive insights, and must-see stories!

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ದ.ರಾ. ಬೇಂದ್ರೆ ಹೆಸರಿಡಲು ಹೆಚ್ಚಾದ ಆಗ್ರಹ

ಬೆಳಗಾವಿ, ಡಿಸೆಂಬರ್‌ 19: ಕರ್ನಾಟಕ ವಿವಿಧ ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ವಲಯಗಳಲ್ಲಿ ಕೆಲವು ಪ್ರತಿರೋಧವನ್ನು ಹುಟ್ಟುಹಾಕಿದೆ.

ಎರಡನೇ ಶ್ರೇಣಿ ನಗರಗಳಲ್ಲಿನ ವಿಮಾನ ನಿಲ್ದಾಣಗಳಿಗೆ ಹೆಸರಿಡುವ ಸರ್ಕಾರದ ನಿರ್ಧಾರವನ್ನು ಸಮಾಜದ ಒಂದು ವರ್ಗ ಸ್ವಾಗತಿಸಿದರೆ, ಈ ಪ್ರದೇಶದ ಪ್ರಸಿದ್ಧ ವ್ಯಕ್ತಿಗಳನ್ನು ಸರ್ಕಾರವು ಮರೆತಿದೆ ಎಂದು ಹಲವರು ಆಕ್ಷೇಪಣೆಗಳನ್ನು ಎತ್ತಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಅತ್ಯಂತ ನಂಬಿಕಸ್ಥ ದಂಡನಾಯಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ಇಡಲು ಸರ್ಕಾರ ಮುಂದಾಗಿದೆ. ಆದರೆ ಇದನ್ನು ಲೇಖಕರು ಮತ್ತು ಇಲ್ಲಿನ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

To Hubballi Airport da. ra Bendre Demand to name

ಸಂಗೊಳ್ಳಿ ರಾಯಣ್ಣ ಧಾರವಾಡ ಪ್ರದೇಶದೊಂದಿಗೆ ಯಾವ ಬಗೆಯಲ್ಲೂ ಸಂಪರ್ಕ ಹೊಂದಿರಲಿಲ್ಲ. ರಾಯಣ್ಣ ಕೇವಲ ಕಿತ್ತೂರು ರಾಣಿ ಚೆನ್ನಮ್ಮನ ದಂಡನಾಯಕ ಆಗಿದ್ದರು ಮತ್ತು ಬೆಳಗಾವಿ ಪ್ರದೇಶಕ್ಕೆ ಸೀಮಿತರಾಗಿದ್ದರು. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿಡಲು ನಿರ್ಧರಿಸಿದಾಗ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವ ಅಗತ್ಯವಿರಲಿಲ್ಲ ಎಂದು ಹೇಳಲಾಗುತ್ತಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಈ ಭಾಗದ ಹಿರಿಯ ಸಾಹಿತಿ, ಕವಿ ದ.ರಾ.ಬೇಂದ್ರೆ ಅವರ ಹೆಸರನ್ನು ಇಡದೆ ಸಂಗೊಳ್ಳಿ ರಾಯಣ್ಣ ಹೆಸರಿಡಲು ರಾಜ್ಯ ಸರ್ಕಾರ ಮುಂದಾದರೆ ಭಾರಿ ಪ್ರತಿಭಟನೆ ನಡೆಸುವುದಾಗಿ ಇಲ್ಲಿನ ಜನತೆ ಎಚ್ಚರಿಸಿದ್ದಾರೆ.

ಕನ್ನಡದ ಖ್ಯಾತ ಸಾಹಿತಿ:

ಧಾರವಾಡವು ಸಂಗೀತ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡಿದಂತೆ ಈ ಕ್ಷೇತ್ರದ ವ್ಯಕ್ತಿಗಳ ಹೆಸರನ್ನು ವಿಮಾನ ನಿಲ್ದಾಣಕ್ಕೂ ಇಡಬೇಕು ಎಂದು ಆಗ್ರಹಿಸಲಾಗಿದೆ.

ಅತ್ಯುನ್ನತ ಸಾಹಿತ್ಯಿಕ ಗೌರವ ಜ್ಞಾನಪೀಠಕ್ಕೆ ಭಾಜನರಾದ ದಾರಾ ಬೇಂದ್ರೆಯವರು ಕನ್ನಡ ಕಾವ್ಯ ಮತ್ತು ಸಾಹಿತ್ಯದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಮತ್ತು ಜಾಗತಿಕವಾಗಿ ಧಾರವಾಡಕ್ಕೆ ಬಲವಾದ ಮನ್ನಣೆಯನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆಗಳನ್ನು ಜನರು ವ್ಯಾಪಕವಾಗಿ ಓದುತ್ತಾರೆ. ಅವರು ಕನ್ನಡ ಸಾಹಿತ್ಯದ ಇತಿಹಾಸದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಆದರೆ, ಬೇಂದ್ರೆಯವರಿಗೆ ಕುವೆಂಪು, ಮತ್ತು ಇತರ ಕವಿಗಳಂತೆ ಯಾವುದೇ ಮನ್ನಣೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಬದಿಗೆ ಸರಿದ ಬೇಂದ್ರೆ:

ಮತ್ತೊಬ್ಬ ಮಹಾಕವಿ ಕುವೆಂಪು ಅವರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಟ್ಟಂತೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೂ ಮಹಾಕವಿ ದ.ರಾ.ಬೇಂದ್ರೆ ಅವರ ಹೆಸರಿಡಬೇಕು ಎಂದು ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯ ಜನರು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಬ್ರಿಟಿಷರೊಂದಿಗಿನ ಕಿತ್ತೂರು ರಾಣಿ ಚೆನ್ನಮ್ಮನ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣನ ಕೊಡುಗೆ ಅಪಾರ ಎಂದು ಇಲ್ಲಿನ ಜನರು ಮತ್ತು ಸಾಹಿತಿಗಳು ಅಭಿಪ್ರಾಯಪಡುತ್ತಾರೆ. ಆದರೆ, ಕರ್ನಾಟಕದ ಇತಿಹಾಸದಲ್ಲಿ ಎಲ್ಲಿಯೂ ಬೇಂದ್ರೆ ಅವರಿಗೆ ಮನ್ನಣೆಯ ಸ್ಥಾನ ನೀಡಿಲ್ಲ. ಬೇಂದ್ರೆ ಅವರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಸರಕಾರ ಮರುಚಿಂತನೆ ಮಾಡಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬೇಂದ್ರೆ ಹೆಸರಿಡಬೇಕು ಎಂಬುದು ಜನರ ಒತ್ತಾಯವಾಗಿದೆ.

ಏತನ್ಮಧ್ಯೆ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ದ ರಾ ಬೇಂದ್ರೆ ಹೆಸರಿಡಲು ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದಕ್ಕೆ ಹಲವಾರು ಜನರು ಈ ಅಭಿಯಾನವನ್ನು ಬೆಂಬಲಿಸುತ್ತಿದ್ದಾರೆ. ಸರ್ಕಾರ ಮತ್ತು ಅದರ ಮಂತ್ರಿಗಳನ್ನು ವಿಮಾನ ನಿಲ್ದಾಣಕ್ಕೆ ಬೇಂದ್ರೆ ಹೆಸರಿಸುವಂತೆ ಒತ್ತಾಯಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+