ಹುಬ್ಬಳ್ಳಿ: ಬಯಸದೆ ಬಂದ "ಗನ್ ಮ್ಯಾನ್" ಭಾಗ್ಯ!

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್, 12 : ಜೀವ ಬೆದರಿಕೆ ಇದೆ. ನಮಗೆ ಗನ್ ಮ್ಯಾನ್ ಸೆಕ್ಯೂರಿಟಿ ನೀಡಿ ಎಂದು ಅಂಗಲಾಚಿ ಬೇಡಿದರೂ ಅವರಿಗೆ ಗನ್ ಮ್ಯಾನ್ ನೀಡಲ್ಲ. ಆದರೆ ಹುಬ್ಬಳ್ಳಿಯ ಸಂಘ ಪರಿವಾರ ಮತ್ತು ಬಿಜೆಪಿ ಧುರೀಣರಿಗೆ ಕೇಳದೆನೇ ಇಲ್ಲಿನ ಪೊಲೀಸ್ ಇಲಾಖೆ ಗನ್ ಮ್ಯಾನ್ ನೀಡಿದ್ದಾರೆ ಎಂದು ಆರೋಪಗಳು ಕೇಳಿ ಬಂದಿವೆ.

ಬಿಜೆಪಿ ಮಹಾನಗರದ ಅಧ್ಯಕ್ಷ ನಾಗೇಶ ಕಲಬುರ್ಗಿ, ವಿಶ್ವ ಹಿಂದೂ ಪರಿಷತ್ ಮುಖಂಡ ಜಯತೀರ್ಥ ಕಟ್ಟಿ, ಮಹಾನಗರ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣನವರ್ ಅವರಿಗೆ ಕೇಳದನೇ ಗನ್ ಮ್ಯಾನ್ ನೀಡಿಲಾಗಿದೆ.

ನಾವು ಯಾವುದೇ ಗನ್ ಮ್ಯಾನ್ ಕೊಡಿ ಎಂದು ಕೇಳಿಲ್ಲ ಆದರೂ ನಮಗೆ ಗನ್ ಮ್ಯಾನ್ ನೀಡಿದ್ದಾರೆಂದು ಸ್ವತಃ ಗನ್ ಮ್ಯಾನ್ ಪಡೆದುಕೊಂಡರೇ ಹೇಳಿದ್ದಾರೆ.

Under threat from miscreants,hubballi police provides gunman security for BJP and vhp leader

ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ ಮಹಾರಾಷ್ಟ್ರದ ಮುಂಬಯಿನಲ್ಲಿ ಸಭೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿ ಹುಬ್ಬಳ್ಳಿಗೆ ಹಂತಕರು ಬಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಪ್ರಮುಖರಿಗೆ ಗನ್ ಮ್ಯಾನ್ ಒದಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಈ ಬಗ್ಗೆ ಹು-ದಾ ಪೊಲೀಸ್ ಆಯುಕ್ತರನ್ನು ಕೇಳಿದರೆ, ಜೀವ ಬೆದರಿಕೆ ಹಿನ್ನೆಲೆಯಲ್ಲಿ ಗನ್ ಮ್ಯಾನ್ ಸೌಕರ್ಯವನ್ನು ಹು-ಧಾ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಒದಗಿಸಿದ್ದಾರೆ.

ಮೊದಲೇ ಕೋಮು ಗಲಭೆಯಿಂದಾಗಿ ಸೂಕ್ಷ್ಮ ಪ್ರದೇಶವೆಂದು ಪೊಲೀಸ್ ಇಲಾಖೆಯಲ್ಲಿ ಗುರುತಿಸಲ್ಪಟ್ಟಿದೆ. ಹೀಗಾಗಿ ಗಲಭೆಗೆ ಮುನ್ನುಡಿ ಇಡಲು ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ತಿಳಿದು ಬಂದಿರುವುದರಿಂದ ಗನ್ ಮ್ಯಾನ್ ಒದಗಿಸಲಾಗಿದೆ ಎಂದು ರಾಣೆ ಸ್ಪಷ್ಟಪಡಿಸಿದ್ದಾರೆ.

ಸುರಕ್ಷತೆ ದೃಷ್ಠಿಯಿಂದ ಉಮೇಶ ದುಶಿ, ಸುಭಾಸಸಿಂಗ್ ಜಮಾದಾರ, ಮಹೇಂದ್ರ ಕೌತಾಳ, ಗಣು ಜರತಾಘರ ಅವರಿಗೆ ಗನ್ ಮ್ಯಾನ್ ಪಡೆಯಲು ಹೇಳಿದ್ದೇವೆ. ಆದರೆ ಅವರು ನಿರಾಕರಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ರಾಣೆ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Under threat from miscreants, Hubballi-Dharwad Police will now be guarded by Gunman Security provides to some hubballi bjp and vhp leaders.
Please Wait while comments are loading...