ಹುಬ್ಬಳ್ಳಿ-ಧಾರವಾಡಕ್ಕೆ ತೆರಳುವವರಿಗೆ ಸಹಾಯಕವಾಗಲಿದೆ ಈ ಆ್ಯಪ್

By: ನಮ್ಮ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಅಕ್ಟೋಬರ್ 12: ಇನ್ನುಮುಂದೆ ನೀವು ಹುಬ್ಬಳ್ಳಿಗೆ ಬಂದು ದಾರಿ ಹೋಕರನ್ನು ತಡೆದು ಯಾವ ಸ್ಥಳ ಎಲ್ಲಿ ಬರುತ್ತೆ ಎಂದು ಕೇಳಿ ತಲೆ ಕಡೆಸಿಕೊಳ್ಳಬೇಕಾಗಿಲ್ಲ. ಇದಕ್ಕೆಲ್ಲಾ ಒಂದು ಪರಿಹಾರ ಎಂಬಂತೆ ಹೊಸ ಆ್ಯಪ್ ಸಿದ್ದಗೊಂಡಿದೆ.

ಅವಳಿ ನಗರಗಳ ಪ್ರಮುಖ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು, ಹೋಟೆಲ್ಗಳು, ಕಾಲೇಜುಗಳು, ಅಷ್ಟೆ ಅಲ್ಲ ಪಬ್ ಮತ್ತು ಬಾರ್ ಗಳ ಬಗ್ಗೆ ಮಾಹಿತಿ ತಿಳಿಯಲು ನೀವು ಈ ಆ್ಯಪ್ ಬಳಸಬಹುದು.

ಅಂದಹಾಗೆ ಈ ಆ್ಯಪ್ ತಯಾರಿಸಿದ್ದು ಹುಬ್ಬಳ್ಳಿಯ ನಿವಾಸಿಯಾದ ಗೌರೀಶ್. ದಾವಣಗೆರೆಯ ಬಾಪೂಜಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಕಲಿತಿರುವ ಇವರು ಎಂಜಿನಿಯರಿಂಗ್ ಕಲಿತು ಕೆಲಸಕ್ಕಾಗಿ ಅವರಿವರ ಎದಿರು ಕೈಕಟ್ಟಿ ನಿಲ್ಲುವ ಬದಲು ಸಮಾಜಕ್ಕೆ ತನ್ನದೇ ಆದ ಕೊಡುಗೆ ಕೊಡಲು ಈ ಆ್ಯಪ್ ಸಿದ್ಧಪಡಿಸಿದ್ದಾರೆ.

ಹೊರ ಊರಿನಿಂದ ಬರುವವರಿಗಾಗಿ ಈ ಆ್ಯಪ್

ಹೊರ ಊರಿನಿಂದ ಬರುವವರಿಗಾಗಿ ಈ ಆ್ಯಪ್

"ವೆಡ್ಡಿಂಗ್ ಇನ್ವಿಟೇಷನ್ ಎನ್ನುವ ಆ್ಯಪ್ ಅನ್ನು ಮೊದಲು ಸಿದ್ಧಪಡಿಸಿದ್ದದ್ದೆ. ಇದೀಗ ಅವಳಿ ನಗರದ ಮತ್ತು ಹೊರ ಊರುಗಳಿಂದ ಬರುವ ಜನರಿಗೆ ಸುಲಭವಾಗಿ ಊರಿನ ಬಗ್ಗೆ ತಿಳಿದುಕೊಳ್ಳಲು ಹೊಸ ಆ್ಯಪ್ ತಯಾರು ಮಾಡಿದ್ದೇನೆ," ಎನ್ನುತ್ತಾರೆ ಗೌರೀಶ್.

ನಾಲ್ಕು ಎಂಬಿ ಆ್ಯಪ್

ನಾಲ್ಕು ಎಂಬಿ ಆ್ಯಪ್

‘mycitie' ಎನ್ನುವ ಈ ಆ್ಯಪ್ ನಾಲ್ಕು ಎಂ.ಬಿ. ಇದೆ. ‘ಬೆಟಾ' ಮಾದರಿಯಲ್ಲಿ ಈ ಆ್ಯಪ್ ಸಿದ್ಧಗೊಂಡಿದೆ.

ನಗರದ ಪ್ರಮುಖ ಸ್ಥಳಗಳ ಮಾಹಿತಿ

ನಗರದ ಪ್ರಮುಖ ಸ್ಥಳಗಳ ಮಾಹಿತಿ

ಆ್ಯಪ್ ನಲ್ಲಿ ನಗರದ ಮತ್ತು ಸುತ್ತ ಮುತ್ತಲಿರುವ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು, ಸಿನಿಮಾ ಮಂದಿರಗಳು, ಶಾಲೆಗಳ ಬಗ್ಗೆ ಮಾಹಿತಿ ಇದೆ.

ಸ್ಥಳಗಳ ಬಗ್ಗೆ ಖಚಿತ ಮಾಹಿತಿ

ಸ್ಥಳಗಳ ಬಗ್ಗೆ ಖಚಿತ ಮಾಹಿತಿ

ಆಸ್ಪತ್ರೆ, ಹೋಟೆಲ್, ಕಾಲೇಜು ಆಯ್ಕೆ ಮಾಡಿಕೊಂಡ ಬಳಿಕ ಅದು ಇರುವ ವಿಳಾಸ, ದೂರವಾಣಿ ಸಂಖ್ಯೆ, ನಿಗದಿತ ಸ್ಥಳಕ್ಕೆ ಹೇಗೆ ತಲುಪಬೇಕು ಎನ್ನುವುದರ ಬಗ್ಗೆಯೂ ಇದರಲ್ಲಿ ಮಾಹಿತಿ ಇದೆ. ಇನ್ನು ಈ ಆ್ಯಪ್ ಗ್ರಾಮೀಣ ಜನರಿಗೆ ಮತ್ತು ಬೇರೆಯ ಊರುಗಳಿಂದ ಬಂದ ಜನರಿಗೆ ಉಪಯೋಗವಾಗಲಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The new app has been released to find information about major hospitals, police stations, hotels, colleges, pubs and bars in Hubballi-Dharwad twin cities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ