ವಿರೋಧದ ಮಧ್ಯೆ ಹುಬ್ಬಳ್ಳಿಯ ಎಪಿಎಂಸಿಯಲ್ಲಿ 'ಇ-ಪೇಮೆಂಟ್'ಗೆ ಚಾಲನೆ

Posted By: Basavaraj
Subscribe to Oneindia Kannada

ಹುಬ್ಬಳ್ಳಿ, ಜುಲೈ 24: ವ್ಯಾಪಾರಸ್ಥರ ವಿರೋಧದ ಮಧ್ಯೆಯೇ ಏಷ್ಯಾದ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಅಮರಗೋಳ ಎಪಿಎಂಸಿಯಲ್ಲಿ ಸೋಮವಾರದಂದು ಇ-ಪೇಮೆಂಟ್‌ನ ಪ್ರಾಯೋಗಿಕ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

ಇ-ಪೇಮೆಂಟ್ ವಿರೋಧಿಸಿದ ವರ್ತಕರು ವಹಿವಾಟು ನಡೆಸದಿರುವ ಕಾರಣ ಮಾರುಕಟ್ಟೆಗೆ ಬಂದಿದ್ದ 15 ಕ್ವಿಂಟಲ್ ಹೆಸರು ಮತ್ತು 20 ಕ್ವಿಂಟಲ್ ಸೊಯಾಬಿನ್ ಧಾನ್ಯಗಳನ್ನು ಮಾರ್ಕೆಟ್ ಫೆಡೆರೆಷನ್‌ನವರು ಖರೀದಿಸಿದರಲ್ಲದೆ ರೈತರ ಖಾತೆಗಳಿಗೆ ಹಣ ಜಮೆ ಮಾಡಿದ್ದಾರೆ.

The E-Payment system for farmers has launched in Hubballi Amargol APMC

ಇ-ಪೇಮೆಂಟ್ ವ್ಯವಸ್ಥೆ ಜಾರಿ ವಿರೋಧಿಸಿ ಅಮರಗೋಳ ಎಪಿಎಂಸಿ ವರ್ತಕರ ಸಂಘ ಜುಲೈ 24 ರಂದು ವಹಿವಾಟಿನಿಂದ ದೂರ ಉಳಿಯಲು ನಿರ್ಧರಿಸಿತ್ತು. ಅದರಂತೆ ಇಂದು ವರ್ತಕರು ಯಾವುದೇ ವಹಿವಾಟು ನಡೆಸಲಿಲ್ಲ. ಅಲ್ಲದೇ ಜುಲೈ 27ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತಿರ್ಮಾನಿಸಿದ್ದಾರೆ.

ವರ್ತಕರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಜು 27 ರಂದು ತರಕಾರಿ ಮತ್ತು ಈರುಳ್ಳಿ ವಹಿವಾಟು ಸಹ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಪದ್ಧತಿಯನ್ನು ರಾಜ್ಯದ ಎಲ್ಲ 160 ಎಪಿಎಂಸಿಗಳಲ್ಲಿ ಏಕಕಾಲಕ್ಕೆ ಜಾರಿಗೊಳಿಸಬೇಕು. ಇ-ಪೇಮೆಂಟ್ ಜಾರಿಯಾದ ನಂತರ ಹಮಾಲರಿಗೆ ಯಾರು ಹಣ ಪಾವತಿಸಬೇಕು. ವರ್ತಕರು ಪಾವತಿಸಿದರೆ ಅವರಿಗೆ ಯಾರು ನೀಡುವರು. ಜಿಎಸ್‌ಟಿ ಹಣ ಯಾರು, ಯಾರಿಗೆ ಕೊಡಬೇಕು ಎಂಬ ಬಗ್ಗೆ ಸ್ಪಷ್ಟನೆ ಸೇರಿದಂತೆ ಹಲವು ಪ್ರಶ್ನೆಗಳಿಗೆ ಟಿಎಪಿಎಂಎಸ್ ಈವರೆಗೂ ಉತ್ತರ ನೀಡಿಲ್ಲ.

H D Kumaraswamy says, If B S Yeddyurappa has guts, let him come

ಈ ಕಾರಣದಿಂದ ಹಲವು ನ್ಯೂನ್ಯತೆಗಳನ್ನು ನಿವಾರಿಸಿ ರಾಜ್ಯಾದಾದ್ಯಂತ ಏಕಕಾಲಕ್ಕೆ ಇ-ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The E-Payment system for farmers has launched in Hubballi Amargol APMC today on experiment basis.
Please Wait while comments are loading...