ಹಲವು ರೈಲುಗಳ ಸಂಚಾರ ಆರಂಭಿಸಲಿದೆ ನೈಋತ್ಯ ರೈಲ್ವೆ, ಪಟ್ಟಿ
ಹುಬ್ಬಳ್ಳಿ, ಜೂನ್ 17; ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಹಲವಾರು ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ಪುನಃ ಆರಂಭಿಸಲಿದೆ. ಜೂನ್ 18, 19 ಮತ್ತು 20 ರಿಂದ ಈ ರೈಲುಗಳ ಸಂಚಾರ ಆರಂಭವಾಗಲಿದೆ.
ಕರ್ನಾಟಕದಲ್ಲಿಯೇ ವಿವಿಧ ಜಿಲ್ಲೆಗಳ ನಡುವೆ ಸಂಚಾರ ನಡೆಸುವ ಮತ್ತು ಬೇರೆ ರಾಜ್ಯಗಳಿಗೆ ಸಂಚಾರ ನಡೆಸುವ ರೈಲುಗಳ ಸಂಚಾರ ಆರಂಭವಾಗಲಿದೆ. ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿರುವ ಹಿನ್ನಲೆಯಲ್ಲಿ ರೈಲು ಸಂಚಾರ ಪುನಃ ಆರಂಭವಾಗುತ್ತಿದೆ.
ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಮಾರ್ಗದಲ್ಲಿ ಮೊದಲು ರೈಲುಗಳ ಸಂಚಾರ ಪ್ರಾರಂಭವಾಗಲಿದೆ. ಹಲವು ರೈಲುಗಳನ್ನು ಕೋವಿಡ್ 2ನೇ ಅಲೆ ಆರಂಭವಾದ ಬಳಿಕ ಸ್ಥಗಿತಗೊಳಿಸಲಾಗಿತ್ತು, ಈಗ ಸಂಚಾರ ಪ್ರಾರಂಭಿಸಲಾಗುತ್ತಿದೆ.

* ರೈಲು ಸಂಖ್ಯೆ 02725 ಕೆ. ಎಸ್. ಆರ್. ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಯು 18/6/2021 ರಿಂದ ಮತ್ತು ರೈಲು ಸಂಖ್ಯೆ 02726 ಧಾರವಾಡ-ಕೆ. ಎಸ್. ಆರ್. ಬೆಂಗಳೂರು ಎಕ್ಸ್‌ಪ್ರೆಸ್ ರೈಲು 19/6/2021 ರಿಂದ ಆರಂಭವಾಗುತ್ತಿದೆ.
* ರೈಲು ಸಂಖ್ಯೆ 07307 ಮೈಸೂರು-ಬಾಗಲಕೋಟೆ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆ 20/6/2021 ರಿಂದ ಮತ್ತು ರೈಲು ಸಂಖ್ಯೆ 07308 ಬಾಗಲಕೋಟೆ-ಮೈಸೂರು ಎಕ್ಸ್‌ಪ್ರೆಸ್ ವಿಶೇಷ ಸೇವೆ 21/6/2021 ರಿಂದ ಪ್ರಾರಂಭವಾಗುತ್ತಿದೆ.
ಈ ರೈಲು ಸೇವೆಗಳನ್ನು ಮುಂದಿನ ಸೂಚನೆಯವರೆಗೆ ಮುಂದುವರೆಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗೆಯೇ ಸಂಚಾರ ಆರಂಭಿಸುವ ಅಂತರರಾಜ್ಯ ರೈಲುಗಳ ಪಟ್ಟಿ ಹೀಗಿದೆ.
We are extending the following #train services, for the convenience of passengers as per demand. #SWRUpdates @PIBBengaluru @PIB_Panaji @KarnatakaVarthe @RailMinIndia @DDNewslive (1/6) pic.twitter.com/i9mJZhptDx
— South Western Railway (@SWRRLY) June 16, 2021












Click it and Unblock the Notifications