ರಾಜ್ಯ ಒಲಿಂಪಿಕ್ಸ್ ನ ಎಲ್ಲಾ ಈಜು ಸ್ಟರ್ಧೆಗಳ ಸಂಪೂರ್ಣ ಫಲಿತಾಂಶ ಪಟ್ಟಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ, 8 : ನಗರದ ಈಜುಕೋಳದಲ್ಲಿ ನಡೆದ ಪುರುಷ ಮತ್ತು ಮಹಿಳೆಯರ ವಿವಿಧ ವಿಭಾಗಗಳ ಈಜು ಸ್ಪರ್ಧೆಗಳು ಮುಕ್ತಾಗೊಂಡಿದ್ದು ಈ ಸ್ಪರ್ಧೆಗಳಲ್ಲಿ ಬೆಂಗಳೂರಿನ ಮಹಿಳಾ ಮಣಿಗಳು ಮತ್ತು ಪುರುಷ ಈಜು ಪಟುಗಳ ಪಾರಮ್ಯ ಮೆರೆದರು. ಆ ಎಲ್ಲಾ ಫಲಿತಾಂಶಗಳ ಪಟ್ಟಿ ಇಲ್ಲಿದೆ.

ಪುರಷರ ಹಾಗೂ ಮಹಿಳೆಯರ 1500 ಮೀ. ಫ್ರೀ ಸ್ಟೈಲ್ ಈಜು ಸ್ಪರ್ಧೆ ಯಲ್ಲಿ ಬೆಂಗಳೂರಿನ ಬಸವನಗುಡಿಯ ಅವಿನಾಶ್ ಮಾಣಿ ಹಾಗೂ ಖುಷಿ ದಿನೇಶ್ ಈ ಇಬ್ಬರು ಚಿನ್ನನ ಪದಕಕ್ಕೆ ಮುತ್ತಿಟ್ಟರು.

ಅವಿನಾಶ್ ಅವರು 1500 ಮೀಟರ್ ನ್ನು 17.40 ಸೆಕೆಂಡ್ ನಲ್ಲಿ ಗುರಿ ತಲುಪಿದರೆ ಮಹಿಳೆಯರ ವಿಭಾಗದಲ್ಲಿ ಖುಷಿ 18:57 ಸೆಕೆಂಡ್ ಸಮಯದಲ್ಲಿ ಗುರಿಮುಟ್ಟಿ ಚಿನ್ನಕ್ಕೆ ಕೊರಳೊಡ್ಡಿದರು.

ಉಳಿದಂತೆ ಬಸವನಗುಡಿ ಸೆಂಟರ್ ನ ಓಂಕುಮಾರ ಟಿ ಹೆಚ್ (17.59) ಹಾಗೂ ರಾಯನ್ ಮೊಹಮ್ಮದ್ ಮೆಕ್ಕಿ (18.56) ಪುರುಷರ ವಿಭಾಗದಲ್ಲಿ ಅನುಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಹಾಗೆಯೇ ಮಹಿಳೆಯರ ವಿಭಾಗದಲ್ಲಿ ಧೃತಿ ಮುರಳಿಧರ್ (19.09) ಹಾಗೂ ನಿಖಿತ ಎಸ್ ವಿ (19.44) ಅನುಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು. ಇನ್ನೀತರ ವಿವಿಧ ವಿಭಾಗದ ಈಜು ಸ್ಪರ್ಧೆ ಫಲಿತಾಂಶ ಮುಂದೆ ಇದೆ.

50 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆ

50 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆ

ಪುರಷರ ಹಾಗೂ ಮಹಿಳೆಯರ 50 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಗೌರವ್ ಯಾದವ್ ಕೆ ಎ (25.17 ಸೆಕೆಂಡ್) ಪೃಥ್ವಿ ಎಂ (25.61 ಸೆಕೆಂಡ್) ವೈಷ್ಣವ ಹೆಗಡೆ (25.81 ಸೆಕೆಂಡ್) ಮತ್ತು ಸ್ನೇಹಾ ಟಿ (29.18 ಸೆಕೆಂಡ್), ಮಯೂರಿ ಲಿಂಗರಾಜು (29.30 ಸೆಕೆಂಡ್) ದೀಕ್ಷಾ ರಮೇಶ್ (29.37ಸೆಕೆಂಡ್) ಗುರಿ ಮುಟ್ಟುವ ಮೂಲಕ ಪ್ರಥಮ, ಧ್ವಿತೀಯ, ತೃತೀಯ, ಸ್ಥಾನ ಪಡೆದರು.

ಪುರಷ, ಮಹಿಳೆಯರ 100ಮೀ. ಬ್ಯಾಕ್ ಸ್ಟ್ರೋಕ್ ವಿಭಾಗ

ಪುರಷ, ಮಹಿಳೆಯರ 100ಮೀ. ಬ್ಯಾಕ್ ಸ್ಟ್ರೋಕ್ ವಿಭಾಗ

ಪುರಷರ ಹಾಗೂ ಮಹಿಳೆಯರ 100ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಅರವಿಂದ ಎಂ (1.02) ಹೆಮಂತ್ ಜೇನುಕಲ್ ವಿ ಬಿ (1.04), ನಿಶಾಂತ ಕುಮಾರ್ (1.04) ಮತ್ತು ಶ್ರೀಯಾ ಭಟ್ (1.16) ಭೂಮಿಕಾ ಆರ್ ಕೇಸರ್ಕರ್ (1.16), ವೈಷ್ಣವಿ ಪಿ (1.20) ಕ್ರಮವಾಗಿ ಪ್ರಥಮ, ಧ್ವಿತೀಯ, ತೃತೀಯ, ಸ್ಥಾನ ಪಡೆದರು.

ಪುರುಷ&ಮಹಿಳೆಯರ 100 ಮಿ. ಬ್ರೆಸ್ಟ್ ಸ್ಟ್ರೋಕ್

ಪುರುಷ&ಮಹಿಳೆಯರ 100 ಮಿ. ಬ್ರೆಸ್ಟ್ ಸ್ಟ್ರೋಕ್

ಪುರುಷರ 100 ಮಿ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಪುತ್ತೂರಿನ ವೈಷ್ಣವ ಹೆಗಡೆ 1:10ಸೆಕೆಂಡ್ ನಲ್ಲಿ 565 ಅಂಕ ಗಳಿಸಿ ಪ್ರಥಮ. ದ್ವಿತೀಯ ಬೆಂಗಳೂರಿನ ಬಸವನಗುಡಿಯ ಪೃಧ್ವಿ ಎಂ (1:11.72) 541 ಅಂಕದೊಂದಿಗೆ ದ್ವೀತಿಯ. ನಿಶಾಂತ ಎಸ್ (1:13.76) 497 ಅಂಕಗಳಿಸಿ ತೃತೀಯ. ಇದೇ ವಿಭಾಗದ ಮಹಿಳೆಯರ ಸ್ಪರ್ಧೆಯಲ್ಲಿ ಗ್ಲೋಬಲ್ ಸ್ವಿಮ್ ಕೇಂದ್ರದ ಹರ್ಶಿತಾ ಜಯರಾಮ್ (1:21.56) 493 ಅಂಕಗಳಿಸಿ ಪ್ರಥಮ. ಶ್ರೀಯಾ ಆರ್ ಭಟ್ (1:23.08) 466 ಅಂಕ ದ್ವಿತೀಯ, ಪ್ರತೀಕ್ಷಾ ಪಾಟೀಲ್ (1:24.30) 446 ಅಂಕ ಗಳಿಸಿ ತೃತಿಯ ಸ್ಥಾನ ಪಡೆದರು.

200 ಮೀ. ಬ್ರೆಸ್ಟ್ ಸ್ಟ್ರೋಕ್ ಈಜು ಸ್ಪರ್ಧೆ

200 ಮೀ. ಬ್ರೆಸ್ಟ್ ಸ್ಟ್ರೋಕ್ ಈಜು ಸ್ಪರ್ಧೆ

200 ಮೀ. ಬ್ರೆಸ್ಟ್ ಸ್ಟ್ರೋಕ್ ಈಜು ಸ್ಪರ್ಧೆ: 200 ಮೀ. ಬ್ರೆಸ್ಟ್ ಸ್ಟ್ರೋಕ್ ಈಜು ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಪೃಥ್ವಿ ಎಂ(ಪ್ರಥಮ) 2.36 ಸೆಕೆಂಡ್, ಅರವಿಂದ ಎಂ(ದ್ವಿತೀಯ) 2.37ಸೆಕೆಂಡ್ ಹಾಗೂ ಪೃಥ್ವಿಕ್ ಡಿ ಎಸ್(ತೃತೀಯ) 2.37 ಸೆಕೆಂಡ್ ಮತ್ತು ಮಹಿಳೆಯರ ವಿಭಾಗದಲ್ಲಿ ಹರ್ಶಿತಾ ಜಯರಾಂ(ಪ್ರಥಮ) 2.56 ಸೆಕೆಂಡ್, ಶ್ರೀಯಾ ಭಟ್ (ದ್ವಿತೀಯ)2.58 ಸೆಕೆಂಡ್ ಹಾಗೂ ಪ್ರತಿಕ್ಷಾ ಪಟೇಲ್(ತೃತೀಯ) 2.58ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ ಕ್ರಮವಾಗಿ ಪ್ರಥಮ, ಧ್ವಿತೀಯ, ತೃತೀಯ, ಸ್ಥಾನ ಪಡೆದರು.

ಪುರುಷ,ಮಹಿಳೆಯರ 4*200 ಮೀ ಫ್ರೀ ಸ್ಟೈಲ್ ರಿಲೇ ಈಜು

ಪುರುಷ,ಮಹಿಳೆಯರ 4*200 ಮೀ ಫ್ರೀ ಸ್ಟೈಲ್ ರಿಲೇ ಈಜು

ಪುರುಷ,ಮಹಿಳೆಯರ 4*200 ಮೀ ಫ್ರೀ ಸ್ಟೈಲ್ ರಿಲೇ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಬಸವನಗುಡಿ ಅಕ್ವಟಿಕ್ ಕೇಂದ್ರದ ಎ ತಂಡ 8:10 ಸೆಕೆಂಡ್ ಗಳಲ್ಲಿ 620 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. ಅದೇ ಕೇಂದ್ರದ ಬಿ ತಂಡ 9.19 ಸೆಂಕೆಂಡ್ ಗಳಲ್ಲಿ 418 ಅಂಕದೊಂದಿಗೆ ಎರಡನೇ ಸ್ಥಾನ ಪಡೆದರು. ಸ್ವಿಮ್ಲೈಫ್ ತಂಡ 13.49 ಸೆಗಳಲ್ಲಿ 128 ಅಂಕಗಳಿಸಿ ತೃತೀಯ ಸ್ಥಾನ ಪಡೆದರು. ಇನ್ನು ಮಹಿಳೆಯರ ಪೈಕಿ ಬಸವನಗುಡಿ ಅಕ್ವಟಿಕ್ ಕೇಂದ್ರದ ಅನುಕ್ರಮವಾಗಿ ಎ ಮತ್ತು ಬಿ ತಂಢಗಳು 524 ಹಾಗೂ 509 ಅಂಕಗಳಿಸುವ ಮೂಲಕ ಪ್ರಥಮ, ದ್ವಿತೀಯ ಸ್ಥಾನ ಪಡೆದರು.

ಪುರುಷರ, ಮಹಿಳೆಯ 200 ಬ್ಯಾಕ್ ಸ್ಟ್ರೋಕ್ ಸ್ಪರ್ಧೆ

ಪುರುಷರ, ಮಹಿಳೆಯ 200 ಬ್ಯಾಕ್ ಸ್ಟ್ರೋಕ್ ಸ್ಪರ್ಧೆ

ಪುರುಷರ 200 ಬ್ಯಾಕ್ ಸ್ಟ್ರೋಕ್ ವಿಬಾಗದಲ್ಲಿ ಗೋಬಲ್ ಸ್ವಿಮ್ ಕೇಂದ್ರದ ಹೇಮಂತ ಜೇನುಕಲ್ ವಿ ಬಿ 2.20 ಸೆಕೆಂಡ್ ಗಳಲ್ಲಿ 509 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರು. ಎರಡನೇ ಸ್ಥಾನವನ್ನು ನಿಶಾಂತ ಕುಮಾರ್ 2:23.14 ಸಮಯದಲ್ಲಿ 478 ಅಂಕಗಳ ಮೂಲಕ ಪಡೆದರು. ತೃತೀಯ ಸ್ಥಾನವನ್ನು ಸೌರಭ್ ವೇರ್ಣೇಕರ್ 2:26.19 ಸಮಯದಲ್ಲಿ 448 ಅಂಕ ಗಳಿಸಿ ಪಡೆದರು. ಇದೇ ವಿಭಾಗದ ಮಹಿಳೆಯರ ಸ್ಪರ್ಧೆಯಲ್ಲಿ ಶ್ರೀಯಾ ಆರ್ ಭಟ್ 2:44.34 ಸಮಯದಲ್ಲಿ 434 ಅಂಕಗಳಿಸಿ ಪ್ರಥಮ ಸ್ಥಾನ ಪಡೆದರು. ಶಿಮ್ರಾನ್ ದೀಪಕ್ ಮುಂಗರೆಕರ್ 2:47.89 ಸಮಯದಲ್ಲಿ 403 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದರು. ಮೂರನೇ ಸ್ಥಾನವನ್ನು ಸಾಚಿ ಜಿ 2:48.85 ಸಮಯದಲ್ಲಿ 396 ಅಂಕ ಗಳಿಸಿ ಪಡೆದರು.

800 ಮಿ.ಫ್ರೀ ಸ್ಟೈಲ್ ಈಜು ಸ್ಪರ್ಧೆ

800 ಮಿ.ಫ್ರೀ ಸ್ಟೈಲ್ ಈಜು ಸ್ಪರ್ಧೆ

ಬೆಂಗಳೂರಿನ ಅವಿನಾಶ್ ಮಣಿ(9.19)ಸೆಕೆಂಡ್ ಗಳಲ್ಲಿ 528 ಅಂಕಗಳೊಂದಿಗೆ ಪ್ರಥಮ ಸ್ಥಾನ. ಓಂಕುಮಾರ್ ಟಿ ಹೆಚ್ 492 ಅಂಕದೊಂದಿಗೆ ದ್ವೀತಿಯ. ಲಿತೇಶ್ ಜಿ ಗೌಡ ಮೂರನೇ ಸ್ಥಾನ. ಇದೇ ವಿಭಾಗದ ಮಹಿಳೆಯರ ಸ್ಪರ್ಧೆಯಲ್ಲಿ ಬೆಂಗಳೂರಿನ ಖುಷಿ ದಿನೇಶ್(9:53.88) 575 ಅಂಕ ಗಳಿಸಿ ಪ್ರಥಮ, ನಿಕಿತ ಎಸ್ ವಿ (10:04.64) 545 ಅಂಕಗಳೂಂದಿಗೆ ದ್ವಿತೀಯ ಸ್ಥಾನ ಪಡೆದರೆ, ಪ್ರೇಕ್ಷಾ ಹೆಚ್ ಎಂ (10:07.13) 539 ಅಂಕಗಳಿಸಿ ತೃತಿಯ ಸ್ಥಾನ ಪಡೆದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State level olympics various section swimming competition held at Hubballi-Dharwad. The swimming competition full results list here.
Please Wait while comments are loading...