ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ : ಆ.1ರಿಂದ ದೆಹಲಿ, ಪುಣೆ, ತಿರುಪತಿಗೆ ವಿಮಾನ ಸೇವೆ

By Gururaj
|
Google Oneindia Kannada News

ಹುಬ್ಬಳ್ಳಿ, ಜುಲೈ 04 : ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಸೇವೆ ಆರಂಭವಾಗಲಿದೆ. ಆಗಸ್ಟ್‌ನಿಂದ ದೆಹಲಿ, ಪುಣೆ, ತಿರುಪತಿಗೆ ವಿಮಾನ ಸೇವೆಯನ್ನು ಆರಂಭಿಸಲಾಗುತ್ತದೆ.

ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಮಂಗಳವಾರ ಸ್ಟಾರ್ ಏರ್ಲೈನ್ಸ್‌ ಮಾಲೀಕರಾದ ಸಂಜಯ್ ಘೋದಾವತ್ ಜೊತೆ ಹುಬ್ಬಳ್ಳಿಯಲ್ಲಿ ಮಾತುಕತೆ ನಡೆಸಿದ್ದಾರೆ.

Star Airways to connect Hubballi Delhi, Pune and Tirupati

ಹುಬ್ಬಳ್ಳಿ : ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಿಹುಬ್ಬಳ್ಳಿ : ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಿ

ಸ್ಟಾರ್ ಏರ್ಲೈನ್ಸ್ ಆಗಸ್ಟ್ 1ರಿಂದ ಪ್ರತಿನಿತ್ಯ ಹುಬ್ಬಳ್ಳಿಯಿಂದ ದೆಹಲಿ, ಪುಣೆ, ತಿರುಪತಿಗೆ ವಿಮಾನ ಸೇವೆಯನ್ನು ಆರಂಭಿಸಲಿದೆ. ಪ್ರಹ್ಲಾದ್ ಜೋಶಿ ಜೊತೆಗಿನ ಮಾತುಕತೆಯ ವೇಳೆ ವಿಮಾನ ಸೇವೆ ಆರಂಭಿಸಲು ಸಂಜಯ್ ಘೋದಾವತ್ ಒಪ್ಪಿಗೆ ನೀಡಿದ್ದಾರೆ.

Star Airways to connect Hubballi Delhi, Pune and Tirupati

ಹುಬ್ಬಳ್ಳಿ-ತಿರುಪತಿ ನಡುವೆ ವಿಮಾನ ಸೇವೆ ಆರಂಭವಾದರೆ ಕಡಿಮೆ ದರದಲ್ಲಿ ಜನರು ತಿರುಪತಿಗೆ ಪ್ರಯಾಣ ಬೆಳೆಸಿ ದೇವಾಲಯಕ್ಕೆ ಭೇಟಿ ನೀಡಲು ಅನುಕೂಲವಾಗಲಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಹೂಡಿಕೆ ಮಾಡಲು ಸಹ ಪ್ರಹ್ಲಾದ್ ಜೋಶಿ ಅವರು ಆಹ್ವಾನ ನೀಡಿದ್ದಾರೆ.

ಹುಬ್ಬಳ್ಳಿ : ಬೆಂಗಳೂರು, ಚೆನ್ನೈ, ಅಹಮದಾಬಾದ್‌ಗೆ ವಿಮಾನ ಸೇವೆ ಆರಂಭಹುಬ್ಬಳ್ಳಿ : ಬೆಂಗಳೂರು, ಚೆನ್ನೈ, ಅಹಮದಾಬಾದ್‌ಗೆ ವಿಮಾನ ಸೇವೆ ಆರಂಭ

ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ತಿಂಗಳಿನಲ್ಲಿ ಸ್ಪೈಸ್ ಜೆಟ್ ಕೊಲಂಬೋ ಮತ್ತು ದುಬೈಗೆ ವಿಮಾನ ಹಾರಾಟವನ್ನು ಆರಂಭಿಸಲಿದೆ.

English summary
Star Airways will begin services from Hubballi to New Delhi, Pune and Tirupati from August 1, 2018. IndiGo begin services from Hubballi to Bengaluru, Ahmedabad, Chennai from July 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X