Suicide: ಕೊಲೆಯಾದ ಅಂಜಲಿ ತಂಗಿ ಯಶೋಧಾ ವಿಷಸೇವನೆ
ಹುಬ್ಬಳ್ಳಿ, ಮೇ 19: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ತಮ್ಮ ಮನೆಯಲ್ಲಿ ಹಂತಕನ ಕೈಯಿಂದ ಕೊಲೆಗೀಡಾದ ಯುವತಿ ಅಂಜಲಿ ಅಂಬಿಗೇರ್ ಅವಳ ಅಗಲಿಕೆ ನೋವಿನಿಂದ ತಂಗಿ ಯಶೋಧಾ ಬಳಲುತ್ತಿದ್ದಾರೆ. ಇದೀಗ ಯಶೋಧ ಅವರು ಆತ್ಮಹತ್ಯೆಗೆ ಯತ್ನಿಸಿದರುವ ಘಟನೆ ನಡೆದಿದೆ.
ಹೌದು, ಅಕ್ಕ ಅಂಜಲಿ ಸಾವಿನಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ತಂಗಿ ಯಶೋಧಾ ಅವರು ಮನೆಯಲ್ಲಿಯೇ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಫಿನಾಯಿಲ್ ಕುಡಿದ ಯಶೋಧಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಅವರ ಅಜ್ಜಿ ಗಂಗಮ್ಮ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾಹಿತಿ ನೀಡಿದ್ದಾರೆ.

ಯಶೋಧಾ ಅಂಜಲಿ ಸಾವಿನಿಂದ ತೀರಾ ನೊಂದಿದ್ದಾಳೆ. ಮಾನಸಿಕವಾಗಿ ಕುಸಿದು ಹೋಗಿದ್ದು, ಫಿನಾಯಿಲ್ ಸೇವಿಸಿದ್ದಾಳೆ. ಮ್ಮೊಡನೆ ಇಡೀ ಸಮಾಜ ನಿಂತಿದೆ. ಆದರೂ ಪೊಲೀಸರು ಆರೋಪಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆತನನ್ನು ಗುಣಮುಖನನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ ಎಂದರು.
ಯಶೋಧಾ ಆರೋಗ್ಯದಲ್ಲಿ ಚೇತರಿಕೆ
ಆರೋಪಿಗೆ ಚಿಕಿತ್ಸೆ ಕೊಡಿಸುತ್ತಿರುವ ವಿಷಯಕ್ಕೆ ಯಶೋಧಾ ಹರಿಹಾಯ್ದಿದ್ದಳು. ಅಕ್ಕನನ್ನು ಕೊಂದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುವ ವಿಷಯಕ್ಕೆ ಬೇಸಗೊಂಡು ನಿನ್ನೆ ಬೆಳಗ್ಗೆಯಿಂದಲೂ ಆಕೆ ಮಾನಸಿಕವಾಗಿ ಕುಗ್ಗಿದ್ದಳು. ಏಕಾಏಕಿ ರಾತ್ರಿ ಮನೆಯಲ್ಲಿದ್ದ ಫಿನಾಯಿಲ್ ಕುಡಿದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದೆವು. ಏನು ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಇದೀಗ ಆಕೆ ಗುಣಮುಖಳಾಗುತ್ತಿದ್ದಾಳೆ ಎಂದು ಗಂಗಮ್ಮ ಘಟನೆ ಕುರಿತು ವಿವರಿಸಿದರು.
ಪ್ರಕರಣ ಹಿನ್ನೆಲೆ ಏನು?
ಹುಬ್ಬಳ್ಳಿಯಲ್ಲಿ ಒಂದೇ ತಿಂಗಳ ಅಂತರ ಇಬ್ಬರು ಯುವತಿ ಕೊಲೆ ಒಂದೇ ಮಾದರಿಯಲ್ಲಿ ನಡೆದಿದೆ ಎಂಬುದು ಕಳವಳಕಾರಿ ವಿಷಯ. ನೇಹಾ ಕೊಲೆ ಬಳಿಕ, ಅಂಜಲಿ ಅಂಬಿಗೇರ ಅನ್ನು ಪಾಗಲ್ ಪ್ರೇಮಿ ಬುಧವಾರ ಬೆಳಗ್ಗೆ ಆಕೆಯ ಮನೆಗೆ ನುಗ್ಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಪ್ರೀತಿ ನಿರಾಕರಿಸಿದ್ಧಕ್ಕೆ ಪಾಗಲ್ ಪ್ರೇಮಿ ವಿಶ್ವ ಅಲಿಯಾಸ್ ಗಿರೀಶ್ ಈ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇದು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ವೈಫಲ್ಯದಿಂದ ನಡೆದಿದೆ ಎಂದು ವಿಪಕ್ಷಗಳು, ಮಠಾಧೀಶರು, ವಿವಿಧ ಸಂಘಟನಗಳು ಮುಖ್ಯಸ್ಥುರು ದೂರಿದರು.
ನಂತರ ಕೊಲೆ ಆರೋಪಿ ಗಿರೀಶ್ ನನ್ನು ಪೊಲೀಸರು ದಾವಣಗೆರೆ ಸಮೀಪ ಬಂಧಿಸಿದ್ದರು. ಆತನಿಗೆ ಆನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದನ್ನು ಆಕ್ಷೇಪಿಸಿರುವ ಮೃತ ಅಂಜಲಿ ತಂಗಿ ಸಹೋಧರಿ ಆತನು ನರಳಿ ನರಳಿ ಸಾಯಬೇಕು. ಆತನಿಗೆ ಏಕೆ ಚಿಕಿತ್ಸೆ ಕೊಡಿಸುತ್ತಿರುವುದು ಎಂದು ಶನಿವಾರ ಪ್ರಶ್ನಿಸಿದ್ದರು. ಇದೇ ವಿಚಾರವಾಗಿ ಅವರು ನೋಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಗಂಗಮ್ಮೆ ತಿಳಿಸಿದ್ದಾರೆ.












Click it and Unblock the Notifications