• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈತ್ರಿ ಸರ್ಕಾರ ಕ್ಕೆ ಟೈಂ ಬಾಂಬ್ ಫಿಕ್ಸ್‌ ಮಾಡಿದ್ದು ಸಿದ್ದರಾಮಯ್ಯ: ಜಗದೀಶ್ ಶೆಟ್ಟರ್

|

ಹುಬ್ಬಳ್ಳಿ, ಆಗಸ್ಟ್ 23: ಮೈತ್ರಿ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದ ಸಿದ್ದರಾಮಯ್ಯ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದು ರಾಝಕೀಯ ದ್ವೇಷದಿಂದ ಅಲ್ಲ, ಬದಲಿಗೆ ಸಿದ್ದರಾಮಯ್ಯ ಕೇಳಿದ್ದಕ್ಕೆ ಕೊಟ್ಟಿದ್ದು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಚುನಾವಣೆ ಸೋಲಿಗೆ ನನ್ನ ಮೇಲೆ ಗೂಬೆ ಕೂರಿಸಬೇಡಿ; ಸಿದ್ದರಾಮಯ್ಯ

ಫೋನ್ ಟ್ಯಾಪಿಂಗ್ ಮೂಲಕ ದೇವೇಗೌಡರು ಸಿದ್ದರಾಮಯ್ಯ ಅವರ ಚಲನವಲನ ಗಮನಿಸುತ್ತಿದ್ದರು. ಮೈತ್ರಿ ಸರ್ಕಾರ ಬೀಳಿಸಲು ಸಿದ್ದರಾಮಯ್ಯ ಏನು ಮಾಡಿದರು ಎಂಬುದು ದೇವೇಗೌಡ ಅವರಿಗೆ ಗೊತ್ತಿದೆ, ಹಾಗಾಗಿಯೇ ಈಗ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದಕ್ಕೆ ಸಿದ್ದರಾಮಯ್ಯ ಅವರಿಗೆ ಒಳಗೊಳಗೆ ಸಂತೋಶವಿದೆ ಎಂದ ಶೆಟ್ಟರ್, ಸಿದ್ದರಾಮಯ್ಯ ಅವರ ಆಸೆಯಂತೆಯೇ ನಾವು ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದೇವೆ ಎಂದರು.

ದೇವೇಗೌಡರು ಸ್ವಜಾತಿಯವರನ್ನೇ ಬೆಳೆಸುವುದಿಲ್ಲ: ಸಿದ್ದರಾಮಯ್ಯ

ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡ ವಾಗ್ದಾಳಿ ನಡೆಸಿದ್ದರು. ವಿರೋಧ ಪಕ್ಷ ನಾಯಕ ಆಗಲು ಸರ್ಕಾರವನ್ನೇ ಬೀಳಿಸಿದರು ಎಂದು ದೇವೇಗೌಡ ಹೇಳಿದರು.

ಇದಕ್ಕೆ ಸಿದ್ದರಾಮಯ್ಯ ಸಹ ಇಂದು ಪ್ರತಿಕ್ರಿಯೆ ನೀಡಿದ್ದು, ಇಂತಹಾ ನೀಚ ರಾಜಕಾರಣ ನಾನು ಮಾಡುವುದಿಲ್ಲ, ದೇವೇಗೌಡರು ಯಾರನ್ನೂ ಬೆಳೆಸಲಿಲ್ಲ, ಇಂತಹಾ ರಾಜಕಾರಣದಲ್ಲಿಯೇ ಕಾಲ ತಳ್ಳಿದರು ಎಂದರು.

English summary
Minister Jagadish Shettar said Siddaramaiah fixed time bomb to coalition government. Deve Gowda knows about it so he lambasting on Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X