• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೋಕಸಭೆ ಚುನಾವಣೆ 2019:ಸ್ಪರ್ಧೆಯ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ

By ಹುಬ್ಬಳ್ಳಿ ಪ್ರತಿನಿಧಿ
|
   ಉದ್ದುಕೆ ಕೆಂಪುಗೆ ನಾಮ ಆಕತರಲ್ಲಾ ಅವ್ರುನ್ನ ಕಂಡ್ರೆ ಭಯ ಅಂದಿದ್ದು ನಾನು..!

   ಹುಬ್ಬಳ್ಳಿ, ಮಾರ್ಚ್ 09:ತಿಲಕ ಹಾಕೋರಿಂದ ಭಯ ಅಂತ ನಾನು ಹೇಳಿಲ್ಲ, ನಾಮ ಹಾಕೋರಿಂದ ಭಯ ಎಂದು ಕೈ ತೋರಿಸಿ ಹೇಳಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

   ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾಮ ಹಾಕೋರು ಕ್ರಿಮಿನಲ್ ಗಳು. ಹೀಗಾಗಿ ನಾಮ ಹಾಕೋರಿಂದ ಭಯ ಅಂತ ನಾನು ಹೇಳಿದ್ದೆ.ನನಗಿಂತ ಹಿಂದೂ ಯಾರಿದ್ದಾರೆ, ಮನುಷ್ಯತ್ವ ಇದ್ರೆ ಹಿಂದೂ, ಇಲ್ದೆ ಇದ್ರೆ ಹಿಂದೂ ಅಲ್ಲ ಎಂದರು.

   ತಿಲಕವಿಟ್ಟವರೆಂದರೆ ಭಯ: ಸಿದ್ದರಾಮಯ್ಯಗೆ ಮಹಿಳೆಯರಿಂದ ಭರ್ಜರಿ ಗಿಫ್ಟ್

   ಲೋಕಸಭೆ ಚುನಾವಣೆ ತಯಾರಿ ನಡೀತಾ ಇದೆ. ಆದರೆ ನನಗೆ ಯಾರೂ ಕೂಡ ಕೊಪ್ಪಳದಿಂದ ಸ್ಪರ್ಧೆ ಮಾಡಲು ಹೇಳಿಲ್ಲ. ಚುನಾವಣೆಗೆ ನಾನು ಸ್ಪರ್ಧಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ರಾಹುಲ್ ಗಾಂಧಿ ಚುನಾವಣೆ ಕುರಿತು ಬುದ್ಧಿ ಜೀವಿಗಳ ಜೊತೆ ಚರ್ಚೆ ಮಾಡಲಿದ್ದಾರೆ. ಚರ್ಚೆಗೆ ಯಾರು ಬರಲಿದ್ದಾರೆ ಎನ್ನುವುದು ಗೊತ್ತಿಲ್ಲ. ಪಿಸಿಸಿ ಜೊತೆ ಮಾತನಾಡಿಕೊಂಡು ಚರ್ಚೆ ಇಟ್ಟಿದ್ದಾರೆ. ಚುನಾವಣೆ ಹಾಗೂ ಪ್ರಣಾಳಿಕೆ ಮಾಡುವ‌ ವಿಚಾರದಿಂದ ಚರ್ಚೆ ಏರ್ಪಡಿಸಿರಬಹುದು ಎಂದರು.

   'ನಾಮ' ಕಂಡರೆ ಭಯವೆಂದ ಸಿದ್ದು ವಿರುದ್ಧ #SelfieWithTilak ಅಸ್ತ್ರ

   ಬಿಜೆಪಿಯವರು ರಫೆಲ್ ವರದಿ ಕಳ್ಳತನ ಅಂತಾರೆ, ಮತ್ತೆ ಫೋಟೋ ಕಾಪಿ ತೆಗೆದಿದ್ದಾರೆ ಅಂತಾರೆ. ಯಾವುದನ್ನು ನಂಬೋದು, ಈ ‌ರೀತಿ ಹೇಳಿದ್ರೆ ಕಳ್ಳತನ ನಿಜ ಅನ್ಸುತ್ತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

   ಟ್ವೀಟ್ ನಲ್ಲಿ ಯೋಗಿಯನ್ನು ಎಳೆದ ಸಿದ್ದರಾಮಯ್ಯ: ದುಶ್ಯಾಸನನನ್ನು ನೆನಪಿಸಿದ ಬಿಜೆಪಿ

   ಬಿಜೆಪಿ ಸರ್ಕಾರದಲ್ಲಿ ಕಳವು ಆಗಿದೆ ಅಂದ್ರೆ ತಪ್ಪು ಮಾಡಿದ್ದಾರೆ ಎಂದರ್ಥ.ದಾಖಲೆ ಕೊರ್ಟ್ ಗೆ ನೀಡುವುದು ಬಿಟ್ಟು ಸುಳ್ಳು ಹೇಳ್ತಾ ಇದ್ದಾರೆ. ಯಡಿಯೂರಪ್ಪ ಸೈನಿಕರ ಸಾವಿನಿಂದ ಲಾಭ ಆಗುತ್ತದೆ ಅಂತಾರೆ. ನಮಗೆ ಸೈನಿಕರ ಮೇಲೆ ಹಾಗೂ ರೈತರ ಮೇಲೆ ಇರುವಷ್ಟು ಗೌರವ ಅವರಿಗೆ ಇಲ್ಲ. 'ಜೈಜವಾನ್ ಜೈಕಿಸಾನ್' ಅಂತ ಹೇಳಿದ್ದು ಕಾಂಗ್ರೆಸ್ ನ ಲಾಲ್ ಬಹಾದುರ್ಶಾಸ್ತ್ರಿ. ನಮಗೆ ಸೈನಿಕರ ಬಗ್ಗೆ ಅಪಾರ ಗೌರವ ಇದೆ. ಅದರ ಮೇಲೆ ರಾಜಕಾರಣ ಮಾಡಬಾರದು. ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ದೇಶದ ರಕ್ಷಣೆಗೆ ಪ್ರಥಮ ಆದ್ಯತೆ ಕೊಡಲೇ ಬೇಕಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

   English summary
   Lok Sabha Election 2019: Former CM Siddaramaiah clarifies about contest.Siddaramaiah Said that No one told me to compete in Koppal. I'm not contesting in election.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X