ಹುಬ್ಬಳ್ಳಿ-ಧಾರವಾಡ; ಚಿಗರಿ ಬಸ್‌ನಲ್ಲಿ ಮಹಿಳೆಯರಿಗೆ 'ಶಕ್ತಿ' ಏಕಿಲ್ಲ?

ಹುಬ್ಬಳ್ಳಿ, ಜೂನ್ 20; ಕರ್ನಾಟಕ ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲಿ ಒಂದಾದ 'ಶಕ್ತಿ' ಯೋಜನೆ ಜಾರಿಗೆ ಬಂದಿದೆ. ಒಂದೇ ವಾರದಲ್ಲಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಲಕ್ಷಾಂತರ ಮಹಿಳೆಯರು ಉಚಿತವಾಗಿ ಸಂಚಾರ ನಡೆಸುತ್ತಿದ್ದಾರೆ.

ಅವಳಿ ನಗರವಾದ ಹುಬ್ಬಳ್ಳಿ-ಧಾರವಾಡ ನಡುವೆ ಪ್ರತಿದಿನ 80 ರಿಂದ 100 'ಚಿಗರಿ' ಹೆಸರಿನ ಬಿಆರ್‌ಟಿಎಸ್ ಬಸ್ ಸಂಚಾರ ನಡೆಸುತ್ತದೆ. ಆದರೆ ಸರ್ಕಾರ ಜಾರಿಗೆ ತಂದ 'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಈ ಬಸ್‌ಗಳಲ್ಲಿ ನೀಡಿಲ್ಲ.

Shakti Scheme No Free Ride In Hubballi Dharwad Chigari Bus

'ಶಕ್ತಿ' ಯೋಜನೆಯಡಿ ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ ಮಾತ್ರ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು, ಹವಾನಿಯಂತ್ರಿತ ಎಸಿ ಬಸ್‌ ಆಗಿರುವ 'ಚಿಗರಿ'ಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಇದರಿಂದ ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಸಂಚಾರ ನಡೆಸುವ ಮಹಿಳೆಯರಿಗೆ ತೊಂದರೆ ಉಂಟಾಗಿದೆ.

ಸಾಮಾನ್ಯ ಬಸ್‌ಗೆ ಕಾಯಬೇಕು; ಅವಳಿ ನಗರದ ನಡುವ ಸಂಚಾರ ನಡೆಸುವ ಮಹಿಳೆಯರು ಬಸ್ ನಿಲ್ದಾಣಗಳಲ್ಲಿ ಸಾಮಾನ್ಯ ಬಸ್‌ಗಳು ಬರಲಿ ಎಂದು ಬಿಸಿಲು, ಮಳೆ ಎನ್ನದೇ ಕಾದು ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಆದರೆ ಹವಾನಿಯಂತ್ರಿತ ಎಸಿ ಬಸ್‍ಗಳಲ್ಲಿ ವಿದ್ಯಾರ್ಥಿಗಳ ಸಂಚಾರಕ್ಕೆ ಅವಕಾಶವಿದೆ. ಮಹಿಳೆಯರಿಗೂ ಅವಕಾಶ ಕೊಡಿ ಎಂಬುದು ಒತ್ತಾಯವಾಗಿದೆ.

'ಶಕ್ತಿ' ಯೋಜನೆಯಡಿ ಸರ್ಕಾರ ಮಹಿಳೆಯರ ಪ್ರಯಾಣದ ವೆಚ್ಚವನ್ನು ಸಾರಿಗೆ ಸಂಸ್ಥೆಗಳಿಗೆ ತುಂಬಿಕೊಡಲಿದೆ. ಸಾಮಾನ್ಯ ಬಸ್‍ಗಳಿಗೆ ನೀಡುವ ಹಣವನ್ನು 'ಚಿಗರಿ' ಬಸ್‌ಗಳಿಗೂ ನೀಡಲಿ ಎಂಬುದು ಮಹಿಳೆಯರ ಆಗ್ರಹವಾಗಿದೆ. ಆಗ 'ಚಿಗರಿ'ಯಲ್ಲಿ ಸಹ ಮಹಿಳೆಯರು ಉಚಿತವಾಗಿ ಸಂಚಾರ ನಡೆಸಬಹುದಾಗಿದೆ.

'ಚಿಗರಿ' ಬಸ್‍ಗಳು ಮಹಿಳಾ ಪ್ರಯಾಣಿಕರು ಇಲ್ಲದೇ ದಿನನಿತ್ಯ ಖಾಲಿ ಖಾಲಿ ಓಡುತ್ತಿದೆ. ಹಾಗಾಗಿ ರಾಜ್ಯಾದ್ಯಂತ ಯಶಸ್ವಿಯಾಗಿರುವ 'ಶಕ್ತಿ' ಯೋಜನೆಯನ್ನು ಅವಳಿ ನಗರದಲ್ಲಿ 'ಚಿಗರಿ' ಬಸ್‌ಗಳಿಗೆ ವಿಸ್ತರಣೆ ಮಾಡಿ, ಇದರಿಂದ ಪ್ರತಿನಿತ್ಯ ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಒತ್ತಾಯಿಸಲಾಗಿದೆ.

ಬಿಆರ್‌ಟಿಎಸ್ ಅಥವ 'ಚಿಗರಿ' ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಕುರಿತು ಸಾರಿಗೆ ಇಲಾಖೆ, ಸರ್ಕಾರ ಪುನರ್ ಪರಿಶೀಲಿಸಬೇಕು. ಆದಷ್ಟು ಬೇಗ ಈ ಕುರಿತು ಆದೇಶ ಹೊರಡಿಸಬೇಕು ಎಂದು ಮಹಿಳೆಯರು ಮನವಿ ಮಾಡಿದ್ದಾರೆ.

ಹವಾನಿಯಂತ್ರಿತ ಬಸ್ ಸೇವೆ; ಬಿಆರ್‌ಟಿಎಸ್ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಅನುಷ್ಠಾನಗೊಳಿಸಲಾಗಿದೆ. 2018ರಲ್ಲಿ ಆಂಭವಾದ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅವಳಿ ನಗರದ ನಡುವೆ ಯೋಜನೆಯಡಿ ಸಂಚಾರ ನಡೆಸುವ ಹವಾನಿಯಂತ್ರಿ ಬಸ್‌ಗಳಿಗೆ 'ಚಿಗರಿ' ಎಂದು ಹೆಸರಿಡಲಾಗಿದೆ. 2019ರಲ್ಲಿ ಉತ್ತಮ ನಗರ ಸಮೂಹ ಸಾರಿಗೆ ಶ್ರೇಷ್ಠತಾ ಪ್ರಶಸ್ತಿಯನ್ನು 'ಚಿಗರಿ' ಕೇಂದ್ರ ಸರ್ಕಾರದಿಂದ ಪಡೆದಿದೆ.

ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ನೀಡುವ ಸಂಬಂಧ 'ಶಕ್ತಿ' ಯೋಜನೆ ಅನುಷ್ಠಾನಗೊಳಿಸಲು ದಿನಾಂಕ 20/05/2023ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿತ್ತು.

ರಾಜ್ಯದ ಎಲ್ಲಾ ಮಹಿಳೆಯರು ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಇವುಗಳ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಯೋಜನೆಯಡಿ ಒದಗಿಸಲಾಗಿದೆ.

'ಶಕ್ತಿ' ಯೋಜನೆಗಾಗಿ ಸ್ಮಾರ್ಟ್‌ ಕಾರ್ಡ್‌ ಬಿಡುಗಡೆ ಮಾಡಲಾಗುತ್ತದೆ. ಸದ್ಯ ಭಾವಚಿತ್ರ ಇರುವ ಗುರುತಿನ ಚೀಟಿಯನ್ನು ತೋರಿಸಿ, ಶೂನ್ಯ ದರದ ಟಿಕೆಟ್ ಪಡೆದು ಸಂಚಾರ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಆದರೆ 'ಚಿಗರಿ' ಹವಾನಿಯಂತ್ರಿತ ಬಸ್ ಆದ ಕಾರಣ ಉಚಿತ ಪ್ರಯಾಣಕ್ಕೆ ಯೋಜನೆಯಡಿ ಅವಕಾಶವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+