ಹುಬ್ಬಳ್ಳಿ:ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳಿಗೆ ಪ್ರತ್ಯೇಕ ಮಾರ್ಗ: ಇಲ್ಲಿದೆ ಮಾಹಿತಿ

ಧಾರವಾಡ, ಮಾರ್ಚ್ 11: ನಾಳೆ(ಮಾರ್ಚ್ 12) ಐಐಟಿ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳಿಗೆ ಆಗಮಿಸುವ ಸಾರ್ವಜನಿಕ ವಾಹನಗಳಿಗೆ ಬೇರೆ ಬೇರೆ ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್‌ಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.

ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಬೆಳಗಾವಿ ಕಡೆಯಿಂದ ಎನ್‌ಎಚ್-4 ರಸ್ತೆಯ ಮೇಲೆ ಬರುವ ಕಾರು, ಕ್ರೂಸರ್, ಬೈಕ್, ಜೀಪ್‌ಗಳಿಗೆ ಹೆಗ್ಗೇರಿ ಗ್ರಾಮ ದಾಟಿ ನಂತರ ಬರುವ ಬೇಲೂರು ಸ್ಲೀಪ್‌ ಜೌಟ್‌ನ ಮುಖಾಂತರ ಸರ್ವಿಸ್ ರಸ್ತೆಯಲ್ಲಿ ಬಂದು ಮೊದಲು ಮತ್ತು ಎರಡನೇ ಅಂಡರ್ ಪಾಸ್‌ಗಳ ಮೂಲಕ ಬೇಲೂರು ಇಂಡಸ್ಟ್ರೀಯಲ್ ಏರಿಯಾಕ್ಕೆ ಬಂದು ಐಐಟಿ ಮುಖ್ಯ ರಸ್ತೆಗೆ ಸೇರಿ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳಕ್ಕೆ ಬರುವುದು.

Separate Route For Vehicles Arriving For Prime Minister Modis Event At Hubballi

ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ-ಧಾರವಾಡ, ಕಲಘಟಗಿ ಮತ್ತು ಅಳ್ನಾವರ ಕಡೆಯಿಂದ ಬರುವ ಕಾರು, ಕ್ರೂಸರ್, ಬೈಕ್, ಜೀಪ್‌ಗಳು ನರೇಂದ್ರ ಅಂಡರ್ ಪಾಸ್ ಮುಖಾಂತರ ಎನ್ಎಚ್-4 ರಸ್ತೆಯಲ್ಲಿ ಬೆಳಗಾವಿ ಕಡೆಗೆ ಆಕಾಶ ಹೋಟೆಲ್ ಸ್ಲೀಪ್ ಔಟ್‌ನಲ್ಲಿ ಇಳಿದು ಸರ್ವಿಸ್ ರಸ್ತೆ ಸೇರಿ ಐಐಟಿ ಮುಖ್ಯರಸ್ತೆಗೆ ಬಂದು ಸೇರುವುದು.

ಗರಗ ಕಡೆಯಿಂದ ಬರುವ ಎಲ್ಲಾ ಹಂತದ ವಾಹನಗಳು ಗರಗ ಕ್ರಾಸ್‌ನಿಂದ ಮುಮ್ಮಿಗಟ್ಟಿ ಅಂಡರ್ ಪಾಸ್ ಮುಖಾಂತರ ಯಪ್ಲೆಕ್ಸ್ ಸರ್ಕಲ್‌ಗೆ ಬಂದು ಐಐಟಿ ಮುಖ್ಯ ರಸ್ತೆಗೆ ಬಂದು ಸೇರಬೇಕು.

ಗರಗ ಕಡೆಯಿಂದ ಬರುವ ಟ್ರ್ಯಾಕ್ಟರ್‌ಗಳು ಗರಗ ಕ್ರಾಸ್‌ನಿಂದ ಹೈಕೋರ್ಟ್ ಬಳಿ ಇರುವ ಅಂಡರ್ ಪಾಸ್ ಮುಖಾಂತರ ಬೇಲೂರು ಇಂಡಸ್ಟ್ರೀಯಲ್ ಏರಿಯಾದಲ್ಲಿ ಬಂದು ಸೇರಿ ಐಐಟಿ ಮುಖ್ಯ ರಸ್ತೆಗೆ ಬಂದು ಸೇರಿ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಬೇಕು ಎಂದು ಎಸ್‌ಪಿ ಸೂಚಿಸಿದ್ದಾರೆ.

ಇನ್ನು ವಿಶ್ವದರ್ಜೆಯ ಪ್ಲಾಟ್ ಫಾರಂ ಆಗಿ ಹೊರ ಹೊಮ್ಮಿರುವ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ರೈಲ್ವೆ ಪ್ಲಾಟ್‌ಫಾರ್ಮ್‌ ಅನ್ನು ಅಧಿಕೃತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ಉದ್ಘಾಟನೆ ಮಾಡಲಿದ್ದಾರೆ. ಶ್ರೀಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಭಿವೃದ್ಧಿಪಡಿಸಿದ ವಿಶ್ವದ ಅತೀ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ನ ಉದ್ಘಾಟನೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+