ಗೌರಿ ಲಂಕೇಶ್ ಗೆ ಶಿಕ್ಷೆ: 6 ತಿಂಗಳು ಜೈಲು,ರು 10,000 ದಂಡ

Posted By:
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 29: ಪತ್ರಕರ್ತೆ ಗೌರಿ ಲಂಕೇಶ್ ವಿರುದ್ಧ ಹುಬ್ಬಳ್ಳಿ ಕೋರ್ಟಿನಲ್ಲಿ ಬಿಜೆಪಿ ಎಂಪಿ ಪ್ರಹ್ಲಾದ್ ಜೋಶಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ತೀರ್ಪು ನೀಡಲಾಯಿತು.

ಈ ಮೊಕದ್ದಮೆಗೆ ಸಂಬಂಧಿಸಿದಂತೆ ಸೋಮವಾರ ತೀರ್ಪನ್ನು ನೀಡಿದ ಎರಡನೇ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ಮತ್ತು ರು 10,000 ಡಂಡವನ್ನು ವಿಧಿಸಿತು. ಜನವರಿ 23 2008ರಲ್ಲಿ ಪ್ರಹ್ಲಾದ್ ಜೋಶಿ ಮತ್ತು ಬಿಜೆಪಿ ಮುಖಂಡ ಉಮೇಶ್ ಅವರ ವಿರುದ್ಧ ಗೌರಿ ಲಂಕೇಶ್ ಅವರು ಲೇಖನವನ್ನು ಪ್ರಕಟಿಸಿದ್ದರು. ಈ ಸಂಬಂಧ ಇಬ್ಬರೂ ಮುಖಂಡರೂ ಪತ್ಯೇಕವಾಗಿ ಕೇಸು ದಾಖಲಿಸಿದ್ದರು.[ಗೌರಿ ಲಂಕೇಶ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ]

Senior Journalist Gauri Lankesh convicted in defamation case

ಅವಹೇಳನಾಕಾರಿ ಲೇಖನ ಪ್ರಕಟಣೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಯನ್ನು ಒದಗಿಸದ ಕಾರಣ ನ್ಯಾಯಲಯ ಅವರನ್ನು ಮಾನನಷ್ಟ ಮೊಕದ್ದಮೆಯ ಆರೋಪಿಯನ್ನಾಗಿ ಮಾಡಿದೆ. ಇನ್ನು ಗೌರಿ ಲಂಕೇಶ್ ಅವರು ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನು ಕೋರಿದ್ದಾರೆ.[ಗೌರಿ ಲಂಕೇಶ್ ಮಾನನಷ್ಟ ಪ್ರಕರಣ: ನ.28 ಕ್ಕೆ ಅಂತಿಮ ತೀರ್ಪು]

ಗೌರಿ ಲಂಕೇಶ್ ಅವರು ಅವರು ಶನಿವಾರ ಅಂತಿಮ ಕೋರ್ಟ್ ತೀರ್ಪಿಗೆ ಗೈರು ಹಾಜರಾಗಿದ್ದರಿಂದ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Hubbali court convicted senior journalist Gauri Lankesh in a defamation case filed by BJP MP Pralhad Joshi.Pronouncing the judgement on Monday, the second Judicial Magistrate First Class court sentenced her to six months imprisonment besides imposing a Rs 10,000 fine.
Please Wait while comments are loading...