Breaking: ಹುಬ್ಬಳ್ಳಿಯಲ್ಲಿ ಚಂದ್ರಶೇಖರ್ ಗುರೂಜಿ ಹಂತಕರ ಬಂಧನ

ಹುಬ್ಬಳ್ಳಿ, ಜುಲೈ 5: ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಡಾ. ಚಂದ್ರಶೇಖರ್ ಗುರೂಜಿ ಹತ್ಯೆಗೆ ಸಂಬಂಧಿಸಿದ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Recommended Video

      ಚಂದ್ರಶೇಖರ್ ಗುರೂಜಿ ಹಂತಕರನ್ನ ಪೊಲೀಸರು ಚೇಸ್ ಮಾಡಿದ್ದು ಹೀಗೆ.. | OneIndia Kannada

      ಮಹಾಂತೇಶ್ ಶಿರೋಳ್ ಮತ್ತು ಮಂಜುನಾಥ್ ದುಮ್ಮವಾಡ ಬಂಧಿತ ಆರೋಪಿ ಆಗಿದ್ದಾರೆ. ಇಬ್ಬರೂ ಆರೋಪಿಗಳು ಧಾರವಾಡ ಜಿಲ್ಲೆಯ ತಲಘಟಗಿ ತಾಲೂಕಿನ ದುಮ್ಮವಾಡ ನಿವಾಸಿಗಳು ಎಂದು ತಿಳಿದು ಬಂದಿದೆ.

      ನಗರದ ಉಣಿಕಲ್ ರಸ್ತೆಯಲ್ಲಿರುವ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಗುರೂಜಿ ಹತ್ಯೆ ಮಾಡಿದವರ ಬಂಧನಕ್ಕೆ ಎಸಿಪಿ ವಿನೋದ್ ಮುಕ್ತೇದಾರ್ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಲಾಗಿತ್ತು. ನಗರ ನಾಲ್ಕೂ ದಿಕ್ಕಿನಲ್ಲಿ ನಾಕಾಬಂಧಿ ಹಾಕಿದ ಪೊಲೀಸರು ಘಟನೆ ನಡೆದು ನಾಲ್ಕು ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ.

      Saral Vaastu Fame Dr Chandrashekhar Guruji murder Case 2 Accused Arrested

      ಬೆಳಗಾವಿಯ ರಾಮದುರ್ಗ ಬಳಿ ಆರೋಪಿಗಳ ಬಂಧನ:

      ಸರಳವಾಸ್ತು ಖ್ಯಾತಿಯ ಡಾ. ಚಂದ್ರಶೇಖರ್ ಗುರೂಜಿಯ ಹತ್ಯೆ ನಡೆಸಿದ ಆರೋಪಿಗಳು ತಲೆ ಮರೆಸಿಕೊಂಡು ಓಡಿ ಹೋಗುತ್ತಿದ್ದರು. ಇದರ ಜಾಡು ಹಿಡಿದ ಪೊಲೀಸರು ಬೆಳಗಾವಿ ಜಿಲ್ಲೆಯ ರಾಮದುರ್ಬ ಬಳಿ ಆರೋಪಿಗಳನ್ನು ಸೆರೆ ಹಿಡಿದ್ದಾರೆ.

      ಹುಬ್ಬಳ್ಳಿಯಲ್ಲಿ ಡಾ. ಚಂದ್ರಶೇಖರ್ ಗುರೂಜಿ ಹತ್ಯೆ ಹೇಗಾಯ್ತು?:

      ಹುಬ್ಬಳ್ಳಿ ಉಣಕಲ್ ರಸ್ತೆಯಲ್ಲಿ ಇರುವ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಮಧ್ಯಾಹ್ನ 12.23ರ ಹೊತ್ತಿಗೆ ಸರಳವಾಸ್ತು ಖ್ಯಾತಿಯ ಡಾ. ಚಂದ್ರಶೇಖರ್ ಗುರೂಜಿಯ ಹತ್ಯೆ ನಡೆಯಿತು. ಭಕ್ತರ ಸೋಗಿನಲ್ಲಿ ಬಂದಿದ್ದ ಆರೋಪಿಗಳು ರಿಸೆಪ್ಷನ್ ಬಳಿ ಆಗಮಿಸುವಂತೆ ಗುರೂಜಿಗೆ ಕರೆ ಮಾಡಿದ್ದಾರೆ. 30 ನಿಮಿಷಗಳ ನಂತರ ಸ್ಥಳಕ್ಕೆ ಗುರೂಜಿ ಆಗಮಿಸಿದರು. ಒಬ್ಬರು ಅವರ ಕಾಲಿಗೆ ಬಿದ್ದು ನಮಿಸುತ್ತಿದ್ದ ಸಂದರ್ಭದಲ್ಲಿ ಮತ್ತೊಬ್ಬರು ಗುರೂಜಿ ಎದೆಗೆ ಚಾಕುವಿನಿಂದ ಇರಿದಿದ್ದಾರೆ. ನೋಡ ನೋಡುತ್ತಿದ್ದಂತೆ ಇಬ್ಬರೂ ಚಾಕುವಿನಿಂದ ಬರ್ಬರವಾಗಿ ಇರಿಯುವುದಕ್ಕೆ ಪ್ರಾರಂಭಿಸಿದ್ದಾರೆ. 40 ಸೆಕೆಂಡುಗಳಲ್ಲಿ 60 ಬಾರಿ ಗುರೂಜಿಯನ್ನು ಚುಚ್ಚಿ ಕೊಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+