ಹುಬ್ಬಳ್ಳಿಯಲ್ಲಿ ಆರೆಸ್ಸೆಸ್ ನಾಯಕ ರಘುನಂದನ್ ಪ್ರಚೋದನಾತ್ಮಕ ಭಾಷಣ

Posted By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಡಿಸೆಂಬರ್ 19: "ಹುಬ್ಬಳ್ಳಿ ಪೊಲೀಸರು ಈ ಸಭೆಯಲ್ಲಿ ಇರದಿದ್ದರೆ ಇಲ್ಲಿ ಸೇರಿದ ಪ್ರತಿಭಟನಾಕಾರರ ಕೈಯಲ್ಲಿ ತಲವಾರುಗಳು ಇರುತ್ತಿದ್ದವು," ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಜ್ಞಾ ಪ್ರವಾಹದ ಸಂಚಾಲಕ ರಘುನಂದನ್ ವಿವಾದಾತ್ಮಕ ಭಾಷಣ ಮಾಡಿದ್ದಾರೆ.

ಬೆಳಗಾವಿ: 'ಕೊಲ್ಲಲು ಸಿದ್ಧರಾಗಿ' ಎಂದವನ ವಿರುದ್ಧ ಕೇಸ್

ಪರೇಶ ಮೇಸ್ತ ಸಾವು ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ಹುಬ್ಬಳ್ಳಿಯ ದುರ್ಗದ ಬೈಲ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

RSS leader Raghunandan made provocative provocative in Hubballi

"ಹಿಂದೂಗಳು ಮೂಲತಃ ಶಾಂತಿ ಪ್ರಿಯರು. ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂಗಳ ಹತ್ಯೆಯ ಮೂಲಕ ನಮ್ಮನ್ನು ಕೆಣಕುತ್ತಿದೆ. ರಾಜ್ಯದಲ್ಲಿ ಸಾಲು ಸಾಲು ಹಿಂದೂಗಳ ಹತ್ಯೆಯಾಗುತ್ತಿವೆ. ಹೀಗಿದ್ದರೂ ರಾಜ್ಯ ಸರ್ಕಾರ ಮಾತ್ರ ಸುಮ್ಮನೆ ಕುಳಿತಿದೆ. ಇದೆಲ್ಲವನ್ನು ನೋಡಿದರೆ ರಾಜ್ಯ ಸರ್ಕಾರ ಇದಕ್ಕೆ ಪ್ರಚೋದನೆ ನೀಡುತ್ತಿದೆ," ಎಂದಿದ್ದಾರೆ.

ಅಷ್ಟೇ ಅಲ್ಲ, "ಇಲ್ಲಿನ ಕೆಲ ಕಿಡಿಗೇಡಿಗಳು ಹಿಂದೂಗಳನ್ನು ಕೆಣಕುತ್ತಿದ್ದಾರೆ. ಇಲ್ಲಿ ಇರುವ ಹಿಂದೂಗಳು ಕೈಯಲ್ಲಿ ಕೇಸರಿ ಧ್ವಜಗಳ ಬದಲು ಕಲ್ಲುಗಳು ಹಿಡಿದಿದ್ದರೆ ಸುತ್ತಲಿನ ಕಟ್ಟಡಗಳು ನೆಲಸಮವಾಗುತ್ತಿದ್ದವು," ಎಂದು ರಘುನಂದನ್ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ .

ಇನ್ನು ಇದೇ ವೇಳೆಯಲ್ಲಿ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ, "ಮುಲ್ಲಾ ಸಿದ್ದರಾಮಯ್ಯ ಸರ್ಕಾರ ದೇಶದ್ರೋಹಿಗಳನ್ನು ಪೋಷಿಸುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಎಂದವರ ನಾಲಿಗೆ ಕತ್ತರಿಸುತ್ತೇವೆ," ಎಂದು ಗುಡುಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
RSS leader Raghunandan has made a provocative speech here in Hubballi on Tuesday, December 19.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ