ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯನ್ನು ಗ್ರೀನ್‌ ಸಿಟಿ ಮಾಡಲು ನ್ಯಾ. ಸುಭಾಷ್‌ ಆಡಿ ಕರೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್‌, 17: ನಮ್ಮ ನಗರ ಸ್ವಚ್ಛ ನಗರ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಾಲಾ ಕಾಲೇಜು ಸಂಸ್ಥೆಗಳನ್ನು ಹಸಿರು ಆವರಣ (ಗ್ರೀನ್ ಕ್ಯಾಂಪಸ್) ಮಾಡಲು ಮುಂದಾಗಬೇಕಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾ. ಸುಭಾಷ್‌ ಆಡಿ ಹೇಳಿದರು.

ಸರ್ಕ್ಯೂಟ್ ಹೌಸ್‌ನಲ್ಲಿ ಘನ‌ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ 2016ರ ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವ ಕುರಿತು ಪರಿಶೀಲನಾ ಸಭೆಯನ್ನು ನಡೆಸಲಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ನಿಲ್ದಾಣಗಳಲ್ಲಿ ಹಸಿ ಕಸ, ಒಣ ಕಸ ಹಾಕಲು ಡಬ್ಬಿಗಳನ್ನು ಅಳವಡಿಸಬೇಕು. ಜಿಲ್ಲಾ ಪಂಚಾಯತಿಯ ಐಇಸಿ ಕಾರ್ಯಕ್ರಮವನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಮುಂದಾಗಬೇಕಾಗಿದೆ. ರೈಲ್ವೆ ಬೋಗಿ ಹಾಗೂ ಬಸ್‌ಗಳಲ್ಲಿ ಕಸದ ಡಬ್ಬಗಳನ್ನು ಅಳವಡಿಸಬೇಕು. ಪ್ರಯಾಣಿಕರು ಕಸವನ್ನು ಕಡ್ಡಾಯವಾಗಿ ಡಬ್ಬಿಗಳಲ್ಲಿ ಹಾಕುವಂತೆ ನಿರ್ವಾಹಕರು ನಿರ್ದೇಶನ ನೀಡಬೇಕು ಎಂದರು.

ನಾಟಿ ವೈದ್ಯ: 100 ರೂ.ಗೆ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುವ ಸವಣೂರು ಕುಟುಂಬನಾಟಿ ವೈದ್ಯ: 100 ರೂ.ಗೆ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುವ ಸವಣೂರು ಕುಟುಂಬ

ಕಸವನ್ನು ಡಬ್ಬಗಳಲ್ಲಿ ಹಾಕದಿದ್ದಲ್ಲಿ ನಿರ್ವಾಹಕರು ದಂಡ ವಿಧಿಸಬಹುದು. ಅಲ್ಲದೇ ಕಿಟಕಿಗಳಲ್ಲಿ ಉಗಳುವುದನ್ನು ನಿಷೇಧ ಮಾಡಬೇಕು. ಕಿಟಕಿಗಳಲ್ಲಿ ಉಗುಳುವವರಿಗೆ ದಂಡ ಹಾಕಬೇಕು. ಬಸ್ ಡಿಪೋಗಳಲ್ಲಿ ಕಸವನ್ನು ಸಂಗ್ರಹಿಸಿ, ಕಸದ ವಾಹನಗಳಿಗೆ ಹಾಕಬೇಕು. ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರು ಒದಗಿಸಬೇಕು. ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕಾಗಿದೆ. ವಾರ್ಡ್ ಸದಸ್ಯರು ತಮ್ಮ ವಾರ್ಡ್‌ಗಳನ್ನು ಸ್ವಚ್ಛವಾಗಿಡಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಮುನ್ನೆಡದಾಗ ಮಾತ್ರ ಇಂದೋರ್ ನಗರದಂತೆ ನಮ್ಮ ಅವಳಿ ನಗರಗಳು ಸ್ವಚ್ಛಂದವಾಗಲಿವೆ ಎಂದು ತಿಳಿಸಿದರು.

 ಅವಳಿ ನಗರದ ಅಭಿವೃದ್ಧಿಗೆ ಚಿಂತನೆ

ಅವಳಿ ನಗರದ ಅಭಿವೃದ್ಧಿಗೆ ಚಿಂತನೆ

ಆಸ್ಪತ್ರೆ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ ಕಾಲೇಜು, ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶಾಲಾ, ಕಾಲೇಜುಗಳನ್ನು ಗ್ರೀನ್ ಕ್ಯಾಂಪಸ್ ಮಾಡಲು ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಪಾಲ್ಗೊಳ್ಳುವಂತೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಬ್ಲಾಕ್ ಹಾಗೂ ವಾರ್ಡ್‌ಗಳ ಪ್ರತಿ ಮನೆಗಳಿಂದ ಮೊದಲು ತ್ಯಾಜ್ಯವನ್ನು ಸಂಗ್ರಹಿಸಿ, ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ನಮ್ಮ ನಗರದ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

 ದಂಡ ವಿಧಿಸುವಂತೆ ಸೂಚನೆ

ದಂಡ ವಿಧಿಸುವಂತೆ ಸೂಚನೆ

ಖಾಲಿ ಜಾಗದಲ್ಲಿ ಕಸವನ್ನು ಹಾಕಲಾಗುತ್ತಿದೆ. ಮಾಲೀಕರು ಖಾಲಿ ಜಾಗದ ಸುತ್ತಲೂ ಕಾಂಪೌಂಡ್ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸಲು ಕ್ರಮ ವಹಿಸಬೇಕು. ಅಪಾರ್ಟ್‌ಮೆಂಟ್‌ಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧಿಸಲಾಗಿದೆ. ಜನರಲ್ಲಿ ಅವರ ಜವಾಬ್ದಾರಿ ಕುರಿತು ತಿಳುವಳಿಕೆ ಮೂಡಿಸಬೇಕು. ಸಾರ್ವಜನಿಕ ಸ್ಥಳ, ಫುಟಪಾತ್ ಅತಿಕ್ರಮಣ ಮಾಡಿಕೊಂಡರೆ ಮೊದಲು ನೋಟೀಸ್ ನೀಡಿ. ಒಂದು ವೇಳೆ ತೆರವುಗೊಳಿಸದಿದ್ದಲ್ಲಿ ದಂಡ ವಿಧಿಸಿ, ಲೈಸೆನ್ಸ್ ರದ್ದುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಹೋಟೆಲ್ ಹಾಗೂ ವ್ಯಾಪಾರಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡಬಾರದು. ಅಲ್ಲದೇ ಕಾಟನ್ ಬ್ಯಾಗ್ ಬಳಸುವಂತೆ ಅಧಿಕಾರಿಗಳು ನಿರ್ದೇಶನ ನೀಡುವುದು ಮುಖ್ಯ. ಕಾಟನ್ ಬ್ಯಾಗ್‌ನಿಂದಾಗಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಉದ್ಯೋಗಾವಕಾಶ ದೊರೆಯಲಿವೆ. ಡಿಸೆಂಬರ್ ತಿಂಗಳಿನಿಂದ 120 ಮೈಕ್ರಾನ್‌ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡಬೇಕಾಗುತ್ತದೆ ಎಂದು ಹೇಳಿದರು.

 ರಸ್ತೆ ಬದಿ ಕಸ ಹಾಕಿದವರಿಗೆ ದಂಡ

ರಸ್ತೆ ಬದಿ ಕಸ ಹಾಕಿದವರಿಗೆ ದಂಡ

ಉಪಮೇಯರ್ ಉಮಾ ಮುಕುಂದ ಮಾತನಾಡಿ, ವಾರ್ಡ್‌ಗಳಲ್ಲಿ ರಂಗೋಲಿ ಬಿಡಿಸಿ, ಕಸ ಹಾಕದಂತೆ ಜಾಗೃತಿ ಮೂಡಿಸಲಾಗಿದೆ. ರಸ್ತೆ ಬದಿ ಕಸ ಹಾಕಿದವರಿಗೆ ದಂಡ ವಿಧಿಸಲಾಗುವುದು. ನಗರವನ್ನು ಸ್ವಚ್ಛವಾಗಿಸಲು ಪಾಲಿಕೆ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಈ ಹಿಂದೆ ಫುಟ್‌ಪಾತ್‌ ತೆರವುಗೊಳಿಸಿದರೂ ಸಹ ಪುನಃ ಮೊದಲಿನ ಸ್ಥಿತಿಯಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ ಎಂದು ದೂರಿದರು.

 54 ಟ್ರ್ಯಾಕ್ಟರ್‌ಗಳ ಖರೀದಿಗೆ ಚಿಂತನೆ

54 ಟ್ರ್ಯಾಕ್ಟರ್‌ಗಳ ಖರೀದಿಗೆ ಚಿಂತನೆ

ನಂತರ ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ ಮಾತನಾಡಿ, 30 ದಿನಗಳಲ್ಲಿ ಬ್ಯಾನರ್, ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗುವುದು. ಮಾರುಕಟ್ಟೆಯನ್ನು ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಲಾಗುವುದು. ಕಸ ಸಂಗ್ರಹಣೆ ಮಾಡಲು 30 ಹೊಸ ಮತ್ತು ಹೊರಗುತ್ತಿಗೆ ಆಧಾರದ ಮೇಲೆ 54 ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಳ್ಳಲಾಗುವುದು. ಡಿಜಿಟಲ್ ಬೋರ್ಡ್ ಮೂಲಕ ಜಾಹೀರಾತು ಬಿತ್ತರಿಸಲು ಕ್ರಮ ವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆಯ ಸಹಾಯಕ ಮುಖ್ಯ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಹಿರಿಯ ಪರಿಸರ ಅಧಿಕಾರಿ ಸಯ್ಯದ್ ಖಾಜಿ, ಜಿಲ್ಲಾ ಪಂಚಾಯತ್‌ ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ, ಪರಿಸರ ಅಧಿಕಾರಿ ಶೋಭಾ ಪೋಳ, ಬಿಆರ್‌ಟಿಸಿ ಸಂಸ್ಥೆಯ ಸಹಾಯಕ ಮುಖ್ಯ ಇಂಜಿನಿಯರ್ ಮುಸ್ತಾಕ ಬಿಜಾಪುರಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ, ಒಳಚರಂಡಿ ಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

English summary
Retired Justice Subhash said action plan is required to make Hubblli green city. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X