ಸಾರ್ವಜನಿಕ ಶೌಚಾಲಯ ಬಳಸಲು ಬೆಂಗೇರಿ ಸ್ಲಂ ಜನ ಕೊಡ್ಬೇಕು ಬಾಡಿಗೆ!

Posted By: Basavaraj
Subscribe to Oneindia Kannada

ಹುಬ್ಬಳ್ಳಿ, ಜುಲೈ 31: ಸಾಮಾನ್ಯವಾಗಿ ಸಾರ್ವಜನಿಕರು ವಿದ್ಯುತ್, ವಸತಿ, ಮೊಬೈಲ್, ದಿನ ಪತ್ರಿಕೆ, ನೀರು ಸೇರಿದಂತೆ ಇತರ ದಿನ ನಿತ್ಯದಲ್ಲಿ ಬಳಕೆಯಾಗುವ ವಸ್ತುಗಳಿಗೆ ಪ್ರತಿ ತಿಂಗಳು ಹಣ ಪಾವತಿಸುವುದನ್ನು ಕೇಳಿದ್ದೇವೆ. ಆದರೆ, ನಗರದ ಬೆಂಗೇರಿಯಲ್ಲಿರುವ ಕೊಳಗೇರಿ ನಿವಾಸಿಗಳ ಕುಟುಂಬಗಳು ಸಾರ್ವಜನಿಕ ಶೌಚಾಲಯ ಉಪಯೋಗಿಸಲು ತಿಂಗಳಿಗೆ ೧೨೦ ರೂಪಾಯಿ ಹಣ ಪಾವತಿಸುತ್ತಿವೆ.

ಬೆಂಗಳೂರು ಮಹಾನಗರ ಪಾಲಿಕೆ ಬಿಟ್ಟರೆ ಹುಬ್ಬಳ್ಳಿ-ಧಾರವಾಡವೇ ರಾಜ್ಯದಲ್ಲಿ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ಪ್ರತಿವರ್ಷ ಸ್ವಚ್ಛ ಭಾರತ ಹಾಗೂ ಬಯಲು ಮುಕ್ತ ಶೌಚಾಲಯ ಎಂಬ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ ವ್ಯಯಿಸಲಾಗುತ್ತಿದ್ದರೂ ಪ್ರಮುಖ ನಗರದ ಜನರು ಅನುಭವಿಸುತ್ತಿರುವ ಸಂಕಟಗಳಿಗೆ ಮುಕ್ತಿ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ.

Residents have reserve Rs 120 each for their nature call every month

ಹೌದು, ಇಕ್ಕಟ್ಟಾದ ರಸ್ತೆಯಲ್ಲಿ ಸರಿಯಾದ ಗಾಳಿ, ಬೆಳಕು ಇಲ್ಲದ ಮನೆಗಳಲ್ಲಿ ಬಹುತೇಕ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಗಳಿಲ್ಲ. ಅಂದಾಜು ೨೦೦ ಕುಟುಂಬಗಳು ವಾಸಿಸುವ ಈ ಕೊಳೆಗೇರಿಗೆ ಇರುವುದು ಒಂದೇ ಒಂದು ಶೌಚಾಲಯವನ್ನು. ಅಲ್ಲದೆ ಇಲ್ಲಿ ವಾಸಿಸುವ ಎಲ್ಲರೂ ಕೂಲಿ ಮಾಡಿ ಬದುಕುತ್ತಿದ್ದು, ತಮ್ಮ ದುಡಿಮೆಯಲ್ಲಿ ಶೌಚಾಲಯಕ್ಕಾಗಿಯೇ ಇಂತಿಷ್ಟು ಹಣವನ್ನು ಮೀಸಲಿಡುವ ಅನಿವಾರ್ಯ ಎದುರಾಗಿದೆ.

ಚೇಂಬರ್ ಜೋಡಿಸಿಲ್ಲ: ಕೇವಲ ಬೆರಳೆಣಿಕೆಯಷ್ಟು ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿವೆ. ಇನ್ನು ಕೆಲವರು ಇದಕ್ಕಾಗಿ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿವೆ. ಅಲ್ಲದೆ ಕೆಲವು ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಪಾಲಿಕೆ ಮೊದಲ ಕಂತಿನ ಹಣವನ್ನು ಸಹ ಬಿಡುಗಡೆ ಮಾಡಿದೆ. ಆದರೆ, ಒಳಚರಂಡಿ ಜೋಡಣೆ ಮಾಡದಿರುವ ಕಾರಣ ಶೌಚಾಲಯ ಇದ್ದರೂ ಬಳಕೆಮಾಡದಂಥ ಪರಿಸ್ಥಿತಿ ಎದುರಾಗಿದೆ.

Mangaluru City Gets E Toilet Facility | Oneindia Kannada

ವೃದ್ಧರಿಗೆ ಕಷ್ಟ: ಚಿಕ್ಕ ಮಕ್ಕಳಿಗೆ ವಯಸ್ಸಾದವರಿಗೆ ಹಾಗೂ ಕಾಯಿಲೆ ಬಂದವರಿಗೆ ಸಾರ್ವಜನಿಕ ಶೌಚಾಲಯ ಬಳಕೆ ಮಾಡುವುದು ಕಷ್ಟವಾಗಿದೆ. ಇಡಿ ಬಡಾವಣಗೆ ಒಂದೇ ಶೌಚಾಲಯವಿರುವುದರಿಂದ ಸರದಿಯಲ್ಲಿ ನಿಂತು ಶೌಚಾಲಯ ಬಳಸಬೇಕು. ಇದರಿಂದ ವಯಸ್ಸಾದವರಿಗೆ ತುಂಬಾ ತೊಂದರೆ ಆಗುತ್ತಿದೆ. ಪಾಲಿಕೆ ಅಧಿಕಾರಿಗಳು ಇನ್ನೊಂದು ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿಕೊಡಬೇಕು ಎಂಬುದು ನಿವಾಸಿಗಳ ಬೇಡಿಕೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Residents of Bengeri slum in Hubballi have to pay Rs 120 for their nature call to only a public toilet for using this whole month. It’s very hectic to residents because they have to reserve for this in every month.
Please Wait while comments are loading...