ಹುಬ್ಬಳ್ಳಿ: ರೌಡಿ ಶೀಟರ್ ಗಳಿಗೆ ಚಳಿ ಬಿಡಿಸಿದ ಹೊಸ DCP ರೇಣುಕಾ ಸುಕುಮಾರ್

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜೂನ್ 16 : ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಗೆ ಮೊದಲ ಮಹಿಳಾ ಡಿಸಿಪಿಯಾಗಿ ನೇಮಕಗೊಂಡಿರುವ ಖಡಕ್ ಅಧಿಕಾರಿ ರೇಣುಕಾ ಸುಕುಮಾರ್ ಗುರುವಾರ ನಡೆದ ರೌಡಿ ಶೀಟರ್ ಪರೇಡ್ ನಲ್ಲಿ ತಮ್ಮ ಖದರ್ ತೋರಿಸಿದ್ದಾರೆ.

ನಗರದಲ್ಲಿ ನಡೆದ ಪರೇಡ್ ನಲ್ಲಿ ಭಾಗಹಿಸಿದ್ದ ನೂರಾರು ರೌಡಿ ಶೀಟರ್ ಗಳಿಗೆ ತಮ್ಮ ಮೊನಚು ಮಾತಿನಿಂದ ತಿವಿದಿದ್ದಾರೆ. ಅಲ್ಲದೆ ಪ್ರತಿ ಪರೇಡ್ ಗೂ ಹೇಳಿದ ಸಮಯಕ್ಕೆ ಬಂದು ಹಾಜರಾಗಬೇಕು ಎಂದು ಸೂಚಿಸಿದರು.

Renuka Sukumar will take charge new DCP of Hubblli-Dharwad

ಕಾನೂನು ಸುವ್ಯವಸ್ಥೆಗೆ ಯಾವುದೇ ಕಾರಣಕ್ಕೂ ಭಂಗ ಆಗುವುದಕ್ಕೆ ಬಿಡುವುದಿಲ್ಲ. ಒಂದು ವೇಳೆ ಹಾಗೇನಾದರೂ ಆದರೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ನಗರದ ಯಾವುದೇ ಗಲ್ಲಿಗಳಲ್ಲಿ ಮರಿಪುಡಾರಿಗಳ ಪುಂಡಾಟಿಕೆಗೆ ಅವಕಾಶವಿಲ್ಲ ಅದರಲ್ಲೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕರ ಹಿತಕ್ಕೆ ದಕ್ಕೆ ತಂದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮುಂದಿನ ಪರೇಡ್ ಗೆ ಬರುವಾಗ ಸಭ್ಯ ರೀತಿಯಲ್ಲಿ ವೇಷ ಭೂಷಣಗಳ ಧರಿಸಿ ಬರಬೇಕು. ರೌಡಿಗಳಂತೆ ಕಂಡರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Renuka Sukumar will take charge as new deputy commissioner of police of Hubblli-Dharwad police commissionerate on Thursday.
Please Wait while comments are loading...