ರಾಜ್ಯಸಭೆ ಚುನಾವಣೆ: ಸೋನಿಯಾಗಾಂಧಿ ಜೊತೆ ಮಾತನಾಡಿದ್ದೇವೆ ಎಂಬುದು ಶುದ್ಧ ಸುಳ್ಳು- ಎಚ್‌ಡಿಕೆ
ಹುಬ್ಬಳ್ಳಿ, ಜೂ 4: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರು, ಸೋನಿಯಾಗಾಂಧಿಯವರಿಗೆ ಮಾತನಾಡಿದ್ದಾರೆಂಬ ವದಂತಿ ಶುದ್ದ ಸುಳ್ಳು, ನಾನು ಯಾವ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಗುನ್ನಾ, ತಳಮಳ ಎಂಬ ಚರ್ಚೆಗಳು ಆಗತ್ತಾ ಇವೆ. ಆದರೆ ಯಾವುದೇ ರೀತಿಯ ತಳಮಳ, ನಡುಕ ಪಕ್ಷಕ್ಕೆ ಆಗಿಲ್ಲ. ಅದಕ್ಕಾಗಿಯೇ ನಾನು ರಾಜ್ಯಸಭಾ ಚುನಾವಣೆ ಜಂಜಾಟದಿಂದ ದೂರ ಉಳಿದಿದ್ದೆ, ಆದರೆ ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷವನ್ನು ಅವಮಾನ ಮಾಡಲು ಹಲವಾರು ಹೇಳಿಕೆ ನೀಡಿದ್ದಾರೆ, ಪಕ್ಷವನ್ನು ನಿರ್ಣಾಮ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದರು. ರಾಜಕಾರಣದಲ್ಲಿ ಆಶಾವಾದ ಇರಬೇಕು. ಹಾಗಾಗಿ ನಮ್ಮ ಪಕ್ಷದಿಂದ ರಾಜ್ಯಸಭೆಗೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ. ನಮ್ಮಲ್ಲಿ 32 ಮತಗಳಿವೆ. 3-4 ಜನರಲ್ಲಿ ಅಸಮಾಧಾನ ಇರುವುದು ನಿಜ, ಅವರನ್ನು ವಿಶ್ವಾಸಕ್ಕೆ ಪಡೆಯುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಬಿ ಟೀಮ್ 10 ನೇ ತಾರೀಖ ನಂತರ ಪ್ರಕಟ
ಈವರೆಗೆ ಜೆಡಿಎಸ್ ಪಕ್ಷವನ್ನು ಬಿಜೆಪಿ- ಬಿ ಟೀಮ್ ಎಂದು ಆರೋಪಿಸಲಾಗುತ್ತಿತ್ತು. ಆದರೆ ಬರುವ ರಾಜ್ಯಸಭೆಯ ಫಲಿತಾಂಶದ ನಂತರ ಯಾರು ಬಿಜೆಪಿಯ ಬಿ ಟೀಮ್ ಹಾಗೂ ನಾಯಕ ಯಾರೆಂದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು. ಯಾರು ಯಾರನ್ನು ಸೋಲಿಸಬೇಕೆಂಬುದು ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಬಿಟ್ಟದ್ದು, ಆಗ ನಿಜವಾದ ವಾಸ್ತವ ನಾಡಿನ ಜನತೆಗೆ ಗೊತ್ತಾಗುತ್ತದೆ. ಗೆದ್ದರೇ ಶಕ್ತಿ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ. ಸೋತರೇ ಮತ್ತೊಂದು ರಾಜಕೀಯವಾಗಿ ಅಸ್ತ್ರವಾಗುತ್ತದೆ ಎಂದರು.
ನನ್ನ ಗುರಿ ಮುಂಬರುವ 2023 ರ ವಿಧಾನಸಭೆ ಚುನಾವಣೆ ಅದಕ್ಕಾಗಿ ಜನತಾ ಜಲಧಾರೆ ಮತ್ತು ಪಂಚರತ್ನ ರಥಯಾತ್ರೆಗೆ ಸಿದ್ಧತೆ ನಡೆಸಿದ್ದೇನೆ. ಇವೆರಡೂ ಕಾರ್ಯಕ್ರಮ ಬಳಸಿಕೊಂಡು ಮತದಾರರಿಗೆ ಮನವರಿಕೆ ಮಾಡುವ ಕೆಲಸ ಮಾಡಲಾಗುವುದು. ಈ 10 ತಿಂಗಳು ರಾಜ್ಯಾದ್ಯಂತ ಪ್ರವಾಸ ಮಾಡಿ 123 ಸೀಟ್ ಗೆಲ್ಲಲು ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎರಡು ಶಿಕ್ಷಕರ ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ
Recommended Video
ಈಗಾಗಲೇ ರಾಜ್ಯದಲ್ಲಿ ಎರಡು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಎದುರಾಗಿದೆ. ಇದರಲ್ಲಿ ಎರಡು ಕ್ಷೇತ್ರಕ್ಕೂ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಹಲವಾರು ಕೊಡುಗೆ ನೀಡಿದ್ದು, ಈಗಿನ ಬಿಜೆಪಿ ಅಭ್ಯರ್ಥಿ ತನ್ನ ಸಾಧನೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ನಾನು ಮಾಡಿದ ಕಾರ್ಯ ಸ್ಪಲ್ಪವಾದರೂ ನೆನಪಿದ್ದರೇ ಮತ್ತೊಂದು ಬಾರಿ ನಮ್ಮ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯ ಮತ ನೀಡಬೇಕೆಂದು ಮನವಿ ಮಾಡಿದರು.












Click it and Unblock the Notifications