• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿ: ಜಗದೀಶ್ ಶೆಟ್ಟರ್-ದೇಶಪಾಂಡೆ ನಡುವೆ ಮಾತಿನ ಚಕಮಕಿ

|

ಹುಬ್ಬಳ್ಳಿ, ನವೆಂಬರ್ 17: ಹುಬ್ಬಳ್ಳಿಯಲ್ಲಿ ಇಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭ ಹಿರಿಯ ರಾಜಕೀಯ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಇಂದಿರಾ ಕ್ಯಾಂಟೀಸ್ ಉದ್ಘಾಟನೆಗೆ ಮಾಜಿ ಸಿಎಂ ಬಿಜೆಪಿಯ ಜಗದೀಶ್ ಶೆಟ್ಟರ್ ಮತ್ತು ಕಾಂಗ್ರೆಸ್ ಸಚಿವ ಆರ್‌.ವಿ.ದೇಶಪಾಂಡೆ ಅವರು ಆಗಮಿಸಿದ್ದರು, ಈ ಸಂದರ್ಭ ವಿಷಯವೊಂದಕ್ಕೆ ಸಂಬಂಧಿಸಿದಂತೆ ಪರಸ್ಪರ ನಾಯಕರು ಮಾತಿನ ಸಮರಕ್ಕೆ ಇಳಿದರು.

ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಸರ್ಕಾರ 30% ಹಣ ನೀಡುತ್ತದೆ ಉಳಿದ 70% ಹಣ ಪಾಲಿಕೆ ಭರಿಸಬೇಕಾಗುತ್ತದೆ. ಆದರೆ ಹಬ್ಬಳ್ಳಿ-ಧಾರವಾಡ ಪಾಲಿಕೆ ಸಂಕಷ್ಟದಲ್ಲಿದ್ದು ಆ ಹಣವನ್ನು ರಾಜ್ಯ ಸರ್ಕಾರವೇ ನೀಡಬೇಕು ಎಂದು ಜಗದೀಶ್ ಶೆಟ್ಟರ್ ಆಗ್ರಹ ಮಾಡಿದರು.

ಡಿಕೆಶಿಗೆ ಇಡಿ ನೋಟಿಸ್: ರಾಜಕೀಯ ಷಡ್ಯಂತ್ರ ಎಂದ ದಿನೇಶ್ ಗುಂಡೂರಾವ್

ಇದಕ್ಕೆ ಕೆರಳಿದ ದೇಶಪಾಂಡೆ ಅವರು, ಸರ್ಕಾರ ತಾನು ಕೊಡಬೇಕಾದದ್ದನ್ನು ಕೊಡುತ್ತದೆ. ಪಾಲಿಕೆಯಿಂದ ಕೊಡಬೇಕಾದುದ್ದನ್ನು ಪಾಲಿಕೆಯೇ ಕೊಡಬೇಕು ಎಂದು ಕಠುವಾಗಿ ಹೇಳಿದರು.

ಇಡಿಯಿಂದ ನೊಟೀಸ್ ಬಂದಿಲ್ಲ, ಬೇರೆ ನೊಟೀಸ್‌ ಬಂದಿದೆ: ಡಿಕೆಶಿ

ಇದು ಜಗದೀಶ್ ಶೆಟ್ಟರ್ ಅವರನ್ನು ಕೆರಳಿಸಿತು, ಪಾಲಿಕೆ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಶೇ.70ರಷ್ಟು ಅನುದಾನವನ್ನು ಸರ್ಕಾರವೇ ನೀಡಬೇಕು ಎಂದು ಪಟ್ಟು ಹಿಡಿದರು.

ಸಿಸಿಬಿಯು ರೆಡ್ಡಿ ವಿಚಾರದಲ್ಲಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿಎಸ್‌ವೈ

ಕೊನೆಗೆ ಮಣಿದ ಸಚಿವ ದೇಶಪಾಂಡೆ ಅವರು 'ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದಾಗ, ಪರಿಸ್ಥಿತಿ ತಿಳಿಯಾಯಿತು.

English summary
Quarrel between BJP former CM Jagadesh Shettar and congress minister RV Deshpande. Jagadish Shettar ask Deshpande to give separate grant to maintain Indira canteen of Hubbali, Deshpande denied that request.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X