ಕ್ಯೂನಲ್ಲಿ ನಿಂತಿದ್ದ ವಕೀಲನನ್ನು ಪೊಲೀಸರು ಎಳೆದೊಯ್ದದ್ದು ಎಲ್ಲಿಗೆ?

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 18: ನೋಟು ಬದಲಾವಣೆಗೆ ನಿಂತಿದ್ದ ವಕೀಲರೊಬ್ಬರ ಮೇಲೆ ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಎಎಸ್ ಐ ಹಾಗೂ ಪೇದೆಯೊಬ್ಬರು ಹಲ್ಲೆ ಮಾಡಿದ ಘಟನೆ ಗುರುವಾರ ಸಂಜೆ ನಡೆದಿದೆ.

ಹಳೇಹುಬ್ಬಳ್ಳಿಯ ಆನಂದನಗರದಲ್ಲಿರುವ ಎಸ್‌ ಬಿಐ ಬ್ಯಾಂಕ್ ನಲ್ಲಿ ಹಣ ತುಂಬಲು ಕ್ಯೂನಲ್ಲಿ ನಿಂತಿದ್ದ ವಕೀಲ ಎಸ್.ಕೆ.ಮುಲ್ಲಾ ಪೊಲೀಸರಿಂದ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ.

crime

ಕ್ಯೂನಲ್ಲಿ ನಿಂತಿದ್ದ ವಕೀಲರನ್ನು ಎಎಸ್ ಐ ಗೊರವರ ಹಾಗೂ ಪೇದೆ ಉಮೇಶ ಉಪ್ಪಾರ ಎಂಬುವವರು ಅವರ ಶರ್ಟ್ ನ ಕಾಲರ್ ಹಿಡಿದು ಎಳೆದುಕೊಂಡು ಬಂದು ಅಸಭ್ಯ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ.[ಹುಬ್ಬಳ್ಳಿಯ ಪೊಲೀಸರಿಗೆ ಆತನೇ ಯಾಕೆ ಬೇಕು?]

ಅಷ್ಟೇ ಅಲ್ಲದೇ ಹಲ್ಲೆ ಮಾಡಿದ ಪೊಲೀಸರು ವಕೀಲ ಮುಲ್ಲಾ ಅವರಿಗೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಲಾಗಿದೆ. ಹಲ್ಲೆಯ ಕುರಿತು ಬ್ಯಾಂಕ್ ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಎಲ್ಲವೂ ದಾಖಲಾಗಿದ್ದು ಇದರ ಬಗ್ಗೆ ಪರಿಶೀಲಿಸಿ ಪೊಲೀಸ್ ಆಯುಕ್ತರು ತನಿಖೆ ನಡೆಸಬೇಕು ಇಲ್ಲವಾದರೆ ಪೊಲೀಸರ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ್ ಎಚ್ಚರಿಸಿದ್ದಾರೆ.

ಮತ್ತೆರಡು ಸರಗಳ್ಳತನ:
ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಳಾಪುರದ ಅಷ್ಟಗಿ ಲೇಔಟನ ನಿವಾಸಿ ಶಕುಂತಲಾ ಮುಕುಂದರಾವ್ ಬೊಂಗಾಳೆ ಇವರು ನ.17ರ ಬೆಳಗ್ಗೆ 7-30 ರ ಸುಮಾರಿಗೆ ಮಾಳಾಪುರ ಆದರ್ಶನಗರ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಅಪರಿಚಿತ ವ್ಯಕ್ತಿಯು ಇವರ ಹಿಂದಿನಿಂದ ಬಂದು ಇವರ ಕೊರಳಲ್ಲಿದ್ದ 35 ಗ್ರಾಂ ತೂಕದ ಬಂಗಾರದ ಮಂಗಳ ಸೂತ್ರ ಮತ್ತು 15 ಗ್ರಾಂ ತೂಕದ ಬಂಗಾರದ ಚೈನನ್ನು ಕಿತ್ತುಕೊಂಡು ಬೈಕ್ ನಲ್ಲಿ ಪರಾರಿಯಾಗಿದ್ದಾನೆ.[ಜೂಜಾಟದಲ್ಲಿ ತೊಡಗಿದ್ದ 77 ಮಂದಿ ಅರೆಸ್ಟ್‌]

ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ನಿವಾಸಿ ಅನಿತಾ ಅನೀಲ ಬೆಟಗೇರಿನ. ನ.17 ರ ಬೆಳಗಿನ 7-15 ಗಂಟೆ ಸುಮಾರಿಗೆ ಗಾಂಧಿನಗರ ಶಾಂಭವಿ ಕಾಲೋನಿ 3 ಕ್ರಾಸ್ ಹತ್ತಿರ ಇರುವ ತಮ್ಮ ಮನೆಯಿಂದ ನಡೆದುಕೊಂಡು ಏಕ್ಸೀಸ್ ಬ್ಯಾಂಕ ಎಟಿಎಂ ಕಡೆಗೆ ಹೋರಟಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಇವರ ಎದುರಿನಿಂದ ಮೋಟಾರ್ ಸೈಕೈಲ್ ನಲ್ಲಿ ಬಂದು ಇವರ ಕೊರಳಿಗೆ ಕೈಹಾಕಿ ಕೊರಳಲ್ಲಿದ್ದ 30 ಗ್ರಾಂ ತೂಕದ ಬಂಗಾರದ ಮಂಗಳ ಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಎರಡೂ ಪ್ರಕರಣಗಳು ದಾಖಲಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi the police man areste the lawyer in line in front of bank. Another two incident chine snaching in hubballi.
Please Wait while comments are loading...