Police Sucide: ಮಹಿಳೆಯೊಂದಿಗೆ ಪೊಲೀಸ್ ಸಿಬ್ಬಂದಿ ನೇಣಿಗೆ ಶರಣು: ಅನೈತಿಕ ಸಂಬಂಧದಿಂದ ಆತ್ಮಹತ್ಯೆ ಶಂಕೆ

ಹುಬ್ಬಳ್ಳಿ, ಮೇ 21: ಹುಬ್ಬಳ್ಳಿ ಸಂಚಾರಿ ವಿಭಾಗದ ಕಾನ್ಸ್‌ಟೇಬಲ್ ಒಬ್ಬರ ಮೃತದೇಹ ಮಹಿಳೆಯೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿದೆ. ಈ ಪೊಲೀಸ್ ಸಿಬ್ಬಂದಿ ಅನೈತಿಕ ಸಂಬಂಧ ಹೊಂದಿದ್ದೆ ಕಾರಣ ಎಂದು ಶಂಕಿಸಲಾಗಿದೆ.

ಮಹೇಶ ಹೆಸರೂರು (30) ಮೃತ ಸಂಚಾರಿ ಪೊಲೀಸ್ ಕಾನ್ಸ್‌ಟೇಬಲ್, ಲಕ್ಷ್ಮಿ ವಾಲಿ (30) ಮೃತ ಮಹಿಳೆ. ಇವರಿಬ್ಬರು ಆತ್ಮಹತ್ಯೆ ಶರಣಾಗಿ ಮೂರು ದಿನ ಕಳೆದಿದೆ ಎನ್ನಲಾಗುತ್ತಿದೆ. ಮೃತದೇಹ ಕೊಳೆತ ವಾಸನೆ ಬಂದ ಬಳಿಕ ಅಕ್ಕಪಕ್ಕದ ಮನೆಯವರು ತಿಳಿಸಿದ ಮೇಲೆ ಘಟನೆ ಬೆಳಕಿಗೆ ಬಂದಿದೆ.

Police Constable Suicide With Women in House at Hubballi Doubtly Immoral Relationship

30 ವರ್ಷದ ಲಕ್ಷ್ಮಿ ವಾಲಿ ಎಂಬ ಮಹಿಳೆಯೊಂದಿಗೆ ಗಿರೀಶ್ ಅವರು ಇಬ್ಬರು ಒಂದೇ ಸೀರೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಹುಬ್ಬಳ್ಳಿಯ ನವನಗರದ ಗಾಮನಗಟ್ಟಿಯ ಮನೆಯೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಮೃತ ದೇಹಗಳು ಪತ್ತೆಯಾಗಿವೆ. ಸುದ್ದಿ ತಿಳಿಯುತ್ತಿದ್ದ ಆ ಮನೆಯ ಸುತ್ತಮುತ್ತ ಜನರು ಜಮಾಯಿಸಿದ್ದಾರೆ.

ಆತ್ಮಹತ್ಯೆಗೆ ಅನೈತಿಕ ಸಂಬಂಧವೇ ಕಾರಣವಾಯ್ತಾ?

ಧಾರವಾಡದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಮಹೇಶ್ ಹೆಸರೂರು ಕರ್ತವ್ಯ ನಿರ್ವಹಿಸುತ್ತಿದ್ದರು. ಮಹೇಶ್ ಅವರಿಗೆ ಈಗಾಗಲೇ ಮದುವೆ ಆಗಿತ್ತು. ಆದರೂ ಸಹಿತ ಈ ವಿಜಯಲಕ್ಷ್ಮೀ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದರು. ಅವರೊಂದಿಗೆ ಕಳೆದ ಎರಡು ವಾರಗಳ ಹಿಂದೆ ಇಲ್ಲಿ ಮನೆ ಮಾಡಿಕೊಂಡು ಇದ್ದರು ಎಂದು ತಿಳಿದು ಬಂದಿದೆ.

ಇವರಿಬ್ಬರ ಈ ಅನೈತಿಕ ಸಂಬಂಧವೇ ಆತ್ಮಹತ್ಯೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ನಿಖರ ಕಾರಣ ಪೊಲೀಸರ ತನಿಖೆಯಿಂದ ಸತ್ಯ ತಿಳಿಯಬೇಕಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ-ಧಾರವವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು ಮಾಹಿತಿ ಪಡೆದರು.

ದಲಿತ ಗೃಹ ಸಚಿವರನ್ನು ತುಳಿಯುತ್ತಿದ್ದಾರೆ: ಯತ್ನಾಳ್

ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ಕುರಿತಾಗಿಅಂಜಲಿ ಮನೆಗೆ ಭೇಟಿ ನೀಡಿದ ನಂತರ ಶಾಸಕ‌‌ ಬಸನಗೌಡ ಪಾಟೀಲ್ ಅವರು ಕುಟುಂಬಸ್ಥರಿಗೆ ಸಾಂತ್ಯವ ಹೇಳಿದರು. ಹುಬ್ಬಳ್ಳಿ ಧಾರವಾಡದಲ್ಲಿ ರಾಜಾರೋಷವಾಗಿ ನಡೆಯುತ್ತಿರೋ ಗಾಂಜಾ ಡ್ರಗ್ಸ್ ಹಾವಳಿಯಿಂದಲೇ ಈ‌ ರೀತಿಯಾಗಿದೆ ಎಂದು ಅವರು ಆರೋಪಿಸಿದರು.

ಹುಬ್ಬಳ್ಳಿ ಧಾರವಾಡದಲ್ಲಿ ಕಾನೂನು‌ ಸುವ್ಯವಸ್ಥೆ ಹದಗೆಟ್ಟಿರುವುದೇ ಇದಕ್ಕೆ ಕಾರಣ ಆಗಿದೆ. ಗೃಹ ಮಂತ್ರಿಗಳು ತರಾತುರಿಯಲ್ಲಿ ಬಂದು ಮೂರ್ನಾಲ್ಕು ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದಾರೆ. ತಮ್ಮ‌ ವೈಫಲ್ಯವನ್ನ ಮರೆಮಾಚುವ ಉದ್ದೇಶದಿಂದ ಈ‌ ರೀತಿ ಮಾಡುತ್ತಿದ್ದಾರೆ. ಸರ್ಕಾರ ತಮ್ಮ‌ ವೈಫಲ್ಯವನ್ನು ಪೊಲೀಸ್ ಅಧಿಕಾರಿಗಳ ಮೇಲೆ‌ ತೀರಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ರಾಜಕೀಯ ಒತ್ತಡದಿಂದಾಗಿ ಪೊಲೀಸರು‌ ಇಲ್ಲಿ ಮುಕ್ತವಾಗಿ ಕಾರ್ಯ ನಿರ್ವಹಿಸಲು‌ ಆಗುತ್ತಿಲ್ಲ.‌ ಇನ್ನು ಬೆಂಗಳೂರು‌ ಸೇರಿದಂತೆ ರಾಜ್ಯದೆಲ್ಲೆಡೆ ಗಾಂಜಾ, ಅಫೀಮು ರಾಜಾರೋಶವಾಗಿ ಮಾರಾಟವಾಗುತ್ತಿದೆ. ಕೇವಲ‌ ಕಠಿಣ ಕ್ರಮ‌ ಅನ್ನೋದು ಒಂದು ಡೈಲಾಗ್ ಆಗಿಬಿಟ್ಟಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು‌ ಆಗದಿದ್ದರೆ ರಾಜೀನಾಮೆ‌ ನೀಡಿ ಬೇರೆ ಇಲಾಖೆ ಅಧಿಕಾರ ವಹಿಸಿಕೊಳ್ಳಲಿ. ಒಬ್ಬ ದಲಿತ ಸಚಿವರು ಆಗಿದ್ದರಿಂದ ಗೃಹ ಸಚಿವರನ್ನು ತುಳಿಯುತ್ತಿದ್ದಾರೆ ಎಂದು ತಿಳಿಸಿದರು.

ಆತ್ಮಹತ್ಯೆಯಲ್ಲ ಎಂಬ ಅನುಮಾನ

ಬುಧವಾರ ಇದೇ ಸಾವಿನ ವಿಚಾರಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದೊಂದು ಆತ್ಮಹತ್ಯೆ ಪ್ರಕರಣ ಅಲ್ಲ. ಸಂಶಯಾಸ್ಪದ ಸಾವು ಎಂದು ಎರಡು ಪ್ರತ್ಯೇಕ ಪ್ರಕರಣ ನವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸ್ ಪೇದೆ ಮಹೇಶ್ ಹೆಸರೂರು, ವಿಜಯಲಕ್ಷ್ಮಿ ವಾಲಿ ಕುಟುಂಬಸ್ಥರಿಂದ ತಕರಾರು ತೆಗೆದು ದೂರು ನೀಡಲಾಗಿದೆ.

ಪೊಲೀಸ್ ಕಾನ್ಸ್​​ಟೇಬಲ್ ಒಬ್ಬರು ಮಹಿಳೆಯೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಹುಬ್ಬಳ್ಳಿ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಮನಗಟ್ಟಿಯಲ್ಲಿ ನಡೆದಿತ್ತು. ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್ ಮಹೇಶ ಹೆಸರೂರು ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿರುವ ಮನೆಯೊಂದರಲ್ಲಿ ವಿಜಯಲಕ್ಷ್ಮೀ ವಾಲಿ(30) ಎನ್ನುವ ಮಹಿಳೆಯೊಂದಿಗೆ ನೇಣಿಗೆ ಶರಣಾಗಿದ್ದರು.

Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+