ಗಣೇಶ, ಟಿಪ್ಪು ಆಯಿತು ಇದೀಗ ಹುಬ್ಬಳ್ಳಿ ರಾಣಿ ಚನ್ನಮ್ಮ ಈದ್ಗಾ ಮೈದಾನದಲ್ಲಿ ಕಾಮಣ್ಣನ ಪ್ರತಿಷ್ಠಾಪನೆಗೂ ಅವಕಾಶ
ಹುಬ್ಬಳ್ಳಿಯ ರಾಣಿ ಚನ್ನಮ ಈದ್ಗಾ ಮೈದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿದ ಬೆನ್ನಲ್ಲೇ, ಇದೀಗ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೂ ಸಹ ಮಹಾನಗರ ಪಾಲಿಕೆ ಅವಕಾಶ ನೀಡಿದೆ.
ಹುಬ್ಬಳಿ, ಮಾರ್ಚ್, 08: ಹುಬ್ಬಳ್ಳಿಯ ರಾಣಿ ಚನ್ನಮ ಈದ್ಗಾ ಮೈದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿದ ಬೆನ್ನಲ್ಲೇ, ಇದೀಗ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೂ ಸಹ ಮಹಾನಗರ ಪಾಲಿಕೆ ಅವಕಾಶ ನೀಡಿದೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಈ ಮಹತ್ವದ ಅದೇಶವನ್ನು ಹೊರಡಿಸಿದ್ದಾರೆ.
ಈ ಹಿಂದೆ ಗಜಾನನ ಉತ್ಸವ ಮಹಾಮಂಡಳಿ ಗಣೇಶ ಉತ್ಸವಕ್ಕೆ ಅನುಮತಿ ಕೇಳಿತ್ತು. ಈ ಬಾರಿಯೂ ಸಹ ಅಧ್ಯಕ್ಷ ಸಂಜಯ್ ಬಡಾಸ್ಕರ್ ನೇತೃತ್ವದಲ್ಲಿ ರಂಗ ಪಂಚಮಿ ಪ್ರಯುಕ್ತ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ಮಾಡಿದ ಪಾಲಿಕೆ, ವಿವಿಧ ನಿಯಮಗಳನ್ನು ವಿಧಿಸಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದೆ. ಮಾರ್ಚ್ 9ರಿಂದ 11ರ ವರೆಗೂ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೂರ್ತಿ ದಹನಕ್ಕೂ ಸಹ ಅನುಮತಿ ನೀಡಿದೆ.

ಗಲಭೆಗೆ ಅವಕಾಶ ನೀಡಬಾರದು
10 ಸಾವಿರ ಶುಲ್ಕ ಪಡೆದು ಕಾರ್ಯಕ್ರಮದ ವೇಳೆ ಯಾವುದೇ ಗಲಭೆಗೆ ಅವಕಾಶ ನೀಡಬಾರದು. ಅಕಸ್ಮಾತ್ ಯಾವುದೇ ಗಲಾಟೆಯಾಗಿ ಆಸ್ತಿ ಹಾನಿಯಾದರೆ, ಆಯೋಜಕರೇ ಜವಾಬ್ದಾರಿ ಎಂದು ಕಠಿಣ ಷರತ್ತು ವಿಧಿಸಿ ಅನುಮತಿ ನೀಡಿದೆ.
ಸಿಹಿಸುದ್ದಿ ನೀಡಿದ ರೈಲ್ವೆ ಇಲಾಖೆ
ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚರಿಸುವ ಜನರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಮಾರ್ಚ್ 20ರಿಂದ ಹುಬ್ಬಳ್ಳಿ ಬೆಂಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ.

ವಿಶೇಷ ರೈಲುಗಳನ್ನು ಓಡಿಸಲು ನಿರ್ಧಾರ
ಹುಬ್ಬಳ್ಳಿ ಬೆಂಗಳೂರು ಮಧ್ಯೆ ವಿಶೇಷ ರೈಲು ಅತೀ ಅವಶ್ಯಕ ವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವಾರು ಮಂದಿ ಜನಪ್ರತಿನಧಿಗಳು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದರು. ಈಗ ಕೇಂದ್ರ ರೈಲ್ವೆ ಸಚಿವರು ಈ ವಿಶೇಷ ರೈಲುಗಳಿಗೆ ಅನುಮೋದನೆ ನೀಡಿದ್ದಾರೆ.
ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮಾರ್ಚ್ 20 ರಿಂದ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಮಾಡಲಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ರೈಲು ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಕಾಯ್ದಿರಿಸಿದ ವಿಶೇಷ ಸೇವೆಯ ಈ ರೈಲುಗಳು ಇತ್ತು. ಮಾರ್ಚ್ 20 ರಿಂದ ತಮ್ಮ ಸಂಚಾರ ಆರಂಭಿಸಲಿವೆ. ರಾತ್ರಿ 11:15ಕ್ಕೆ ಹುಬ್ಬಳ್ಳಿಯಿಂದ ( ರೈಲು ಸಂ : 07339) ಹೊರಡುವ ರೈಲು ಬೆಳಗ್ಗೆ 6:50ಕ್ಕೆ ಬೆಂಗಳೂರು ತಲುಪಲಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications