Get Updates
Get notified of breaking news, exclusive insights, and must-see stories!

ಹುಬ್ಬಳ್ಳಿ: ಯುವತಿ ಸೇರಿ ನಾಲ್ವರು ಅಪಹರಣಕಾರರ ಬಂಧನ

ಹುಬ್ಬಳ್ಳಿ, ಆಗಸ್ಟ್ 04 : ಇಲ್ಲಿನ ದೇಶಪಾಂಡೆ ನಗರದಲ್ಲಿ ಕಾರನ್ನು ಅಡ್ಡಗಟ್ಟಿ ಬಲಬೀರ್ ಎಂಬುವರನ್ನು ಅಪಹರಿಸಿದ್ದ ಯುವತಿ ಸೇರಿ ನಾಲ್ವರು ಅಪಹರಣಕಾರರನ್ನು ಶುಕ್ರವಾರ ಬೆಳಗಿನ ಜಾವ ಹಳೇ ಹುಬ್ಬಳ್ಳಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಮೇಶ ಹಜಾರೆ, ವಿನಾಯಕ ಹಜಾರೆ, ಗಣೇಶ್ ಶೆಟ್ಟಿ ಸೇರಿದಂತೆ ಓರ್ವ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಜುಲೈ 30ರಂದು ಬಲಬೀರ್ ಅವರನ್ನು ಅಪಹರಿಸಿ ಹುಬ್ಬಳ್ಳಿಯ ಹೊರ ವಲಯದ ಅಂಚಟಗೇರಿಗೆ ಕರೆದೊಯ್ದು 4 ರಿಂದ 5 ಲಕ್ಷ ರು. ಹಣಕ್ಕೆ ಬೇಡಿಕೆ ಇಟ್ಟಿದ್ದರು.

Old Hubballi police have arrested four kidnap accused

ಅಲ್ಲದೆ ಅವರ ಬಳಿ ಇದ್ದ ಎಟಿಎಂ ಹಾಗೂ ಡೆಬಿಟ್ ಕಾರ್ಡ್‌ಗಳನ್ನು ಕಿತ್ತುಕೊಂಡಿದ್ದ ಅಪಹರಣಕಾರರು ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು. ಹಲ್ಲೆ ಸಂದರ್ಭದಲ್ಲಿ ಬಲಬೀರ್ ಅವರ ಕಿವಿ, ಕೈ ಹಾಗೂ ಹೊಟ್ಟೆಗೆ ಬಲವಾದ ಗಾಯಗಳಾಗಿವೆ.

ಹುಬ್ಬಳ್ಳಿ: ನಾಲ್ವರು ಹೆದ್ದಾರಿ ದರೋಡೆಕೋರರ ಬಂಧನ

ಬಂಧಿತ ಆರೋಪಿಗಳಿಂದ ಚಾಕು, ಎರಡು ಬೈಕ್, ಆರು ಮೊಬೈಲ್ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಸುಲಿಗೆಕೋರರ ಬಂಧನ: ಜನರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಇಲ್ಲಿನ ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಸೆಟ್ಲಮೆಂಟ್ ನಿವಾಸಿಗಳಾದ ಲಕ್ಷ್ಮಣ ಬಳ್ಳಾರಿ ಹಾಗೂ ಅರ್ಜುನ ಮುಂಡಗೋಡ ಬಂಧಿತ ಆರೋಪಿಗಳು. ಇತ್ತೀಚಿಗೆ ಗದಗ ಮೂಲದ ಸಂದೀಪ ಹೊಸಮನಿ ಎಂಬುವರನ್ನು ಬೆದರಿಸಿ ಸುಲಿಗೆ ಮಾಡಿದ್ದರು. ಬಂಧಿತರಿಂದ ಬೈಕ್, ಐದು ಮೊಬೈಲ್, ನಗದು ಹಾಗೂ ತಲ್ವಾರ್ ವಶಪಡಿಸಿಕೊಳ್ಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+