ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

NWKRTC: ದೀಪಾವಳಿ ಹಬ್ಬದ ಪ್ರಯುಕ್ತ 500ಕ್ಕೂ ಹೆಚ್ಚು ವಿಶೇಷ ಬಸ್‌

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 14 : ಉತ್ತರ ಕರ್ನಾಟಕದ ಜನರಿಗೆ ದೀಪಾವಳಿ ಹಬ್ಬದ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಹೆಚ್ಚುವರಿ ಬಸ್ ಸೇವೆ ನೀಡಲು ಮುಂದಾಗಿದೆ.

ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಬ್ಬದ ವೇಳೆ ಪ್ರಯಾಣಕ್ಕಾಗಿ ಯಾವುದೇ ತೊಂದರೆಗಳು ಆಗದಂತೆ ಹಾಗೂ ಖಾಸಗಿ ವಾಹನಗಳಿಗೆ ಹೆಚ್ಚುವರಿ ಶುಲ್ಕವನ್ನು ತಪ್ಪಿಸಿ ಸುರಕ್ಷಿತ ಪ್ರಯಾಣಕ್ಕಾಗಿ ವಾಯವ್ಯ ಸಾರಿಗೆ ಸಂಸ್ಥೆ ಮುಂದಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಕೆಎಸ್ಸಾರ್ಟಿಸಿ: ಉಚಿತ ಬಸ್ ಪಾಸ್, ದೀಪಾವಳಿ ಪ್ಯಾಕೇಜ್ ಟೂರ್, ಎಲೆಕ್ಟ್ರಿಕ್ ಬಸ್ಕೆಎಸ್ಸಾರ್ಟಿಸಿ: ಉಚಿತ ಬಸ್ ಪಾಸ್, ದೀಪಾವಳಿ ಪ್ಯಾಕೇಜ್ ಟೂರ್, ಎಲೆಕ್ಟ್ರಿಕ್ ಬಸ್

ಅಕ್ಟೋಬರ್ 22 4ನೇ ಶನಿವಾರ, 23 ಭಾನುವಾರ, 24 ರಂದು ನರಕ ಚತರ್ದಶಿ, 25 ರಂದು ಮಂಗಳವಾರ ದೀಪಾವಳಿ ಅಮವಾಸ್ಯೆ ಹಾಗೂ 26 ರಂದು ಬಲಿಪಾಡ್ಯಮಿ ಇರುವುದರಿಂದ ಹಬ್ಬದ ರಜೆಗಳನ್ನು ಉಪಯೋಗಿಸಿಕೊಂಡು ದೀಪಾವಳಿ ಹಬ್ಬಕ್ಕೆ ಬಂದು ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ 21 22 ರಂದು ಬೆಂಗಳೂರು, ಮಂಗಳೂರು, ಹೈದರಾಬಾದ್, ಪಣಜಿ, ಪುಣೆ, ಮುಂಬಯಿ ಮತ್ತು ರಾಜ್ಯದ ಹಾಗೂ ಅಂತರರಾಜ್ಯಗಳ ಇನ್ನಿತರ ಪ್ರಮುಖ ನಗರಗಳಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ಹಾಗೂ ಸ್ವಂತ ಊರುಗಳಿಗೆ ಹಬ್ಬಕ್ಕಾಗಿ ತೆರಳುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಬಸ್‌ ಸೇವೆ ಒದಗಿಸಿಕೊಡಲಾಗಿದೆ.

 500ಕ್ಕಿಂತ ಅಧಿಕ ಹೆಚ್ಚುವರಿ ವಿಶೇಷ ಬಸ್‌

500ಕ್ಕಿಂತ ಅಧಿಕ ಹೆಚ್ಚುವರಿ ವಿಶೇಷ ಬಸ್‌

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ, ಹಾವೇರಿ ಮತ್ತು ಬಾಗಲಕೋಟೆ ವಿಭಾಗಗಳ ಪ್ರಮುಖ ಬಸ್ ನಿಲ್ದಾಣಗಳಿಂದ ಒಟ್ಟು 500 ಕ್ಕಿಂತ ಅಧಿಕ ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

 ಬೇಡಿಕೆಗಳಿಗನುಗುಣವಾಗಿ ಬಸ್‌ ಏರಿಕೆ

ಬೇಡಿಕೆಗಳಿಗನುಗುಣವಾಗಿ ಬಸ್‌ ಏರಿಕೆ

ಹಬ್ಬ ಮುಗಿದ ನಂತರ ಬೆಂಗಳೂರು, ಮಂಗಳೂರು, ಹೈದರಾಬಾದ್, ಪಣಜಿ, ಪೂಣೆ, ಮುಂಬಯಿ ಸೇರಿ ಇತರ ನಗರಗಳಿಗೆ ತೆರಳುವ ಪ್ರಯಾಣಿಕರಿಗಾಗಿ 26 ರಿಂದ 30 ರ ವರೆಗಿನ ಅವಧಿಯಲ್ಲಿ ಸಾರ್ವಜನಿಕ ಪ್ರಯಾಣಿಕರ ಬೇಡಿಕೆಗಳಿಗನುಗುಣವಾಗಿ ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು.

 ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚು ಬಸ್‌ ಸೌಲಭ್ಯ

ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚು ಬಸ್‌ ಸೌಲಭ್ಯ

ಆದ್ದರಿಂದ ಸಾರ್ವಜನಿಕರು ಸಂಸ್ಥೆಯ ಅಧೀಕೃತ ವೆಬಸೈಟ್ www.ksrtc.in ಅಥವಾ ksrtc mobile App ನಲ್ಲಿ ಮುಂಗಡವಾಗಿ ವೇಗದೂತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಟಿಕೆಟ್ ಗಳನ್ನು ಬುಕಿಂಗ್ ಕಾಯ್ದಿರಿಕೊಳ್ಳಬಹುದಾಗಿದೆ. ಸಾರ್ವಜನಿಕ ಪ್ರಯಾಣಿಕರು ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿಯೇ, ಪ್ರಯಾಣಿಸುವಂತೆ ಮತ್ತು ದೀಪಾವಳಿ ಹಬ್ಬದ ವಿಶೇಷ ಹೆಚ್ಚುವರಿ ಸಾರಿಗೆಗಳ ಪ್ರಯೋಜನ ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 ಕೆಎಸ್‌ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್

ಕೆಎಸ್‌ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗವು ದಕ್ಷಿಣ ಕನ್ನಡದ ಪ್ರಮುಖ ದೇವಾಲಯಗಳಿಗೆ ಸಂಪರ್ಕ ಕಲ್ಪಿಸಲು ವಾರಾಂತ್ಯದಲ್ಲಿ ಪ್ಯಾಕೇಜ್ ಟೂರ್‌ಗಳನ್ನು ಬಪರಿಚಯಿಸಿದೆ. ಈ ಪ್ಯಾಕೇಜ್‌ನಲ್ಲಿ ಕನಿಷ್ಠ 5ರಿಂದ 10 ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾದಲ್ಲಿ ಹೆಚ್ಚಿನ ಬಸ್‌ಗಳನ್ನು ಓಡಿಸಲು ತೀರ್ಮಾನಿಸಲಾಗಿದೆ. ಮಂಗಳೂರು ದಸರಾ ದರ್ಶನ ಪ್ಯಾಕೇಜ್ ಟೂರ್‌ನ ಯಶಸ್ಸಿನಿಂದ ಉತ್ತೇಜಿತವಾಗಿರುವ ಕೆಎಸ್‌ಆರ್‌ಟಿಸಿ ವಿಭಾಗವು ವಾರಾಂತ್ಯದ ಪ್ರವಾಸದ ಪ್ಯಾಕೇಜ್‌ಗಳನ್ನು ಆರಂಭಿಸಿದೆ.

English summary
North Western Karnataka Road Transport Corporation will operate 500 additional buses for Deepavali festival special
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X