NWKRTC Bus: 2 ನಗರಗಳ ಮಧ್ಯೆ 'ಮಲ್ಟಿ ಆಕ್ಸೆಲ್' AC ಬಸ್ ಸಂಚಾರ ಶುರು: ಸಮಯ, ದರ-ರಿಯಾಯಿತಿ ವೇಳಾಪಟ್ಟಿ? ಹೀಗಿದೆ

ಹುಬ್ಬಳ್ಳಿ, ಫೆಬ್ರವರಿ 08: ಸಾರ್ವಜನಿಕರ ನಿರಂತರ ಆಗ್ರಹ ಮತ್ತು ಬೇಡಿಕೆಗೆ ಮಣಿಸಿದ ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಯು ಎರಡು ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಮಲ್ಟಿ ಆಕ್ಸೆಲ್ ಹವಾನಿಯಂತ್ರಿತ ಬಸ್‌ಗಳ ಸಂಚಾರವನ್ನು ಆರಂಭಿಸಿದೆ.

ಹೌದು, NWKRTC ಸಂಸ್ಥೆಯು ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಗೊಮ್ಮಟ ನಗರಿ ವಿಜಯಪುರ ನಡುವೆ ಮತ್ತೆ ಎರಡು ಮಲ್ಟಿ ಆಕ್ಸೆಲ್ ಹವಾನಿಯಂತ್ರಿತ ಬಸ್‌ಗಳ ಸಂಚಾರವನ್ನು ಪ್ರಾರಂಭಿಸಿದೆ. ಈ ಕುರಿತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರು ಅಧಿಕೃತ ಮಾಹಿತಿ ನೀಡಿದ್ದಾರೆ.

NWKRTC Started Multi Axle Volvo Bus Between Hubli-Vijayapur, Know Timing, Price and Schedule

ಈ ಮೋದಲು ಹುಬ್ಬಳ್ಳಿಯಿಂದ ಇದೇ ಮಲ್ಟಿ ಆಕ್ಸೆಲ್ ಬಸ್‌ಗಳು ಗಡಿ ಜಿಲ್ಲೆ ಬೆಳಗಾವಿಗೆ ನಿಯಮಿತವಾಗಿ ಸಂಚಾರ ನಡೆಸುತ್ತಿದ್ದವು. ಪ್ರಯಾಣಿಕರ ಅನುಕೂಲಕ್ಕಾಗಿ ಬಿಡಲಾಗಿದ್ದ ಈ ವೋಲ್ವೊ ಎಸಿ ಬಸ್ಸುಗಳಿಗೆ ಜನರಿಂದ ವ್ಯಾಪಕ ಸ್ಪಂದನೆ ದೊರೆಯಿತು.

ಇದೀಗ ಇದೇ ಮಾದರಿಯಲ್ಲಿ ನಿಯಮಿತವಾಗಿ ಹುಬ್ಬಳ್ಳಿಯಿಂದ ಪ್ರಮುಖ ನಗರಗಳ ನಡುವೆ ಮಲ್ಟಿ ಅ್ಯಕ್ಸಲ್ ವೋಲ್ವೊ ಎಸಿ ಬಸ್ಸುಗಳ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿತ್ತು. ವಿಜಯಪುರಕ್ಕೆ ಬಸ್ ಬಿಡುವಂತೆ ಆಗ್ರಹಿಸಲಾಗಿತ್ತು.

NWKRTC Started Multi Axle Volvo Bus Between Hubli-Vijayapur, Know Timing, Price and Schedule

ಅದರಂತೆ ನಿಗಮವು ಮೊದಲ ಹಂತದಲ್ಲಿ ಹುಬ್ಬಳ್ಳಿ-ವಿಜಯಪುರ ಮಧ್ಯೆ 6 ಮಲ್ಟಿ ಆಕ್ಸೆಲ್ ವೋಲ್ವೊ ಎಸಿ ಬಸ್ಸುಗಳ ಸಂಚಾರ ಆರಂಭಿಸಿತ್ತು. ಈ ಬಸ್ಸುಗಳಿಗೆ ಸಾರ್ವಜನಿಕ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮಿತವ್ಯಯಕರ ಪ್ರಯಾಣ ದರದಲ್ಲಿ ಹವಾನಿಯಂತ್ರಣ ಸೌಲಭ್ಯ ದೊರೆಯುತ್ತಿರುವುದರಿಂದ ಪ್ರಯಾಣಿಕರಿಗೆ ಬಹಳಷ್ಟು ಅನಕೂಲವಾಗಿದೆ.

ನಂತರ ಇನ್ನಷ್ಟು ಬಸ್ಸುಗಳನ್ನು ಬಿಡುವಂತೆ ಸಾರ್ವಜನಿಕರು ಕೋರಿದ್ದರಿಂದ ಮತ್ತೆ ಎರಡು ವೋಲ್ವೊ ಬಸ್ ಗಳ ಸಂಚಾರ ಆರಂಭಿಸುವ ಮೂಲಕ ಹುಬ್ಬಳ್ಳಿ ಮತ್ತು ವಿಜಯಪುರ ಭಾಗದ ಸಾರ್ವಜನಿಕರಿಂದ ನಿರಂತರ ಬೇಡಿಕೆ ಪೂರೈಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಯಾಣದ ಹೊರಡುವ ಸಮಯ

ಈ ಬಸ್ಸುಗಳು ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಹೊರಟು ಹೊಸೂರು ಬಸ್ ನಿಲ್ದಾಣದ ಮೂಲಕ ಸಂಚರಿಸುತ್ತವೆ.

ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ನಿತ್ಯ ಬೆಳಗ್ಗೆ 6-20, 7-30, 8-15, 10-30, ಮಧ್ಯಾಹ್ನ 12-01, 1-30 ಸಂಜೆ 6-15, ಹಾಗೂ 6-45ಕ್ಕೆ ಹೊರಡಲಿವೆ.

ವಿಜಯಪುರದಿಂದ ಮರಳಿ ಹುಬ್ಬಳ್ಳಿಗೆ ಆಗಮಿಸುವ ಬಸ್ ಗಳ ಅಲ್ಲಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ ಬೆಳಗ್ಗೆ 6 ಗಂಟೆ, 11:10, ಮಧ್ಯಾಹ್ನ 12-45ಕ್ಕೆ, 2 ಗಂಟೆಗೆ, 3-45 ಮತ್ತು ಸಂಜೆ 5, 7-10 ಹಾಗೂ ರಾತ್ರಿ11-15ಕ್ಕೆ ಸಂಚಾರ ಆರಂಭಿಸಿ ಹುಬ್ಬಳ್ಳಿ ಬಂದು ತಲುಪುತ್ತವೆ.

ಮುಂಗಡ ಬುಕ್ಕಿಂಗ್: ರಿಯಾಯಿತಿ

https://www.ksrtc.in ಅಥವಾ KSRTC Mobile App ಹಾಗೂ ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಬಹುದು. ಒಂದೇ ಟಿಕೆಟ್ ನಲ್ಲಿ ನಾಲ್ಕು ಅಥವಾ ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಎರಡು ಬದಿ ಟಿಕೆಟ್ ಅಂದ್ರೆ ಒಂದು ಬದಿಯಿಂದ ಹೋಗುವುದು ಮತ್ತು ಮರಳಿ ಬರುವು ಪ್ರಯಾಣದ ಟಿಕೆಟ್ ಅನ್ನು ಕಾಯ್ದಿರಿಸುವವರಿಗೆ ಶೇಕಡಾ 10ರಷ್ಟು ರಿಯಾಯಿತಿ ನೀಡಲಾಗುವುದು ಎಂದು NWKRTC ತಿಳಿಸಿದೆ.

ಇನ್ನೂ ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಹುಬ್ಬಳ್ಳಿಯಿಂದ ಮತ್ತಿತರ ಪ್ರಮುಖ ನಗರಗಳಿಗೆ ಮಲ್ಟಿ ಆಕ್ಸೆಲ್ ಹವಾನಿಯಂತ್ರಿತ ಬಸ್ ಗಳ ಸಂಚಾರ ಆರಂಭಿಸುವ ಬಗ್ಗೆ ನಿರ್ಧರಿಸಲಾಗುತ್ತದೆ.

ಒಂದು ವೇಳೆ ಪೂರಕ ಸ್ಪಂದನೆ ವ್ಯಕ್ತವಾದರೆ ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ರಾಜ್ಯದ ಬೇರೆ ಬೇರೆ ನಗರಗಳಿಗೂ ಎಸಿ ಬಸ್‌ಗಳು ಸಂಚಾರ ಆರಂಭಿಲಿವೆ ಎಂದು ಎಚ್‌. ರಾಮನಗೌಡರ ಹೇಳಿದರು.

ಸಾಮಾನ್ಯ ಬಸ್‌ಗಳ ಜತೆ ಜತೆಗೆ ಈ ಬಸ್‌ಗಳಲ್ಲಿ ಜನರ ಓಡಾಟ ಹೆಚ್ಚಾಗುತ್ತಿದೆ. ಈ ಮೂಲಕ ಸಾರಿಗೆ ಇಲಾಖೆ ನೀಡುವ ಬಸ್ ವ್ಯವಸ್ಥೆ, ಸೇವೆಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತದ್ದಾರೆ. ಈ ಬಗ್ಗೆ ಸ್ವತಃ ಪ್ರಯಾಣಿಕರು ಸಂತಸ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+