NWKRTC Bus: ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳುವ ಭಕ್ತಾಧಿಗಳಿಗೆ ಶುಭ ಸುದ್ದಿ, ವಿಶೇಷ ಬಸ್ ಸೌಲಭ್ಯ
ಹುಬ್ಬಳ್ಳಿ, ನವೆಂಬರ್ 19: ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಅಪಾರ ಭಕ್ತರು ತೆರಳುವ ದರ್ಶನ ಪಡೆಯುವ ಸುಕ್ಷೇತ್ರ ಬೆಳಗಾವಿ ಜಿಲ್ಲೆ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ಭಕ್ತಾಧಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸಂಚಾರ ದಟ್ಟಣೆಯಲ್ಲಿ ತೆರಳುವ ಸಾರ್ವಜನಿಕರು ಸೇರಿದಂತೆ ಭಕ್ತರಿಗೆ ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು (NWKRTC) ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.
ವಿಶೇಷ ಬಸ್‌ಗಳ ಮೂಲಕ ಸೌದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲ ಕಲ್ಪಿಸಲಾಗಿದೆ. ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಹುಬ್ಬಳ್ಳಿಯಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ಬಸ್ಗಳ ಕಾರ್ಯಾಚರಣೆ ಮಾಡುತ್ತಿದೆ.

ಮುಂಬರಲಿರುವ ಛಟ್ಟಿ ಅಮವಾಸೆಯವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ದಂದು ಹುಬ್ಬಳ್ಳಿಯಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ಬಸ್ ಗಳಲ್ಲಿ ಭಕ್ತರು ಸಂಚರಿಸಬಹುದು. ಹುಣ್ಣಿಮೆ, ಅವಮಾಸ್ಯೆ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಈ ದೇವಸ್ಥಾನ ಭಕ್ತರಿಂದ ತುಂಬಿರುತ್ತದೆ.
ನಿರೀಕ್ಷೆಗೆ ಮೀರಿ ಸ್ಪಂದನೆ: ಮತ್ತೆ ಬಸ್ ವ್ಯವಸ್ಥೆ
ಈ ಹಿಂದೆ ಶೀಗಿ ಹುಣ್ಣಿಮೆ ಹಾಗೂ ದೀಪಾವಳಿ ಅಮವಾಸೆಯ ಪ್ರಯುಕ್ತ ಸೌದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಪಿಸಲಾಗಿದ್ದ ವಿಶೇಷ ನೇರ ಬಸ್ ಗಳಿಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದರು.
ಭಕ್ತರ ಕೋರಿಕೆಯಂತೆ ಇದೇ ನವೆಂಬರ್ 19ರಂದು ಮಂಗಳವಾರ 18 ವಿಶೇಷ ಹೆಚ್ಚುವರಿ ಬಸ್ ಗಳನ್ನು ಓಡಿಸಲಾಯಿತು. ಮುಂದಿನ ಛಟ್ಟಿ ಅಮವಾಸೆಯ ವರೆಗೆ ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಅಂದರೆ ನವೆಂಬರ್ 22, 26 ಹಾಗೂ 29 ರಂದು ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣದಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ನೇರ ಬಸ್ಸುಗಳ ಓಡಾಡಲಿವೆ. ಪ್ರಯಾಣಿಕರು ಅಗತ್ಯ ಮಾಹಿತಿ ಪಡೆದು ಈ ಸೌಲಭ್ಯದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ 20ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ತುರ್ತುಪಾಲನಾ ಕಾಮಗಾರಿ ಹಿನ್ನೆಲೆಯಲ್ಲಿ ನವಲಗುಂದ, ಕುಂದಗೋಳ ಹಾಗೂ ಹುಬ್ಬಳ್ಳಿ ತಾಲೂಕಿನ ವಿವಿಧೆಡೆ ನ.20ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಯಮನೂರ, ಪಡೆಸೂರ, ಆರೇಕುರಹಟ್ಟಿ, ಕರ್ಲವಾಡ, ಕಾಲವಾಡ, ಅಣ್ಣಿಗೇರಿ ಪಟ್ಟಣ, ಕೊಂಡಿಕೊಪ್ಪ, ಸಾಸ್ವಿಹಳ್ಳಿ, ಹಳ್ಳಿಕೇರಿ, ಅಡ್ನೂರ, ಕಿತ್ತೂರ, ನಾವಳ್ಳಿ, ತುಪ್ಪದಕುರಹಟ್ಟಿ, ನವಲಗುಂದದ ಇಬ್ರಾಹಿಂಪೂರ, ಶಲವಡಿ, ಖನ್ನೂರ, ಭೋಗಾನೂರ, ನಾಯ್ಕನೂರ, ದಾಟನಾಳ, ಚಿಲಕವಾಡ, ಬೆಳಹಾರ, ನಾಗರಹಳ್ಳಿ.
ಬಲ್ಲರವಾಡ, ಕುಮಾರಗೊಪ್ಪ, ಸೈದಾಪೂರ, ಕುಂದಗೋಳ, ಸಂಶಿ ಮತ್ತು ಗುಡಗೇರಿ ವಿದ್ಯುತ್ ಮಾರ್ಗಗಳಲ್ಲಿ ಬರುವ ದ್ಯಾವನೂರ, ಕುಬಿಹಾಳ, ಹಂಚನಾಳ, ಯಲಿವಾಳ, ಚವರಗುಡ್ಡ, ರಾಮಾಪುರ, ಚನ್ನಾಪುರ, ಕಟ್ನೂರು, ಬಾವನೂರು, ಗಿರಿಯಾಲ, ಬುಡರಸಿಂಗಿ, ಬೆಳಗಲಿ, ಬೊಮ್ಮಸಮುದ್ರ, ಇನಾಮಕೊಪ್ಪ, ಬೆಟದೂರು, ಚಿಕ್ಕಗುಂಜಳ, ಹಿರೇಗುಂಜಳ, ಪಶುಪತಿಹಾಳ, ರೊಟ್ಟಿವಾಡ, ರಟ್ಟಿಗೇರಿ, ಗೌಡಗೇರಿ, ಹುಬ್ಬಳ್ಳಿ ಗ್ರಾಮೀಣ ಉಪವಿಭಾಗದ ಬ್ಯಾಹಟ್ಟಿ, ಕಿರೇಸೂರು, ಸುಳ್ಳ, ಹೆಬಸೂರು, ಕುಸುಗಲ್ಲ. ಅಂಚಟಗೇರಿ, ತಿಮ್ಮಸಾಗರ, ಇನಾಂಇರಾಪೂರ, ಕುಂದಗೋಳ ಕ್ರಾಸ್, ಶಿರಗುಪ್ಪಿ, ಬಂಡಿವಾಡ ಸೇರಿದಂತೆ ಸುತ್ತಮುತ್ತಲಿನ ಊರುಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಹೆಸ್ಕಾಂ ಪ್ರಕಟಣೆ ಮೂಲಕ ನೀಡಿದೆ.












Click it and Unblock the Notifications