ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ನಗರಕ್ಕೆ ವೋಲ್ವೊ ಬಸ್ ಸೇವೆ

ಹುಬ್ಬಳ್ಳಿ, ಅಕ್ಟೋಬರ್ 21 : ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 2 ವೋಲ್ವೊ ಬಸ್‌ಗಳ ಸಂಚಾರವನ್ನು ಆರಂಭಿಸಿದೆ. ಇದರಿಂದಾಗಿ ವಿಮಾನ ನಿಲ್ದಾಣದಿಂದ ನಗರಕ್ಕೆ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಧಾರವಾಡ ಜಿಲ್ಲಾ ಉಸ್ತುಸವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ವೋಲ್ವೊ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದರು. ವಿಮಾನ ನಿಲ್ದಾಣದಿಂದ ಈ ಬಸ್‌ಗಳು ಹಳೇ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಸಿ.ಬಿ.ಟಿ. ವರೆಗೆ ಸಂಚಾರ ನಡೆಸಲಿವೆ.

ಈ ಬಸ್ ಸಂಚಾರದಿಂದಾಗಿ ವಿಮಾಣ ನಿಲ್ದಾಣದಿಂದ ಹೆಚ್ಚು ಮೊತ್ತ ನೀಡಿ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವುದು ತಪ್ಪಲಿದೆ. 17 ಶೆಡ್ಯೂಲ್‌ಗಳಲ್ಲಿ ನಗರ ಸಾರಿಗೆ ಬಸ್‌ಗಳು ವಿಮಾನ ನಿಲ್ದಾಣದಿಂದ ಸಂಚಾರ ನಡೆಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

NWKRTC begins volvo bus service from Hubballi airport to busstand

ಪ್ರಯಾಣ ದರ : ಹೊಸ ಬಸ್ ನಿಲ್ದಾಣಕ್ಕೆ 20 ರೂ., ಹಳೆ ಬಸ್ ನಿಲ್ದಾಣಕ್ಕೆ 25ರೂ., ರೈಲ್ವೆ ನಿಲ್ದಾಣ ಮತ್ತು ಸಿಬಿಟಿಗೆ 25 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ. ಇನ್ನು ಮಿನಿ ಬಸ್‌ಗಳು ಸಹ ಸಂಚಾರ ನಡೆಸಲಿವೆ.

ಮಿನಿ ಬಸ್ಸಿನಲ್ಲಿ ಹೊಸ ಬಸ್ ನಿಲ್ದಾಣಕ್ಕೆ 12 ರೂ., ಹಳೆ ಬಸ್ ನಿಲ್ದಾಣಕ್ಕೆ 13 ರೂ., ರೈಲ್ವೆ ನಿಲ್ದಾಣಕ್ಕೆ ಮತ್ತು ಸಿಬಿಟಿಗೆ 15 ರೂ. ದರ ನಿಗದಿ ಮಾಡಲಾಗಿದೆ.

ವೇಳಾಪಟ್ಟಿ

* ವಿಮಾನ ನಿಲ್ದಾಣದಿಂದ ರೈಲ್ವೆ ಸ್ಟೇಷನ್ : ಬೆಳಗ್ಗೆ 9.30, ಮಧ್ಯಾಹ್ನ 12.30, ಮಧ್ಯಾಹ್ನ 2, ಸಂಜೆ 4.30, ರಾತ್ರಿ 8.15.

* ವಿಮಾನ ನಿಲ್ದಾಣ-ಸಿಬಿಟಿ : ಬೆಳಗ್ಗೆ 6.45, ಬೆಳಗ್ಗೆ 7.55, ಬೆಳಗ್ಗೆ 9.20, ಬೆಳಗ್ಗೆ 10.30, ಬೆಳಗ್ಗೆ 11.40, ಮಧ್ಯಾಹ್ನ 12.50, ಮಧ್ಯಾಹ್ನ 2.10, ಮಧ್ಯಾಹ್ನ 3.25, ಮಧ್ಯಾಹ್ನ 4.35, ಸಂಜೆ 6.20, ಸಂಜೆ 7.30, ಸಂಜೆ 8.45

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+