ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ವಿಶೇಷ ಬಸ್ ಪಾಸ್ ಘೋಷಣೆ ಮಾಡಿದ NWKRTC

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 09; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ) ವಿಶೇಷವಾದ ಬಸ್ ಪಾಸ್ ಘೋಷಣೆ ಮಾಡಿದೆ. ಡಿಸೆಂಬರ್ 15ರಿಂದ ಈ ಬಸ್ ಪಾಸ್ ಜಾರಿಗೆ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಜತ ಮಹೋತ್ಸವದ ಕೊಡುಗೆಯಾಗಿ ಈ ಆಕರ್ಷಕ ಬಸ್ ಪಾಸ್ ಘೋಷಣೆ ಮಾಡಿದೆ. ಈ ಪಾಸ್ ಮೂಲಕ 20 ದಿನಗಳ ಪ್ರಯಾಣ ವೆಚ್ಚದಲ್ಲಿ 32 ದಿನಗಳು ಪ್ರಯಾಣಿಸಲು ಅವಕಾಶವಿದೆ.

ಶಿಗ್ಗಾವಿಯಲ್ಲಿ 8 ಕೋಟಿ ರೂ. ವೆಚ್ಚದ ನೂತನ ಬಸ್ ಘಟಕಕ್ಕೆ ಶಂಕುಸ್ಥಾಪನೆಶಿಗ್ಗಾವಿಯಲ್ಲಿ 8 ಕೋಟಿ ರೂ. ವೆಚ್ಚದ ನೂತನ ಬಸ್ ಘಟಕಕ್ಕೆ ಶಂಕುಸ್ಥಾಪನೆ

NWKRTC Announces Special Monthly Bus Pass As A Silver Jubilee Gift

ಸಂಸ್ಥೆಯ ವಾಹನದ ಮೂಲಕ ಪ್ರತಿದಿನ ಸಂಚರಿಸುವ ಜನರ ಅನುಕೂಲಕ್ಕಾಗಿ ಮಾಸಿಕ ಬಸ್ ಪಾಸ್ ಅನ್ನು ಆಕರ್ಷಕ ಬೋನಸ್‌ನೊಂದಿಗೆ ಜಾರಿಗೊಳಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಸಂಸ್ಥೆ ಮಾಹಿತಿ ನೀಡಿದೆ.

ಬೆಂಗಳೂರು-ನೀಲಕ್ಕಲ್ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್; ದರ, ಸಮಯ ಬೆಂಗಳೂರು-ನೀಲಕ್ಕಲ್ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್; ದರ, ಸಮಯ

ಸಂಸ್ಥೆಯ ಬಗ್ಗೆ; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ) ಉತ್ತರ ಕರ್ನಾಟಕ ಭಾಗದ ಜನತೆಗೆ ದಕ್ಷ ಉತ್ತಮ, ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಮಿತವ್ಯಯ ಸಾರಿಗೆ ಸೌಲಭ್ಯವನ್ನು ಒದಗಿಸುವ ಮೂಲ ಉದ್ದೇಶದಿಂದ 1/11/1997 ಕರ್ನಾಟಕ ರಾಜ್ಯೋತ್ಸವದಂದು ಮಾತೃ ಸಂಸ್ಥೆಯಾದ ಕರಾರಸಾಸಂಸ್ಥೆಯಿಂದ ವಿಭಜನೆಗೊಂಡು ರಸ್ತೆ ಸಾರಿಗೆ ಸಂಸ್ಥೆ ಕಾಯ್ದೆ 1950 ರಡಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸ್ಥಾಪನೆಗೊಂಡಿತು.

ಬೆಂಗಳೂರಿಗರ ಪ್ರಯಾಣ ಸುಲಭಗೊಳಿಸಲಿರುವ ಈ ನಾಲ್ಕು ಮೆಟ್ರೋ ಮಾರ್ಗಗಳ ಬಗ್ಗೆ ತಿಳಿಯಿರಿಬೆಂಗಳೂರಿಗರ ಪ್ರಯಾಣ ಸುಲಭಗೊಳಿಸಲಿರುವ ಈ ನಾಲ್ಕು ಮೆಟ್ರೋ ಮಾರ್ಗಗಳ ಬಗ್ಗೆ ತಿಳಿಯಿರಿ

ಸಂಸ್ಥೆಯ ವ್ಯಾಪ್ತಿಯಲ್ಲಿ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳಿರುತ್ತವೆ. ಸಂಸ್ಥೆಯ ವ್ಯಾಪ್ತಿಯು ಸಂಪೂರ್ಣ ಕಂದಾಯ ಜಿಲ್ಲೆಗಳಿಂದ ಕೂಡಿದ್ದು, ಸಂಸ್ಥೆಯ ವ್ಯಾಪ್ತಿಯ ಎಲ್ಲಾ ಸಂಚಾರ ಯೋಗ್ಯ ರಸ್ತೆಗಳಿರುವ ಹಳ್ಳಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಲಾಗಿದೆ.

ಸಂಸ್ಥೆಯ ಕೇಂದ್ರ ಕಛೇರಿಯು ಹುಬ್ಬಳ್ಳಿಯಲ್ಲಿದ್ದು, ಸಂಸ್ಥೆಯ ಆಡಳಿತ ವ್ಯಾಪ್ತಿಯಲ್ಲಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಶಿರಸಿ, ಬಾಗಲಕೋಟೆ, ಗದಗ, ಚಿಕ್ಕೋಡಿ, ಹಾವೇರಿ, ಹುಬ್ಬಳ್ಳಿ-ಧಾರವಾಡ ನಗರಸಾರಿಗೆ ವಿಭಾಗ ಹೀಗೆ ಒಟ್ಟು 9 ವಿಭಾಗೀಯ ಕಛೇರಿಗಳನ್ನು, 55 ಘಟಕಗಳನ್ನು, ಹುಬ್ಬಳ್ಳಿಯಲ್ಲಿ ಒಂದು ಪ್ರಾದೇಶಿಕ ಕಾರ್ಯಾಗಾರ ಮತ್ತು ಒಂದು ಪ್ರಾದೇಶಿಕ ತರಬೇತಿ ಕೇಂದ್ರವನ್ನು ಹೊಂದಿದೆ.

English summary
North Western Karnataka Road Transport Corporation (NWKRTC) announced special monthly bus pass as a silver jubilee gift.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X